ಕೊರೋನಾಗೆ 1 ವಾರ ಅಘೋಷಿತ ಕರ್ನಾಟಕ ಬಂದ್ : ಏನೇನು ಇರಲ್ಲ..?

By Suvarna News  |  First Published Mar 13, 2020, 3:06 PM IST

ವಿಶ್ವದಾದ್ಯಂತ ಸಾವಿರಾರು ಜನರನ್ನು ಬಲಿ ಪಡೆದಿರುವ ಮಾರಕ ಕೊರೋನಾ ವೈರಸ್ ತಡೆಗಟ್ಟಲು ಕರ್ನಾಟಕ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಒಂದು ವಾರಗಳ ಕಾಲ ಕರ್ನಾಟಕದಲ್ಲಿ ಹಲವು ಸೇವೆಗಳ ಬಂದ್ ಗೆ ಸೂಚಿಸಿದೆ. 


ಬೆಂಗಳೂರು [ಮಾ.13] : ವಿಶ್ವದಾದ್ಯಂತ ಕೊರೋನಾ ಮಹಾಮಾರಿ ಮರಣ ಮೃದಂಗ ಬಾರಿಸುತ್ತಿದ್ದು, ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಮುಂಜಾಗೃತ ಕ್ರಮವಾಗಿ ಅನೇಕ ರೀತಿಯ ನಿರ್ಬಂಧ ವಿಧಿಸಲಾಗಿದೆ. 

"

Latest Videos

ಬೆಂಗಳೂರಲ್ಲಿ ಕೊರೋನಾ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದ್ದಾರೆ.  ಕೊರೋನಾ ತಡೆಯುವ ನಿಟ್ಟಿನಲ್ಲಿ ಮಾರ್ಚ್ 14 ರಿಂದ ರಾಜ್ಯ ಸಂಪೂರ್ಣ ಸ್ತಬ್ಧ ಮಾಡಲು ಸೂಚನೆ ನೀಡಿದ್ದಾರೆ.
 

       ಏನೇನು ಸೇವೆಗಳು ಬಂದ್ 

  • ಒಂದು ವಾರದ ಮಟ್ಟಿಗೆ ಬಾರ್, ಪಬ್ ಬಂದ್ ಮಾಡಲು ಸೂಚಿಸಿದ್ದಾರೆ.
  •  ರಾಜ್ಯದ ವಿಶ್ವ ವಿದ್ಯಾಲಯಗಳೂ ಒಂದು ವಾರ ಬಂದ್
  • ಶಾಲಾ-ಕಾಲೇಜುಗಳಿಗೆ ರಜೆ
  • ರಾಜ್ಯಾದ್ಯಂತ  ಸಾರ್ವಜನಿಕ ಕಾರ್ಯಕ್ರಮ - ಬರ್ತಡೇ -ಎಂಗೇಜ್ ಮೆಂಟ್ ಬಂದ್
  • ಸರಳ ರೀತಿಯ ಮದುವೆಗೆ ಸೂಚನೆ
  • ಮದುವೆಗೆ 100 ಜನಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ
  • ಯಾವುದೇ ಕಾರ್ಯಕ್ರಮಗಳಿಗೂ ಜಿಲ್ಲಾಧಿಕಾರಿಯಿಂದ ಅನುಮತಿ ಕಡ್ಡಾಯ
  • ವಿದೇಶ ಪ್ರವಾಸಕ್ಕೆ ತೆರಳದಂತೆ ಸೂಚನೆ
  • ಎಲ್ಲಾ ಮಾದರಿಯ ಕ್ರೀಡೆಗಳಿಗೂ ನಿಷಿದ್ಧ
  • ಒಂದು ವಾರಗಳ ಕಾಲ ಮಾಲ್ ಗಳು ಬಂದ್ 
  • ವಸ್ತು ಪ್ರದರ್ಶನಗಳು ರದ್ದು
  • ಪರೀಕ್ಷೆಗಳು ಎಂದಿನಂತೆ ನಡೆಯಲಿವೆ
  • ಜಾತ್ರೆ ನಡೆಸದಂತೆ ಮುಖ್ಯಮಂತ್ರಿ ಸೂಚನೆ
  • ಸಮ್ಮರ್ ಕ್ಯಾಂಪ್ ನಡೆಸದಂತೆ ಆದೇಶ

ರಾಜ್ಯದ ಜನರಿಗಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಲ್ಲಿ 5ನೇ ಕೊರೋನಾ ಕೇಸ್ : ಗೂಗಲ್ ಉದ್ಯೋಗಿಗೆ ಸೋಂಕು...

ಮಾರ್ಚ್ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!