ಅತಿಥಿ ಶಿಕ್ಷಕರ ವೇತನ ಹೆಚ್ಚಳಕ್ಕೆ ತಿಲಾಂಜಲಿ ಇಟ್ಟರೇ ಶಿಕ್ಷಣ ಸಚಿವ ಮಧು ಬಂಗಾರಪ್ಪ.?

By Sathish Kumar KH  |  First Published Dec 9, 2024, 12:43 PM IST

ರಾಜ್ಯದಲ್ಲಿ ಅತಿಥಿ ಶಿಕ್ಷಕರು ಪ್ರತಿಭಟನೆ ಆರಂಭಿಸುವ ಮುನ್ನವೇ ಶಿಕ್ಷಣ ಸಚಿವರು ಅತಿಥಿ ಶಿಕ್ಷಕರ ಗೌರವ ಧನ ಹೆಚ್ಚಳದ ಪ್ರಸ್ತಾವನೆಗೆ ತಾತ್ಕಾಲಿಕ ತಿಲಾಂಜಲಿ ಇಟ್ಟಿದ್ದಾರೆ.


ವಿಧಾನ ಪರಿಷತ್ (ಡಿ.09): ಕೆಲವೊಂದು ದೇಶಗಳಲ್ಲಿ ಭಾವಿ ಪ್ರಜೆಗಳನ್ನು ನಿರ್ಮಿಸುವ ಶಿಕ್ಷಕರಿಗೆ ಆ ದೇಶದ ಅಧ್ಯಕ್ಷನಿಗೆ ಕೊಡುವಷ್ಟು ಸಮಾನ ವೇತನವನ್ನೇ ಕೊಡುತ್ತಾರೆ. ಆದರೆ, ನಮ್ಮ ದೇಶ ಮತ್ತು ರಾಜ್ಯದಲ್ಲಿ ಬಡ ಶಿಕ್ಷಕರನ್ನು ಮಾಡಲಾಗಿದೆ. ಮಾಸಿಕ 10 ಸಾವಿರ ಗೌರವಧನ ನೀಡಲಾಗುತ್ತಿದೆ. ಇದನ್ನು ಹೆಚ್ಚಳ ಮಾಡಿ ಎಂದರೆ ವಿಧಾನ ಪರಿಷತ್‌ನಲ್ಲಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮುಂದೆ ಪರಿಶೀಲನೆ ಮಾಡಲಾಗುತ್ತದೆ ಎಂದು ಗೌರವ ಧನ ಹೆಚ್ಚಳಕ್ಕೆ ತಿಲಾಂಜಲಿ ಇಟ್ಟಿದ್ದಾರೆ. ಆದರೆ, ಡಿ.13ರಂದು ಅತಿಥಿ ಶಿಕ್ಷಕರು ಬೆಳಗಾವಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುತ್ತಿರುವುದಕ್ಕೆ ಬೆಲೆ ಕೊಡುವುದಿಲ್ಲ ಎಂಬ ಮಾಹಿತಿಯನ್ನು ರವಾನಿಸಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ ಅವರು, ಅತಿಥಿ ಶಿಕ್ಷಕರ ವೇತನ ಹೆಚ್ಚಳ ‌ಮಾಡುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. 2020ರಲ್ಲಿ ಇವರ ವೇತನ ಹೆಚ್ಚಳ ಮಾಡಲಾಗಿತ್ತು. ಈಗ ಮತ್ತೆ ಸಂಬಳ ಹೆಚ್ಚಳ ಮಾಡಲು ಆರ್ಥಿಕ ಇಲಾಖೆಗೆ ಕಳಿಸಿಕೊಡಲಾಗಿತ್ತು. ಆದರೆ, ಆರ್ಥಿಕ ಇಲಾಖೆ ಇದಕ್ಕೆ ಅನುಮೋದನೆ‌ ನೀಡಿಲ್ಲ. ಪರಿಶೀಲನೆ ಮಾಡಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ನಮ್ಮ ರಾಜ್ಯದಲ್ಲಿ ಅತಿ ಕಡಿಮೆ ಗೌರವ ಧನಕ್ಕೆ ಕೆಲಸ ಮಾಡುತ್ತಿರುವ ಒಂದೇ ಒಂದು ವರ್ಗವೆಂದರೆ ಅದು ಅತಿಥಿ ಶಿಕ್ಷಕರ ವರ್ಗವಾಗಿದೆ.

