ಮಂಗಳೂರಲ್ಲಿ ಕೊರೋನಾ ಕೇಸ್ ಪತ್ತೆ: ಕರುನಾಡಲ್ಲೂ ಏರಿಕೆಯಾಗ್ತಿದೆ ಸೊಂಕಿತರ ಸಂಖ್ಯೆ

By Suvarna NewsFirst Published Mar 22, 2020, 6:30 PM IST
Highlights

ನಿನ್ನೆ ಅಂದ್ರೆ ಶನಿವಾರ ಒಂದೇ ದಿನ 5 ಕೊರೋನಾ ವೈರಸ್ ಪಾಸಿಟಿವ್ ಕೇಸ್ ಪತ್ತೆಯಾಗಿದ್ದುವು. ಇಂದು (ಭಾನುವಾರ) ಸಹ ಒಂದು ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಅದು ಮಂಗಳೂರಿನಲ್ಲಿ.

ಮಂಗಳೂರು, (ಮಾ.22): ಮಹಾಮಾರಿ ಕೊರೋನಾ ವೈರಸ್ ಇದೀಗ ದಕ್ಷಿಣ ಕನ್ನಡಕ್ಕೂ ವ್ಯಾಪಿಸಿದೆ. ಮಾ.19 ರಂದು ದುಬೈನಿಂದ ಮಂಗಳೂರಿಗೆ ಬಂದಿದ್ದ ಯುವಕನಿಗೆ ಕೊರೋನಾ ಇರುವುದು ದೃಢವಾಗಿದೆ.

"

ಸೋಮವಾರ ನಡೆಯಬೇಕಿದ್ದ ಪಿಯುಸಿ ಪರೀಕ್ಷೆ ಮುಂದೂಡಿಕೆ

ಭಟ್ಕಳ ಮೂಲದ 22 ವರ್ಷದ ಯುವಕನಿಗೆ ಸೋಂಕು ತಗುಲಿರುವುದು ಖಚಿತವಾಗಿದ್ದು, ಸದ್ಯ ಆತನನ್ನ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಸ್ಪಷ್ಟಪಡಿಸಿದ್ದಾರೆ.

ಮಾ.19 ರಂದು ಸ್ಪೈಸ್ ಜೆಟ್ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದು. ಸ್ಕ್ರೀನಿಂಗ್ ವೇಳೆ ಕೊರೋನಾ ಸೋಂಕು ಲಕ್ಷಣಗಳು ಕಂಡುಬಂದಿವೆ. ಕೂಡಲೇ ಯುವಕನನ್ನು ಏರ್ ಪೋರ್ಟ್ ನಿಂದ ಅಂಬ್ಯುಲೆನ್ಸ್ ಮೂಲಕ ವೆನ್ಲಾಕ್ ಸಾಗಿಸಲಾಗಿತ್ತು. 

ಕರ್ನಾಟಕದಲ್ಲಿ ಶನಿವಾರ ಒಂದೇ ದಿನ 5 ಕೊರೋನಾ ಕೇಸ್: ಎಲ್ಲೆಲ್ಲಿ?

ಬಳಿಕ ಗಂಟಲಿನ ಮಾದರಿ ಪರೀಕ್ಷೆಗೆ ಕಳುಹಿಸಸಲಾಗಿತ್ತು. ಇದೀಗ ಪರೀಕ್ಷೆಯ ವರದಿ ಬಂದಿದ್ದು, ಯುವಕನಿಗೆ ಸೋಂಕು ತಗುಲಿರುವುದು ದೃಢವಾಗಿದೆ.

click me!