KSRTC: ಸಾರಿಗೆ ನೌಕರರಿಗೆ ಮಾಸ್ಟರ್‌ ಸ್ಟ್ರೋಕ್‌ ನೀಡಿದ ಸರ್ಕಾರ: ಮುಷ್ಕರಕ್ಕೆ ಭಾರಿ ಹಿನ್ನಡೆ

By Sathish Kumar KHFirst Published Dec 29, 2022, 3:05 PM IST
Highlights

ಸರ್ಕಾರಕ್ಕೆ ಶಾಕ್ ನೀಡಲು ಮುಂದಾಗಿದ್ದ ಸಾರಿಗೆ ನೌಕರರಿಗೆ ಸರ್ಕಾರವೇ ಮಾಸ್ಟರ್ ಸ್ಟ್ರೋಕ್ ನೀಡಿದೆ. ವರ್ಷದ ಮೊದಲ ದಿನದಿಂದಲೇ ಸಾರಿಗೆ ನೌಕರರಿಗೆ ಶಾಕ್ ಉಂಟಾಗಲಿದೆ. ಸಾರಿಗೆ ಇಲಾಖೆಯ ಯಾವುದೇ ನೌಕರರು ಮುಂದಿನ 6 ತಿಂಗಳು ಮುಷ್ಕರ ನಡೆಸದಂತೆ ಆದೇಶ ಹೊರಡಿಸುವ ಮೂಲಕ ನೌಕರರಿಗೆ ಬಿಸಿಯನ್ನು ಮುಟ್ಟಿಸಿದೆ.

ಬೆಂಗಳೂರು (ಡಿ.29):   ಸರ್ಕಾರಕ್ಕೆ ಶಾಕ್ ನೀಡಲು ಮುಂದಾಗಿದ್ದ ಸಾರಿಗೆ ನೌಕರರಿಗೆ ಸರ್ಕಾರವೇ ಮಾಸ್ಟರ್ ಸ್ಟ್ರೋಕ್ ನೀಡಿದೆ. ವರ್ಷದ ಮೊದಲ ದಿನದಿಂದಲೇ ಸಾರಿಗೆ ನೌಕರರಿಗೆ ಶಾಕ್ ಉಂಟಾಗಲಿದೆ. ಸಾರಿಗೆ ಇಲಾಖೆಯ ಯಾವುದೇ ನೌಕರರು ಮುಂದಿನ 6 ತಿಂಗಳು ಮುಷ್ಕರ ನಡೆಸದಂತೆ ಆದೇಶ ಹೊರಡಿಸುವ ಮೂಲಕ ನೌಕರರಿಗೆ ಬಿಸಿಯನ್ನು ಮುಟ್ಟಿಸಿದೆ.

ರಾಜ್ಯ ಸರ್ಕಾರದ ವಿರುದ್ಧ ಹಲವು ಬೇಡಿಕೆಗಳನ್ನು ಇಟ್ಟು ಸಾರಿಗೆ ಇಲಾಖೆ ನೌಕರರು ಪ್ರತಿಭಟನೆ ಮಾಡುತ್ತಲೇ ಇದ್ದರು. ಪ್ರತಿ ಬಾರಿ ವಿಧಾನಸಭಾ ಅಧಿವೇಶನ ನಡೆದಾಗಲೂ ಸಾರಿಗೆ ನೌಕರರು ತಮ್ಮ ಬೇಡಿಕೆ ಮುಂದಿಟ್ಟು ಪ್ರತಿಭಟನೆ ಮಾಡುವುದು ಮಾಮೂಲಿ ಆಗಿತ್ತು. ಆದರೆ, ಇದರಿಂದ ನೌಕರರು ಕೆಲಸದಲ್ಲಿ ಇದ್ದರೂ ಅವರಿಂದ ಕೆಲಸ ಮಾಡಿಸಲಾಗದೇ ಸಾರಿಗೆ ನಿಗಮ ತುಂಬಾ ಸಂಕಷ್ಟಕ್ಕೆ ಸಿಲುಕಿತ್ತು. ಇದರಿಂದ ಪ್ರಯಾಣಿಕರಿಗೆ ಸೂಕ್ತ ಪ್ರಮಾಣದಲ್ಲಿ ಸೇವೆ ನೀಡಲಾಗದೇ ಪರದಾಡವ ಸ್ಥಿತಿಯಲ್ಲಿತ್ತು. ಇಷ್ಟಾದರೂ ಪ್ರತಿಭಟನೆಯಿಂದ ಹಿಂದೆ ಸರಿಯದ ನೌಕರರ ವಿರುದ್ಧ ಚಾಟಿಯನ್ನು ಬೀಸಿದೆ.

