
ಬೆಂಗಳೂರು (ಮೇ.12): ಕೇಂದ್ರದಿಂದ ಲಸಿಕೆ ಬಾರದೆ ನಾವು ಏನು ಮಾಡಲು ಆಗುವುದಿಲ್ಲ. ನಮಗೆ ಇಲ್ಲಿಯವರೆಗೆ 7 ಲಕ್ಷ ಲಸಿಕೆಯಷ್ಟೇ ಬಂದಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಹೇಳಿದ್ದಾರೆ.
ಸುವರ್ಣ ನ್ಯೂಸ್.ಕಾಂ ಜೊತೆಗೆ ಇಂದು ಮಾತನಾಡಿದ ಮುಖ್ಯಕಾರ್ಯದರ್ಶಿ ರವಿಕುಮಾರ್ ಲಸಿಕೆ ಬಾರದೆ ನಾವು ಏನು ಮಾಡಲು ಸಾಧ್ಯವಿಲ್ಲ. ಇಲ್ಲಿವರೆಗೆ 7 ಲಕ್ಷ ಲಸಿಕೆಗಳು ಬಂದಿದೆ. ನಾವು 3 ಕೋಟಿ ಲಸಿಕೆ ಆರ್ಡರ್ ಕೊಟ್ಟಿದ್ದು, ನಮಗೆ ತಲುಪಿದ್ದು 7 ಲಕ್ಷ ಲಸಿಕೆಯಷ್ಟೇ ಎಂದರು.
2ನೇ ಡೋಸ್‌ಗೆ ಹೆಚ್ಚಿನ ಆದ್ಯತೆ ನೀಡಿ: ರಾಜ್ಯಗಳಿಗೆ ಸೂಚನೆ ..
ಇನ್ನು ರಾಜ್ಯಕ್ಕೆ ಬಂದಿರುವ ಕೋ ವ್ಯಾಕ್ಸಿನ್ ಲಸಿಕೆ 80 ಸಾವಿರ. ಲಸಿಕೆ ಬಂದರೆ ಕೋ ವ್ಯಾಕ್ಸಿನ್ ಕೊಡುತ್ತೇವೆ. ಎರಡನೇ ಡೋಸ್ ಕೊಡುವುದಕ್ಕೆ ಆದ್ಯತೆ ನೀಡುತ್ತೇವೆ. 18 ವರ್ಷದಿಂದ 45 ವರ್ಷದ ಒಳಗಿನವರು ಅಪಾಯಿಂಟ್‌ಮೆಂಟ್ ಮಾಡಿಕೊಂಡು ಲಸಿಕೆ ಹಾಕಿಸಿಕೊಳ್ಳಲು ಬರಬೇಕು. ಆನ್ ಲೈನ್ ನಲ್ಲಿ ಅಪಾಯಿಂಟ್‌ಮೆಂಟ್ ಮಾಡದೇ ಲಸಿಕೆ ಹಾಕಿಸಿಕೊಳ್ಳಲು ಬಂದರೆ ನಾವೇನು ಮಾಡಲಾಗುತ್ತದೆ ಎಂದರು ರವಿ ಕುಮಾರ್ ಹೇಳಿದರು.
"
ನಾವು ಲಸಿಕೆ ಪೂರೈಕೆಗಾಗಿ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ. ಒತ್ತಡ ಹಾಕಬಹುದು ಅಷ್ಟೇ. ಭಾರತದಲ್ಲಿ ಎರಡು ಕಂಪನಿಗಳು ಮಾತ್ರ ಲಸಿಕೆ ಉತ್ಪಾದನೆ ಮಾಡುತ್ತಿವೆ. ಆ ಎರಡು ಕಂಪನಿಗಳ ಲಸಿಕೆ ಮೇಲೆ ದೇಶ ಅವಲಂಬಿತವಾಗಿದೆ. ಸದ್ಯ ರಾಜ್ಯದಲ್ಲಿ ಲಸಿಕಾ ಅವಶ್ಯಕತೆ ತೀವ್ರವಿರುವುದರಿಂದ ಬೇರೆ ಬೇರೆ ದೇಶಗಳಿಂದ ಲಸಿಕೆ ಆಮದು ಮಾಡಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ ಅದಕ್ಕೆ ಭಾರತ ಸರ್ಕಾರದ ಅನುಮತಿ ಅವಶ್ಯಕ ಎಂದು ರವಿ ಕುಮಾರ್ ಹೇಳಿದರು.
2ರಿಂದ 12 ವರ್ಷದ ಮಕ್ಕಳ ಮೇಲೆ ಕ್ಲಿನಿಕಲ್ ಟ್ರಯಲ್: ಭಾರತದಲ್ಲೂ ಲಸಿಕೆ ಪ್ರಯೋಗ? ...
ರಷ್ಯಾದ ಸ್ಪುಟ್ನಿಕ್ ಲಸಿಕೆ ಪಡೆಯಲು ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದೆ. ಇನ್ನೂ ಬೇರೆ ಕಂಪನಿಗಳ ಲಸಿಕೆಗೆ ಕೇಂದ್ರ ಸರ್ಕಾರದ ಅನುಮತಿ ನಿರೀಕ್ಷಿಸುತ್ತಿದ್ದೇವೆ. ನಾವು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ. ಬೇರೆ ಕಂಪನಿಗಳ ಲಸಿಕೆ ಪಡೆಯಲು ಶೀಘ್ರ ಅನುಮತಿ ನೀಡಲು ಮನವಿ ಮಾಡಿದ್ದೇವೆ ಎಂದು ರವಿಕುಮಾರ್ ಹೇಳಿದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