43 ತಾಲೂಕು ನೆರೆ​ಪೀ​ಡಿ​ತ : ಸರ್ಕಾರ ಘೋಷ​ಣೆ

By Kannadaprabha NewsFirst Published Oct 7, 2020, 7:23 AM IST
Highlights

ರಾಜ್ಯದ ಒಟ್ಟು 43 ತಾಲೂಕುಗಳನ್ನು ನೆರೆ ಪೀಡಿತ ಎಂದು ಘೋಷಣೆ ಮಾಡಲಾಗಿದೆ. 

ಬೆಂಗಳೂರು (ಅ.07): ಕಳೆದ ಸೆಪ್ಟಂಬರ್‌ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದ ಅತಿ ಹೆಚ್ಚು ಮನೆ, ಬೆಳೆ ಹಾಗೂ ಮೂಲ ಸೌಕರ್ಯ ಹಾನಿಗೊಳಗಾಗಿರುವ 16 ಜಿಲ್ಲೆಗಳ 43 ತಾಲ್ಲೂಕುಗಳನ್ನು ‘ಅತಿವೃಷ್ಟಿ/ಪ್ರವಾಹ’ ಪೀಡಿತ ಪ್ರದೇಶಗಳೆಂದು ಘೋಷಿಸಿರುವ ರಾಜ್ಯ ಸರ್ಕಾರ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಿದೆ.

ಧಾರವಾಡ ಜಿಲ್ಲೆಯ ಅಣ್ಣಿಗೇರಿ, ಹಾವೇರಿ ಜಿಲ್ಲೆಯ ಬ್ಯಾಡಗಿ, ಸವಣೂರು, ವಿಜಯಪುರ ಜಿಲ್ಲೆಯ ವಿಜಯಪುರ, ಬಸವನಬಾಗೇವಾಡಿ, ತಾಳಿಕೋಟೆ, ಇಂಡಿ, ಸಿಂದಗಿ, ದೇವರ ಹಿಪ್ಪರಗಿ, ದಾವಣಗೆರೆಯ ಚನ್ನಗಿರಿ, ಜಗಳೂರು, ಗದಗ ಜಿಲ್ಲೆಯ ಗಜೇಂದ್ರಗಡ, ಗದಗ, ಲಕ್ಷ್ಮೇಶ್ವರ, ರಾಯಚೂರು ಜಿಲ್ಲೆಯ ಮಸ್ಕಿ, ಸಿರವಾರ, ಚಿಕ್ಕಮಗಳೂರು ಜಿಲ್ಲೆಯ ಕಡೂರು, ಅಜ್ಜಂಪುರ, ಕಲಬುರಗಿಯ ಚಿಂಚೋಳಿ, ಯಡ್ರಾವಿ, ಮೈಸೂರು ಜಿಲ್ಲೆಯ ನಂಜನಗೂಡು, ಎಚ್‌.ಡಿ.ಕೋಟೆ, ಸರಗೂರು, ಚಿತ್ರದುರ್ಗದ ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಳಲ್ಕೆರೆ, ಮೊಳಕಾಲ್ಮುರು, ಹೊಸದುರ್ಗ, ಉತ್ತರ ಕನ್ನಡದ ಹಳಿಯಾಳ, ದಾಂಡೇಲಿ, ಬಳ್ಳಾರಿಯ ಸಂಡೂರು, ಕೂಡ್ಲಗಿ, ಬಳ್ಳಾರಿ, ತುಮಕೂರಿನ ಮಧುಗಿರಿ, ಕೊಪ್ಪಳ ಜಿಲ್ಲೆಯ ಕನಕಗಿರಿ, ಕುಷ್ಟಗಿ, ಯಲಬುರ್ಗ, ಕುಕನೂರು, ಬೀದರ್‌ ಜಿಲ್ಲೆಯ ಕಮಲನಗರ, ಚಿಟಗುಪ್ಪ, ಹುಲಸೂರು, ಹಾಸನದ ಹೊಳೆನರಸೀಪುರ ತಾಲೂಕುಗಳನ್ನು ಪ್ರವಾಹ ಪೀಡಿತವೆಂದು ಘೋಷಿಸಲಾಗಿದೆ.

ನೇಪಾಳದಲ್ಲಿ ಭಾರೀ ಮಳೆ; ನಲುಗಿದ ಅಸ್ಸಾಂ, ಮಹಾ ಪ್ರಳಯದಲ್ಲಿ 100 ಕ್ಕೂ ಹೆಚ್ಚು ಮಂದಿ ಸಾವು ...

ಈ ಹಿಂದೆ ಕಳೆದ ಆಗಸ್ಟ್‌ನಲ್ಲಿ 23 ಜಿಲ್ಲೆಗಳ 130 ತಾಲೂಕುಗಳನ್ನು ಪ್ರವಾಹ ಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿತ್ತು.

ಅತಿವೃಷ್ಟಿತಾಲೂಕುಗಳಲ್ಲಿ ರಾಜ್ಯ ವಿಪ್ಪತ್ತು ಪರಿಹಾರ ಹಾಗೂ ಕೇಂದ್ರ ವಿಪ್ಪತ್ತು ಪರಿಹಾರ ಮಾರ್ಗಸೂಚಿಯಡಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಲ್ಪಿಸಲು ಸಂಬಂಧಿಸಿದ ಜಿಲ್ಲಾಡಳಿತಗಳು ಕ್ರಮ ಕೈಗೊಳ್ಳಬೇಕು ಎಂದು ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಜಂಟಿ ಕಾರ್ಯದರ್ಶಿ ಕೆ. ಉಮಾಪತಿ ಆದೇಶ ಮಾಡಿದ್ದಾರೆ.

click me!