Tap to resize

Latest Videos

ಇದನ್ನು ಬಿಟ್ಟು ಕೂಲಿ ಕೆಲಸ ಮಾಡುವವನಿಗೆ ಸಿಗುವಷ್ಟು ಕನಿಷ್ಠ ವೇತನವನ್ನೂ ಕೊಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ಮನೆಯಲ್ಲಿರುವ ಮಹಿಳೆಯರಿಗೆ ಮಾಸಿಕ 2,000 ರೂ., ಉಚಿತ ಪ್ರಯಾಣ ಭಾಗ್ಯಕ್ಕಾಗಿ ಸಾವಿರಾರು ಕೋಟಿ ಖರ್ಚು ಮಾಡುವ ಸರ್ಕಾರಕ್ಕೆ ಭವಿಷ್ಯದ ಭಾವಿ ಪ್ರಜೆಗಳನ್ನು ನಿರ್ಮಾಣ ಮಾಡುವ ಶಿಕ್ಷಕರಾಗಿ ಕೆಲಸ ಮಾಡುವವರಿಗೆ ಕನಿಷ್ಠ ವೇತನವಾಗಿರುವ 18 ಸಾವಿರ ವೇತನವನ್ನೂ ಕೊಡುತ್ತಿಲ್ಲ. ಸರ್ಕಾರದ ಈ ಜಾಣ ಕುರುಡುತನಕ್ಕೆ ಹಾಗೂ ನಿರುದ್ಯೋಗಿಗಳನ್ನು ತುಚ್ಛವಾಗಿ ನಡೆಸಿಕೊಳ್ಳುವುದಕ್ಕೆ ಮಿತಿಯೇ ಇಲ್ಲದಂತಾಗಿದೆ.

ಇದನ್ನೂ ಓದಿ: ಇಂದಿನಿಂದ ಬೆಳಗಾವಿ ಚಳಿಗಾಲದ ಅಧಿವೇಶನ; 15 ವಿದೇಯಕ ಮಂಡನೆ ಸಾಧ್ಯತೆ, ಸರ್ಕಾರಕ್ಕೆ 3004 ಪ್ರಶ್ನೆ

ಅತಿಥಿ ಶಿಕ್ಷಕರಿಗೆ ಹೆಣ್ಣು ಸಿಗುತ್ತಿಲ್ಲ: 
ಸಾಮಾನ್ಯವಾಗಿ ಅತಿಥಿ ಶಿಕ್ಷಕರಾಗಿ ಕೆಲಸ ಮಾಡುವವರು ಮಾಸಿಕ ಕೇವಲ 10 ಸಾವಿರ ಗೌರವ ಧನ ನೀಡಿದರೆ ಅವರಿಗೆ ತಮ್ಮನ್ನು ತಾವು ನೋಡಿಕೊಳ್ಳುವುದಕ್ಕೆ ಈ ಹಣ ಸಾಲುವುದಿಲ್ಲ. ಶಾಲೆಗೆ ಹೋಗಬೇಕೆಂದರೆ ಉತ್ತರ ಡ್ರೆಸ್ ಕೋಡ್ ಹಾಗೂ ಶುಚಿತ್ವ ಹೊಂದಿರಬೇಕು. ಮಕ್ಕಳ ಜ್ಞಾನಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗಳು ಬಂದರೂ ಅವುಗಳಿಗೆ ಉತ್ತರಿಸುವಷ್ಟು ಜ್ಞಾನ ಹೊಂದಿರಬೇಕೆಂದು ಕೆಲವೊಂದು ಪುಸ್ತಕಗಳನ್ನು ಖರೀದಿ ಮಾಡಿ ಅಭ್ಯಾಸ ಮಾಡಬೇಕು. ಉಳದಿಂತೆ ಶಾಲಾ ಕೆಲಸಕ್ಕಾಗಿ ಮೊಬೈಲ್ ನಿರ್ವಹಣೆಗೆ ರೀಚಾರ್ಜ್, ಬಸ್ ಪ್ರಯಾಣ ವೆಚ್ಚ, ಅನಾರೋಗ್ಯ ಬಂದಾಗ ಚಿಕಿತ್ಸೆ ಸೇರಿದಂತೆ ಎಲ್ಲ ವೆಚ್ಚಗಳನ್ನು ಭರಿಸುವುದಕ್ಕೆ ಸರ್ಕಾರ ಕೊಡುವ ಗೌರವ ಧನ ಸಾಲುವುದೇ ಇಲ್ಲ. ಇನ್ನು ಮನೆಯ ಯಜಮಾನಿಗೆ ಸರ್ಕಾರ ಗೃಹಲಕ್ಷ್ಮಿ ಯೋಜನೆಯಡಿ ಕೊಡುವ 2,000 ರೂ. ನಂತೆ ಮನೆಯ ಮಗನಾಗಿ ಅತಿಥಿ ಶಿಕ್ಷಕರಾಗಿ ಕೆಲಸ ಮಾಡಿದರೂ ಮನೆಗೆ 2,000 ರೂ. ಕೊಡಲು ಹಣ ಇವರ ಬಳಿ ಇರುವುದಿಲ್ಲ. ಹೀಗಾಗಿ, ಮನೆಯನ್ನೇ ನೆಡಸಲಾಗ ಅತಿಥಿ ಶಿಕ್ಷಕರಿಗೆ ಹೆಣ್ಣು ಕೊಡದೇ ನಿರಾಕರಣೆ ಮಾಡಲಾಗುತ್ತಿದೆ. ಹೀಗಾಗಿ, ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಅತಿಥಿ ಶಿಕ್ಷಕರ ಜೀವನವೇ ಬಲಿಯಾಗುತ್ತಿದೆ.

