ಹೊಸ ಕಾರು-ಬೈಕ್ ಖರೀದಿದಾರರಿಗೆ ಸೆಸ್ ಹೆಚ್ಚಳ ಮಾಡಿದ ಸರ್ಕಾರ; ಫೆ.1ರಿಂದ ಅನ್ವಯ!

Published : Jan 29, 2025, 06:04 PM IST
ಹೊಸ ಕಾರು-ಬೈಕ್ ಖರೀದಿದಾರರಿಗೆ ಸೆಸ್ ಹೆಚ್ಚಳ ಮಾಡಿದ ಸರ್ಕಾರ; ಫೆ.1ರಿಂದ ಅನ್ವಯ!

ಸಾರಾಂಶ

ರಾಜ್ಯ ಸರ್ಕಾರ ಹೊಸ ಕಾರು ಮತ್ತು ಬೈಕ್ ಖರೀದಿದಾರರ ಮೇಲೆ ಸೆಸ್ ಹೆಚ್ಚಳ ಮಾಡಿದೆ. ಈ ಹೆಚ್ಚಳ ಫೆಬ್ರವರಿ 1 ರಿಂದ ಜಾರಿಗೆ ಬರಲಿದ್ದು, ವೈಟ್ ಬೋರ್ಡ್ ವಾಹನಗಳಿಗೆ ಮಾತ್ರ ಅನ್ವಯಿಸುತ್ತದೆ. ಹೆಚ್ಚುವರಿ ಸೆಸ್ ಮೂಲಸೌಕರ್ಯ ಯೋಜನೆಗಳು ಮತ್ತು ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಬಳಕೆಯಾಗಲಿದೆ.

ಬೆಂಗಳೂರು (ಜ.29): ರಾಜ್ಯ ಸರ್ಕಾರ ಬೆಲೆ ಏರಿಕೆ ನಿಯಂತ್ರಣ ಮಾಡುವುದಾಗಿ ಜನರಿಗೆ ವಾಗ್ದಾನ ಮಾಡಿ ಅಧಿಕಾರಕ್ಕೆ ಬಂದಿದ್ದು, ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಎಲ್ಲ ವಸ್ತುಗಳ ಬೆಲೆಯನ್ನೂ ಹೆಚ್ಚಳ ಮಾಡುತ್ತಾ ಜನರಿಗೆ ಬರೆ ಎಳೆಯುತ್ತಿದೆ. ಇದೀಗ ಹೊಸ ಕಾರು, ಬೈಕ್ ಖರೀದಿ ಮಾಡುವವರ ಮೇಲೆ ಸೆಸ್ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಈ ಸೆಸ್ ಹೆಚ್ಚಳದ ಹೊರೆ ಇದೇ ಫೆ.1ರಿಂದ ಅನ್ವಯವಾಗಲಿದೆ.

ರಾಜ್ಯ ಮೋಟಾರು ವಾಹನಗಳ ಅಧಿನಿಯಮ ಅಡಿಯಲ್ಲಿ ನೋಂದಾಯಿತ ಎಲ್ಲ ವಾಹನಗಳ ಮೇಲೆ ವೈಟ್ ಬೋರ್ಡ್ ಕಾರುಗಳು ಹಾಗೂ ಬೈಕ್ ಖರೀದಿ ಮಾಡುವವರಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಸೆಸ್ ಸಂಗ್ರಹಕ್ಕೆ ಸಾರಿಗೆ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಆದರೆ, ಯೆಲ್ಲೋ ಬೋರ್ಡ್ ವಾಹನಗಳನ್ನು ಖರೀದಿ ಮಾಡುವವರ ಬಳಿ ಸೆಸ್ ಸಂಗ್ರಹ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ.

