ನೈತಿಕ ಪೊಲೀಸ್‌ಗಿರಿಗೆ ಕಡಿವಾಣ; ದ.ಕನ್ನಡ ಜಿಲ್ಲಾ ಉಸ್ತುವಾರಿಯಾದ ಬೆನ್ನಲ್ಲೇ ಗುಡುಗಿದ ಗುಂಡುರಾವ್!

Published : Jun 09, 2023, 03:10 PM IST
ನೈತಿಕ ಪೊಲೀಸ್‌ಗಿರಿಗೆ ಕಡಿವಾಣ; ದ.ಕನ್ನಡ ಜಿಲ್ಲಾ ಉಸ್ತುವಾರಿಯಾದ ಬೆನ್ನಲ್ಲೇ ಗುಡುಗಿದ ಗುಂಡುರಾವ್!

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಬೆನ್ನಲ್ಲೇ ನೈತಿಕ ಪೊಲೀಸ್‌ಗಿರಿ ಕಡಿವಾಣ ಹಾಕುವುದಾಗಿ ಗುಂಡುವಾರ್ ಎಚ್ಚರಿಸಿದ್ದಾರೆ.   

ಬೆಂಗಳೂರು(ಜೂ.09):ರಾಜ್ಯ ಕಾಂಗ್ರೆಸ್ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹೊಣೆ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹೆಗಲೇರಿದೆ. ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ಗುಂಡುರಾವ್, ದಕ್ಷಿಣ ಕನ್ನಡದಲ್ಲಿನ ನೈತಿಕ ಪೊಲೀಸ್‌ಗಿರಿ ಅಂತ್ಯಹಾಡುವುದಾಗಿ ಹೇಳಿದ್ದಾರೆ.  ದಕ್ಷಿಣ ಕನ್ನಡದಲ್ಲಿ ಜನ ಸಹೋದರತೆಯಿಂದ ಬದುಕಿ ಬಾಳಬೇಕು. ಅಲ್ಲಿನ ಜನ ಶಾಂತಿ ಸೌಹಾರ್ಧತೆಯಿಂದ ಬಾಳಬೇಕು ಎಂದು ಗುಂಡುರಾವ್ ಹೇಳಿದ್ದಾರೆ.

ದಕ್ಷಿಣ ಕನ್ನಡ ಪ್ರಜ್ಞಾವಂತ ಜಿಲ್ಲೆ. ಇಲ್ಲಿ ಜನ ಸಹೋದರತೆಯಿಂದ ಬದುಕಿ ಬಾಳಬೇಕು . ಇದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳತ್ತೇವೆ ಎಂದು ಗುಂಡುರಾವ್ ಹೇಳಿದ್ದಾರೆ. ನಾನೇನು ಯಾವ ಜಿಲ್ಲೆಗೂ ಬೇಡಿಕೆ ಇಟ್ಟಿರಲಿಲ್ಲ, ಇದು ಮುಖ್ಯಮಂತ್ರಿ ಗಳ ನಿರ್ಧಾರವಾಗಿದೆ. ಯಾವ ಜಿಲ್ಲೆಗೆ ಹೋದರು ಕೆಲಸ ಮಾಡಬೇಕು ಎಂದು ಗುಂಡುರಾವ್ ಹೇಳಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ, ಹೆಬ್ಬಾಳ್ಕರ್‌ಗೆ ಉಡುಪಿ, ಬೆಂಗಳೂರು ನಗರಕ್ಕೆ ಡಿಕೆಶಿ!

ಇದೇ ವೇಳೆ ಚಾಮರಾಜನಗರ ಆಕ್ಸಿಜನ್ ದುರಂತ ಮರು ತನಿಖೆ ಮಾಡುವುದಾಗಿ ಪುನರುಚ್ಚರಿಸಿದ್ದಾರೆ. ಮರುತನಿಖೆಗೆ ಸರ್ಕಾರಕ್ಕೆ ಹೇಳಿದ್ದೇನೆ, ಅದಕ್ಕೆ ಡಿಪಿಆರ್ ಕೂಡ ರೆಡಿಯಾಗುತ್ತಿದೆ. ಶೀಘ್ರದಲ್ಲೇ ಅಧಿಕೃತವಾಗಿ ತನಿಖೆಗೆ ಆದೇಶ ಹೊರಬೀಳಲಿದೆ ಎಂದು ಗುಂಡುರಾವ್ ಹೇಳಿದ್ದಾರೆ. ಚಾಮರಾಜನಗರ ಆಕ್ಸಿನ್ ದುರಂತ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆಗೆ ಒಳಪಡುತ್ತದೆ. ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ  ಆರೋಗ್ಯ ಇಲಾಖೆ ಸಮನ್ವಯದಿಂದ ತನಿಖೆ ಮಾಡಬೇಕಿದೆ ಎಂದಿದ್ದಾರೆ.ಈ ಹಿಂದಿನ ಸರ್ಕಾರ ತನಿಖೆಗೆ ಕೆಲವರನ್ನು ನೇಮಕ ಮಾಡಿತ್ತು. ಆದರೆ ಈ ತನಿಖೆ ಪೂರ್ಣಗೊಂಡಿಲ್ಲ. ಹಾಗಾಗಿ ನಾವು ಮರುತನಿಖೆ ನಡಸುತ್ತೇವೆ ಎಂದಿದ್ದಾರೆ.  

