Bengaluru : ಮಳೆ ಇಲ್ಲ, ಗಾಳಿ ಇಲ್ಲ.. ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಕುಸಿದುಬಿದ್ದ ಕಾಲೇಜು ಗೋಡೆ!

By Ravi Janekal  |  First Published Dec 8, 2024, 5:57 PM IST

ಕಳೆದೆರಡು ದಿನಗಳಿಂದ ಬೆಂಗಳೂರಲ್ಲಿ ಮಳೆ ಇಲ್ಲ, ಗಾಳಿ ಇಲ್ಲ ಆದ್ರೂ ಇದ್ದಕ್ಕಿದ್ದಂತೆ ಕಾಲೇಜು ಗೋಡೆ ಕುಸಿದಬಿದ್ದು, ಎರಡು ಬೈಕ್ ಹಾಗೂ ಒಂದು ಕಾರು ಜಖಂಗೊಂಡ  ಘಟನೆ ಸುಧಾಮ್ ನಗರದ ಟಿಕೆಸಿ ಗಾರ್ಡನ್ ನಲ್ಲಿ ನಡೆದಿದೆ.


ಬೆಂಗಳೂರು (ಡಿ.8): ಕಳೆದೆರಡು ದಿನಗಳಿಂದ ಬೆಂಗಳೂರಲ್ಲಿ ಮಳೆ ಇಲ್ಲ, ಗಾಳಿ ಇಲ್ಲ ಆದ್ರೂ ಇದ್ದಕ್ಕಿದ್ದಂತೆ ಕಾಲೇಜು ಗೋಡೆ ಕುಸಿದಬಿದ್ದು, ಎರಡು ಬೈಕ್ ಹಾಗೂ ಒಂದು ಕಾರು ಜಖಂಗೊಂಡ  ಘಟನೆ ಸುಧಾಮ್ ನಗರದ ಟಿಕೆಸಿ ಗಾರ್ಡನ್ ನಲ್ಲಿ ನಡೆದಿದೆ.

ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಸರ್ಕಾರಿ ಫಾರ್ಮಿಸಿ ಕಾಲೇಜ್ ಗೋಡೆ ಕುಸಿದು ಏಕಾಏಕಿ ಕುಸಿದುಬಿದ್ದಿದೆ. ಅದೃಷ್ಟವಶಾತ್ ಸ್ಥಳದಲ್ಲೇ ಆಟವಾಡುತ್ತಿದ್ದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ವಲ್ಪ ಯಾಮಾರಿದ್ದರೂ ಅನಾಹುತ ನಡೆದುಹೋಗುತ್ತಿತ್ತು. ಗೋಡೆ ಬೀಳೋದನ್ನು ಕಂಡು ಎಸ್ಕೇಪ್ ಆದ ಮಕ್ಕಳು. ಗೋಡೆಗೆ ಹೊಂದಿಕೊಂಡಂತೆ ನಿಲ್ಲಿಸಿದ್ದ ಕಾರಿನಲ್ಲಿ ಕುಸಿದು ಬಿದ್ದಿದ್ದು ಕಾರು ಸೇರಿದಂತೆ ಎರಡು ಬೈಕ್‌ಗಳು ಜಖಂಗೊಂಡಿವೆ.

Tap to resize

Latest Videos

 

ರಸ್ತೆ ಅಗಲೀಕರಣ, ಗುಂಜೂರು-ವರ್ತೂರು ರೋಡ್‌ನ 143 ಆಸ್ತಿ ವಶಕ್ಕೆ ಪಡೆಯಲಿರುವ ಬಿಬಿಎಂಪಿ

ಬಿಬಿಎಂಪಿ ನಿರ್ಲಕ್ಷ್ಯ?

ಸರ್ಕಾರಿ ಫಾರ್ಮಿಸಿ ಕಾಲೇಜ್ ಗೋಡೆ ಶಿಥಿಲಾವಸ್ಥೆಯಲ್ಲಿದ್ದು, ಯಾವಾಗ ಬೇಕಾದ್ರೂ ಕುಸಿಯುವ ಸಾಧ್ಯತೆಯಿದೆ ಗೋಡೆ ತೆರವು ಮಾಡುವಂತೆ ಬಿಬಿಎಂಪಿಗೆ ಮೊದಲೇ ಮಾಹಿತಿ ನೀಡಿದ್ದರೂ ಬಿಬಿಎಂಪಿ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಗೋಡೆ ಕುಸಿಯುವ ಬಗ್ಗೆ ಮೊದಲೇ ಮಾಹಿತಿ ನೀಡಿದ್ರೂ ನಿರ್ಲಕ್ಷ್ಯವಹಿಸಿದ್ರಾ ಬಿಬಿಎಂಪಿ ಅಧಿಕಾರಿಗಳು. ಇದೀಗ ಗೋಡೆ ಕುಸಿದಿದೆ. ಇನ್ನರ್ಧ ಗೋಡೆ ಈಗಲೂ ಅಪಾಯಕಾರಿ ಸ್ಥಿತಿಯಲ್ಲಿದೆ ಯಾವುದೇ ಕ್ಷಣದಲ್ಲಾದ್ರೂ ಮತ್ತೆ ಗೋಡೆ ಕುಸಿಯುತ್ತೆ ಆದರೂ ತೆರವುಗೊಳಿಸಿಲ್ಲ. ಇದರಿಂದ ಸ್ಥಳೀಯರು ಆತಂಕದಲ್ಲಿದ್ದಾರೆ. ಗೋಡೆ ಬಳಿ ಮಕ್ಕಳು ಆಟವಾಡುತ್ತಾರೆ. ಏನಾದ್ರೂ ಅನಾಹುತವಾದರೆ ಯಾರು ಹೊಣೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

click me!