ಯಾವ ಉದ್ದೇಶಕ್ಕೆ ಉಪಕರ ಹೆಚ್ಚಳ:  ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ನಿಧಿಯ ಉದ್ದೇಶಕ್ಕಾಗಿ, ವಾಹನಗಳ ನೋಂದಣಿ ಸಮಯದಲ್ಲಿ ದ್ವಿಚಕ್ರ ವಾಹನಗಳಿಗೆ 500 ರೂಪಾಯಿಗಳ ಮತ್ತು ಸಾರಿಗೇತರ ಮೋಟಾರು ಕಾರುಗಳ ಮೇಲೆ 1,000 ರೂಪಾಯಿಗಳ ಹೆಚ್ಚುವರಿ ಉಪಕರವನ್ನು ವಿಧಿಸಲು ಮತ್ತು ಸಂಗ್ರಹಿಸಲು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957 (1957ರ ಕರ್ನಾಟಕ ಅಧಿನಿಯಮ 35)ನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಅವಶ್ಯಕವಾಗಿದೆ.

ಇದನ್ನೂ ಓದಿ: ಬೆಲೆ ಏರಿಕೆ ಬೆನ್ನಲ್ಲೇ ಮದ್ಯಪ್ರಿಯರಿಗೆ ಮತ್ತೊಂದು ಶಾಕ್,ಬೆಂಗಳೂರಿನಲ್ಲಿ ಬಿಯರ್ ಕೊರತೆ

ಶೇ.11 ಹೆಚ್ಚುವರಿ ಉಪಕರದ ಬಳಕೆ: ಮೋಟಾರು ವಾಹನಗಳ ಅಧಿನಿಯಮ ಅಡಿಯಲ್ಲಿ ನೋಂದಾಯಿತ ಮೋಟಾರು ವಾಹನಗಳ ಮೇಲೆ 3ನೇ ಪ್ರಕಣದ ಅಡಿಯಲ್ಲಿ ವಿಧಿಸಲಾದ ತೆರಿಗೆಯ ಮೇಲೆ ಶೇ.11ರಷ್ಟು ದರದಲ್ಲಿ ಉಪಕರ ವಿಧಿಸಿ ವಸೂಲು ಮಾಡಬೇಕು. ಆ ಪೈಕಿ ಶೇಕಡಾ 10ರಷ್ಟು ಹಣವನ್ನು, ಅನುಕ್ರಮವಾಗಿ 57:28:15ರ ಪ್ರಮಾಣದಲ್ಲಿ ರಾಜ್ಯದ ಎಲ್ಲೆಡೆ ವಿವಿಧ ಮೂಲ ಸೌಕರ್ಯ ಯೋಜನೆ, ಬೆಂಗಳೂರು ಕ್ಷಿಪ ಸಾರಿಗೆ ಸಮೂಹ ನಿಯಮಿತದಲ್ಲಿ ಈಕ್ವಿಟಿ ಷೇರು ಹೂಡಿಕೆಗಾಗಿ ಮತ್ತು ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿಯ ಸ್ಥಾಪನೆಗಾಗಿ ಬಳಕೆ ಮಾಡಬೇಕು. ಉಳಿದ ಶೇ.1ರಷ್ಟು ನಗರಸಾರಿಗೆ ನಿಧಿ ಉದ್ದೇಶಕ್ಕಾಗಿ ಗೊತ್ತುಪಡಿಸಬೇಕು.

ಶೇ.3 ಹೆಚ್ಚುವರಿ ತೆರಿಗೆ ನೌಕರರ ಭದ್ರತೆಗೆ ಮೀಸಲು: ರಾಜ್ಯದಲ್ಲಿ ನೋಂದಣಿಯಾದ ಎಲ್ಲ ಮೋಟಾರು ವಾಹನಗಳಿಗೆ 3ನೇ ಪ್ರಕರಣದಡಿಯಲ್ಲಿ ವಿಧಿಸಿದ ತೆರಿಗೆಗೆ ಹೆಚ್ಚುವರಿಯಾಗಿ, ಕರ್ನಾಟಕ ಮೋಟಾರು ಸಾರಿಗೆ ಮತ್ತು ಅದಕ್ಕೆ ಸಂಬಂಧಿತ ನೌಕರರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ನಿಧಿಯ ಉದ್ದೇಶಕ್ಕಾಗಿ ಶೇ.3 ರಷ್ಟು ಹೆಚ್ಚುವರಿ ತೆರಿಗೆಯನ್ನು ವಿಧಿಸತಕ್ಕದ್ದು ಎಂದು ರಾಜ್ಯಪತ್ರವನ್ನು ಹೊರಡಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್