ಇದನ್ನೂ ಓದಿ: 120 ವರ್ಷ ಹಳೆಯ ಮನೆ ನೆಲದಡಿ ರಹಸ್ಯ ಕೋಣೆ ಪತ್ತೆ; ಗಾಬರಿಗೊಂಡ ಮನೆಯೊಡತಿ!

ಡಿ.13ರಂದು ಬೆಳಗಾವಿ ಚಲೋ ಮಾಡುತ್ತಿರುವ ಅತಿಥಿ ಶಿಕ್ಷಕರ ಬೇಡಿಕೆಗಳು:

  • ಪ್ರತಿ ವರ್ಷ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯ ಬದಲಾಗಿ ಪ್ರಸ್ತುತ ಸಾಲಿನಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಶೈಕ್ಷಣಿಕ ವರ್ಷಕ್ಕೆ ಮುಂದುವರಿಸಬೇಕು. 
  • ಮೆರಿಟ್ ಹೆಸರಿನಲ್ಲಿ ಅತಿಥಿ ಶಿಕ್ಷಕರನ್ನು ಬಳಸಿ ಬಿಸಾಕುವುದನ್ನು ನಿಲ್ಲಿಸಿ, ಪದವಿ ಕಾಲೇಜು ಅತಿಥಿ ಉಪನ್ಯಾಸಕರ ನೇಮಕದಂತೆ ಸೇವಾ ಅನುಭವವನ್ನು ಆದ್ಯತೆ ನೀಡಬೇಕು.
  • ಅತಿಥಿ ಶಿಕ್ಷಕರ ವೇತನ ಮಾಸಿಕ ಕನಿಷ್ಠ 20 ಸಾವಿರ ರೂ.ಗೆ ಹೆಚ್ಚಿಸಬೇಕು. ಬೇಸಿಗೆ ಮತ್ತಿತರ ರಜೆಗಳು ಸೇರಿ 12 ತಿಂಗಳ ವೇತನ ನೀಡಬೇಕು. 
  • ಸುಪ್ರೀಂ ಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ನೀಡಬೇಕು. ಪ್ರತಿ ತಿಂಗಳ ಮೊದಲ ವಾರ ವೇತನವನ್ನು ನೇರವಾಗಿ ಅತಿಥಿ ಶಿಕ್ಷಕರ ಖಾತೆಗೆ ಹಾಕಬೇಕು.
  • ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿದವರಿಗೆ ಶಿಕ್ಷಕರ ನೇಮಕಾತಿಯಲ್ಲಿ ಪ್ರತಿ ವರ್ಷಕ್ಕೆ ಶೇ.5 ಕೃಪಾಂಕ ನೀಡಬೇಕು.
  • ದೆಹಲಿ, ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶ ಸರಕಾರಗಳ ಮಾದರಿಯಲ್ಲಿ ಅತಿಥಿ ಶಿಕ್ಷಕರ ಸೇವೆ ಪರಿಗಣಿಸಿ ಖಾಯಂಗೊಳಿಸಬೇಕು.
  • ಅತಿಥಿ ಶಿಕ್ಷಕರಿಗೆ ಸೇವಾ ಪ್ರಮಾಣ ಪತ್ರ ನೀಡಬೇಕು.
  • ಸರ್ಕಾರಿ ಶಿಕ್ಷಕರಿಗೆ ನೀಡಲಾಗುತ್ತಿರುವ ಸೌಲಭ್ಯಗಳು, ತರಬೇತಿ ನೀಡಬೇಕು. ಶಿಕ್ಷಕರ ಹಾಜರಾತಿ ಪುಸ್ತಕದಲ್ಲಿ ಅತಿಥಿ ಶಿಕ್ಷಕರ ಹಾಜರಾತಿ ಸೇರ್ಪಡೆಗೊಳಿಸಬೇಕು.
  • ಅತಿಥಿ ಶಿಕ್ಷಕ ಎಂಬ ಪದವನ್ನು ತೆಗೆದುಹಾಕಿ ಗೌರವ ಅಥವಾ ಅರೆಕಾಲಿಕ ಶಿಕ್ಷಕ ಎಂದು ನಮೂದಿಸಿಬೇಕು.
  • ಅತಿಥಿ ಶಿಕ್ಷಕ/ಕಿಯರಿಗೆ ಗುಂಪು ಜೀವ ವಿಮೆ ಸೌಲಭ್ಯ ಒದಗಿಸಬೇಕು.
click me!