
ಬೆಂಗಳೂರು, (ಮಾ.22): ಕರ್ನಾಟಕದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇವತ್ತು ಅಂದ್ರೆ ಭಾನುವಾರ ಒಂದೇ ದಿನ ಕರ್ನಾಟಕದಲ್ಲಿ 6 ಕೊರೋನಾ ವೈರಸ್ ಸೋಂಕು ಕೇಸ್‌ಗಳು ಪತ್ತೆಯಾಗಿದ್ದು, ತೀವ್ರ ಆತಂಕ ಸೃಷ್ಟಿಸಿದೆ.
ಶನಿವಾರ ಒಂದೇ ದಿನದಲ್ಲಿ 5 ಕೊರೋನಾ ಸೋಂಕು ಪ್ರಕರಣಗಳು ಕಂಡುಬಂದಿದ್ದವು. ಆದ್ರೆ, ಇಂದು ಒಂದೇ ದಿನದಕ್ಕೆ ಬರೊಬ್ಬರಿ ಆರು ಜನರಿಗೆ ಸೋಂಕು ತಗುಲಿರುವುದು ದೃಢವಾಗಿದೆ.
ಸೋಮವಾರ ನಡೆಯಬೇಕಿದ್ದ ಪಿಯುಸಿ ಪರೀಕ್ಷೆ ಮುಂದೂಡಿಕೆ
ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಈ ಮೂಲಕ ಕೊರೋನಾ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.
ರೋಗಿ 21
- 35 ವರ್ಷ ವಯಸ್ಸಿನ ಧಾರವಾಡ ಮೂಲದ ಪುರುಷ ರೋಗಿ
- ದುಬೈನಿಂದ ಗೋವಾ ಮೂಲಕ 11 ಮಾರ್ಚ್ ಪ್ರಯಾಣ ಮಾಡಿದ್ದರು
ರೋಗಿ 22
- 64 ವರ್ಷದ ಮಹಿಳೆ ಮೆಕ್ಕಾ ಪ್ರವಾಸದಿಂದ ಆಗಮಿಸಿದ್ದರು
- ತಮ್ಮ ಮಗ ರೋಗಿ 19 ಜೊತೆಯಲ್ಲೇ ಮೆಕ್ಕಾದಿಂದ ಪ್ರಯಾಣಿಸಿದ್ದರು.
- ಮಾರ್ಚ್ 14 ರಂದು ಹೈದರಾಬಾದ್ ನಿಂದ ಹಿಂದುಪುರಕ್ಕೆ ರೈಲಿನ ಮೂಲಕ ಆಗಮಿಸಿದ್ದರು
- ಹಿಂದುಪುರದಿಂದ ಗೌರಿಬಿದನೂರಿಗೆ 15 ಮಾರ್ಚ್ ಬಸ್ಸಿನಲ್ಲಿ ಪ್ರಯಾಣಿಸಿದ್ದರು
ರೋಗಿ 23
- ಬೆಂಗಳೂರು ಮೂಲದ 36 ವರ್ಷದ ಮಹಿಳೆ ಗೆ ಕೊರೋನ ದೃಢ
- ಸ್ವಿಟ್ಜರ್ಲೆಂಡ್ ನಿಂದ 9 ಮಾರ್ಚ್ ಬೆಂಗಳೂರಿಗೆ ಮರಳಿದ್ದರು
ರೋಗಿ 24
- ಬೆಂಗಳೂರು ಮೂಲದ 27 ವರ್ಷದ ಯುವಕನಿಗೆ ಕೊರೋನಾ ಸೋಂಕು ದೃಢ
- ಮಾರ್ಚ್ 14 ರಂದು ಜರ್ಮನಿಯಿಂದ ಮರಳಿದ್ದ ಯುವಕ
ರೋಗಿ 25
- ಬೆಂಗಳೂರು ಮೂಲದ 51 ವರ್ಷದ ಪುರುಷನಲ್ಲಿ ಕೊರೋನ ಸೋಂಕು ದೃಢ
- ಲಂಡನ್ನಿನಿಂದ ಮಾರ್ಚ್ 13 ರಂದು ಮರಳಿದ್ದರು ವ್ಯಕ್ತಿ
ರೋಗಿ 26
- ಭಟ್ಕಳ ಮೂಲದ 21 ವರ್ಷದ ವ್ಯಕ್ತಿಯಲ್ಲಿ ಕೊರೋನಾ ದೃಢ
- ಮಾರ್ಚ್ 19 ರಂದು ದುಬೈನಿಂದ ಮರಳಿದ್ದರು
- ಸದ್ಯ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