ಜಿಲ್ಲಾ ಉಸ್ತುವಾರಿ ನೇಮಕದಲ್ಲಿ ಹಲವು ಸಚಿವರ ಸ್ಥಾನ ಪಲ್ಲಟವಾಗಿದೆ. ಬೆಂಗಳೂರು ನಗರ ಜಿಲ್ಲೆಯ ದಿನೇಶ್ ಗುಂಡುರಾವ್ ಅವರಿಗೆ ದಕ್ಷಿಣ ಕನ್ನಡ ಉಸ್ತುವಾರಿ ನೀಡಾಗಿದೆ. ಇನ್ನು ದಕ್ಷಿಣ ಕನ್ನಡದ ಪಕ್ಕದ ಉಡುಪಿ ಜಿಲ್ಲೆಗೆ ಬೆಳಗಾವಿಯ ಲಕ್ಷ್ಣಿ ಹೆಬ್ಬಾಳ್ಕರ್ ಉಸ್ತುವಾರಿಯಾಗಿ ನೇಮಕವಾಗಿದ್ದಾರೆ. ನೂತನ ಜಿಲ್ಲಾ ಉಸ್ತುವಾರಿ ಸಚಿವರ ಸಂಪೂರ್ಣ ಪಟ್ಟಿ ಇಲ್ಲಿದೆ.

ಬಿಜೆಪಿ ಸರ್ಕಾರದ ಕೋವಿಡ್‌ ಅಕ್ರಮ ಬಗ್ಗೆ ಪರಿಶೀಲಿಸಿ ಕ್ರಮ: ಸಚಿವ ದಿನೇಶ್‌ ಗುಂಡೂರಾವ್‌

ಡಿಕೆ ಶಿವಕುಮಾರ್: ಬೆಂಗಳೂರು ನಗರ
ಡಾ.ಜಿ ಪರಮೇಶ್ವರ: ತುಮಕೂರು
ಹೆಚ್‌ಕೆ ಪಾಟೀಲ: ಗದಗ
ಕೆಹೆಚ್ ಮನಿಯಪ್ಪ: ಬೆಂಗಳೂರು ಗ್ರಾಮಾಂತರ
ಎಂಬಿ ಪಾಟೀಲ್ : ವಿಜಯಪುರ
ಹೆಚ್‌ಸಿ ಮಹದೇಪವ್ವ: ಮೈಸೂರು
ಪ್ರಿಯಾಂಕ್ ಖರ್ಗೆ: ಕಲಬುರಗಿ
ರಾಮಲಿಂಗ ರೆಡ್ಡಿ - ರಾಮನಗರ
ಲಕ್ಷ್ಮೀ ಹೆಬ್ಬಾಳಕರ್ - ಉಡುಪಿ
ದಿನೇಶ್ ಗಂಡುರಾವ್ - ದಕ್ಷಿಣ ಕನ್ನಡ
ಜಾರ್ಜ್‌:  ಚಿಕ್ಕಮಗಳೂರು
ಜಮೀರ್:  ವಿಜಯನಗರ
ಕೆ ಎನ್ ರಾಜಣ್ಣ:  ಹಾಸನ
ಮಧು ಬಂಗಾರಪ್ಪ:  ಶಿವಮೊಗ್ಗ
ಶಿವಾನಂದ ಪಾಟೀಲ್  - ಹಾವೇರಿ
ಬೋಸರಾಜು:  ಕೊಡಗು
ಬೈರತಿ ಸುರೇಶ್:  ಕೋಲಾರ
ಶರಣ್ ಪ್ರಕಾಶ ಪಾಟೀಲ್ :  ರಾಯಚೂರು
ಕೆ ವೆಂಕಟೇಶ:  ಚಾಮರಾಜನಗರ
ಸತೀಶ್ ಜಾರಕಿಹೊಳಿ:  ಬೆಳಗಾವಿ
ಬೈರತಿ ಸುರೇಶ್: ಕೋಲಾರ
ಶರಣಬಸಪ್ಪ ದರ್ಶನಾಪುರ:ಯಾದಗಿರಿ
ಈಶ್ವರ್ ಖಂಡ್ರೆ: ಬೀದರ್
ಎನ್ ಚೆಲುವರಾಯಸ್ವಾಮಿ: ಮಂಡ್ಯ
ಎಸ್ಎಸ್ ಮಲ್ಲಿಕಾರ್ಜುನ: ದಾವಣಗೆರೆ
ಸಂತೋಷ್ ಎಸ್ ಲಾಜ್: ಧಾರವಾಡ
ಶಣಪ್ರಕಾಶ ಪಾಟೀಲ: ರಾಯಚೂರು
ಆರ್‌ಬಿ ತಿಮ್ಮಾಪೂರ: ಬಾಗಲಕೋಟೆ
ಶಿವರಾಜ ತಂಗಡಗಿ: ಕೊಪ್ಪಳ
ಡಿ ಸುಧಾಕರ್ :ಚಿತ್ರದುರ್ಗ
ನಾಗೇಂದ್ರ: ಬಳ್ಳಾರಿ
ಮಂಕಾಳ್ ವೈದ್ಯ:ಉತ್ತರ ಕನ್ನಡ
ಎಂಸಿ ಸುಧಾಕರ್: ಚಿಕ್ಕಬಳ್ಳಾಪುರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