ಬ್ಲ್ಯಾಕ್‌ ಫಂಗಸ್‌ ಸ್ಕ್ಯಾನಿಂಗ್‌ಗೆ ಗರಿಷ್ಠ ದರ ನಿಗದಿ : ಮೊತ್ತವೆಷ್ಟು..?

By Kannadaprabha NewsFirst Published Jun 29, 2021, 7:28 AM IST
Highlights
  • ಕಪ್ಪು ಶಿಲೀಂಧ್ರ (ಬ್ಲ್ಯಾಕ್‌ ಫಂಗಸ್‌) ರೋಗ ಪತ್ತೆಗೆ ಸ್ಕ್ಯಾನಿಂಗ್ ದರ ನಿಗದಿ
  • ಗರಿಷ್ಠ ದರ ನಿಗದಿ ಮಾಡಿ ಆದೇಶ ನೀಡಿದ ಕರ್ನಾಟಕ ಸರ್ಕಾರ
  • ಬೇಕಾಬಿಟ್ಟಿದರ ವಸೂಲಿ ಮಾಡುತ್ತಿದ್ದ ಖಾಸಗಿ ಪ್ರಯೋಗಾಲಯಗಳಿಗೆ ಲಗಾಮು

 ಬೆಂಗಳೂರು (ಜೂ.29):  ಕಪ್ಪು ಶಿಲೀಂಧ್ರ (ಬ್ಲ್ಯಾಕ್‌ ಫಂಗಸ್‌) ರೋಗ ಪತ್ತೆ ಮಾಡಲು ವಿವಿಧ ಸ್ಕ್ಯಾನ್ಗೆ  ಬೇಕಾಬಿಟ್ಟಿದರ ವಸೂಲಿ ಮಾಡುತ್ತಿದ್ದ ಖಾಸಗಿ ಪ್ರಯೋಗಾಲಯಗಳಿಗೆ ದರ ನಿಗದಿ ಮಾಡಿ ರಾಜ್ಯ ಸರ್ಕಾರ ಲಗಾಮು ಹಾಕಿದೆ. ಗರಿಷ್ಠ 11,500 ರು. ಒಳಗೆ ಸಿಟಿಸ್ಕಾ್ಯನ್‌ ಮತ್ತು ಎಂಆರ್‌ಐ ಸ್ಕಾ್ಯನ್‌ಗಳನ್ನು ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದೇ ವೇಳೆ ಬಿಪಿಎಲ್‌ ಮತ್ತು ಎಪಿಎಲ್‌ ಕಾರ್ಡ್‌ದಾರರಿಗೆ ಪ್ರತ್ಯೇಕ ದರ ನಿಗದಿ ಪಡಿಸಲಾಗಿದೆ.

ಬಾಹ್ಯ ನರಮಂಡಲದ ಸಿಟಿ ಸ್ಕ್ಯಾನ್ಗೆ , ಮೆದುಳಿನ ಎಂಆರ್‌ಐ, ನರ ಮಂಡಲದ ಎಂಆರ್‌ಐ, ಕಣ್ಣಿನ ಭಾಗದ ಎಂಆರ್‌ಐ  ಸ್ಕ್ಯಾನ್ಗೆ  ಖಾಸಗಿ ಪ್ರಯೋಗಾಲಯಗಳಲ್ಲಿ 25 ರಿಂದ 28 ಸಾವಿರ ರು ದರ ವಸೂಲಿ ಮಾಡಲಾಗುತ್ತಿತ್ತು. ಇದೀಗ ಬಿಪಿಎಲ್‌ ಕಾರ್ಡ್‌ದಾರರಿಗೆ ಮೆದುಳು, ಕಣ್ಣು ಮತ್ತು ನರ ಮಂಡಲದ ಸ್ಕಾ್ಯನ್‌ಗಳನ್ನು ಸ್ಕ್ಯಾನ್ಗೆ  ಪ್ರತ್ಯೇಕವಾಗಿ ಮಾಡಿದರೆ ತಲಾ 3 ಸಾವಿರ ಮತ್ತು ಈ ಎಲ್ಲ ಪರೀಕ್ಷೆಗಳನ್ನು ಒಟ್ಟಿಗೆ ಮಾಡಿದರೆ ಗರಿಷ್ಠ 7,500 ರೂ ನಿಗದಿ ಮಾಡಲಾಗಿದೆ.

ಕರ್ನಾಟಕದಲ್ಲಿ ಕೊರೋನಾ ರಿಲೀಫ್: 3 ಸಾವಿರಕ್ಕಿಂತ ಕಡಿಮೆ ಕೇಸ್! ..

ಅದೇ ರೀತಿ ಎಪಿಎಲ್‌ ಕಾರ್ಡ್‌ದಾರರಿಗೆ ಮೆದುಳು, ನರ ಮಂಡಲ ಮತ್ತು ಕಣ್ಣಿನ ಎಂಆರ್‌ಐ   ಸ್ಕ್ಯಾನ್ಗೆ ತಲಾ 4 ಸಾವಿರ ನಿಗದಿ ಪಡಿಸಲಾಗಿದ್ದು ಈ ಎಲ್ಲ ಸ್ಕ್ಯಾನ್ ಒಟ್ಟಿಗೆ ಮಾಡಿದರೆ 10 ಸಾವಿರ ರು ನಿಗದಿ ಪಡಿಸಲಾಗಿದೆ. ಬಿಪಿಎಲ್‌ ಮತ್ತು ಎಪಿಎಲ್‌ ಕಾರ್ಡ್‌ದಾರರು ಎಂಆರ್‌ಐ ಆಫ್‌ ಕಾಂಟ್ರಸ್ಟ್‌ ಸ್ಕಾ್ಯನ್‌ಗೆ 1,500 ರು ಹೆಚ್ಚುವರಿ ದರ ನೀಡಬೇಕಿದೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಎಲ್ಲ ಪರೀಕ್ಷೆಗಳು ಉಚಿತವಾಗಿರುತ್ತದೆ.
 
ಭಾರೀ ದರ ವಿಧಿಸುತ್ತಿದ್ದ ಖಾಸಗಿ ಪ್ರಯೋಗಾಲಯಗಳಿಗೆ ಸರ್ಕಾರದ ಲಗಾಮು

 ಖಾಸಗಿ ಆಸ್ಪತ್ರೆಗಳಿಗೆ ಹೊಸ ದರ ಪಟ್ಟಿ

ಎಪಿಎಲ್‌ ವರ್ಗ

ಮೆದುಳು, ಕಣ್ಣು, ನರ ಮಂಡಲ ಪ್ರತ್ಯೇಕ ಸ್ಕ್ಯಾನ್ಗೆ  ತಲಾ 3000 ರು.

ಮೆದುಳು, ಕಣ್ಣು, ನರ ಮಂಡಲದ ಒಟ್ಟು ಸ್ಕ್ಯಾನ್‌ಗೆ 7500 ರು.

ಬಿಪಿಎಲ್‌ ವರ್ಗ

ಮೆದುಳು, ಕಣ್ಣು, ನರ ಮಂಡಲ ಪ್ರತ್ಯೇಕ ಸ್ಕ್ಯಾನ್ಗೆ  ತಲಾ 4000 ರು.

ಮೆದುಳು, ಕಣ್ಣು, ನರ ಮಂಡಲದ ಒಟ್ಟು  ಸ್ಕ್ಯಾನ್ಗೆ 10000 ರು.

click me!