ಬೇಡಿಕೆ ಈಡೇರಿಕೆಗೆ ಮತ್ತೆ ಕೆಎಸ್‌ಆರ್‌ಟಿಸಿ ನೌಕರರಿಂದ ಹೋರಾಟ

ಮುಷ್ಕರ ಯೋಜನೆ ಇದ್ದರೆ ಈಗಲೇ ಕೈಬಿಡಿ: ಸರ್ಕಾರದ ವಿರುದ್ಧ ಸಾರಿಗೆ ನೌಕರರು ಮುಷ್ಕರಕ್ಕೆ ಪ್ಲ್ಯಾನ್ ಮಾಡಿದ್ದರೆ ಅದನ್ನು ಕೈಬಿಟ್ಟು ಈಗಲೇ ಸೈಲೆಂಟ್‌ ಆಗುವುದು ಅನಿವಾರ್ಯ ಆಗಿದೆ. ಇದಕ್ಕೆ ಕಾರಣ ಮುಂದಿನ 6 ತಿಂಗಳು ಮುಷ್ಕರ ನಡೆಸದಂತೆ ಆದೇಶ ಹೊರಡಿಸಲಾಗಿದೆ. ಕರ್ನಾಟಕ ಆಗತ್ಯ ಸೇವಾ ನಿರ್ವಾಹಣೆ ಕಾಯ್ದೆ 2013 ರ ಅಡಿ ಆದೇಶ ಹೊರಡಿಸಿದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ದಿನಾಂಕ ಜನವರಿ 1 ರಿಂದ ಜೂನ್ 30ರವರೆಗೆ ನಿಗಮದಲ್ಲಿ ಮುಷ್ಕರ ನಿರ್ಬಂಧಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಮುಷ್ಕರ ಹತ್ತಿಕ್ಕಲು ಕ್ರಮ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಕಾರ್ಮಿಕ ವಿಭಾಗದ ವತಿಯಿಂದ ಸಾರಿಗೆ ನೌಕರರ ಮುಷ್ಕರ ಹತ್ತಿಕ್ಕುವ ಯತ್ನ ಮಾಡಲಾಗಿದೆ. ಈ ಸಂಬಂಧ ಸರ್ಕಾರದ ಅಧಿಸೂಚನೆ ಪ್ರತಿಯನ್ನ ಎಲ್ಲ ಘಟಕ, ಕಾರ್ಯಗಾರ, ಕಛೇರಿ ಬಸ್ ನಿಲ್ದಾಣಗಳ ಸೂಚನ ಫಲಕಗಳಲ್ಲಿ ತಪ್ಪದೆ ಪ್ರಕಟಿಸುವಂತೆ ಸೂಚನೆ ನೀಡಲಾಗಿದೆ. ಕಾರ್ಮಿಕ ಸಂಘಟನೆಗಳಿಗೂ ಪ್ರತಿ ತಲುಪಿಸುವಂತೆ ಸರ್ಕಾರದ ಸೂಚನೆ ನೀಡಿದೆ. ಚುನಾವಣೆ ಸಂದರ್ಭದಲ್ಲಿ ಸರ್ಕಾರಕ್ಕೆ ಸಾರಿಗೆ ನೌಕರರು ತಲೆ ಬಿಸಿಯಾಗಿದ್ದು, ಇದನ್ನು ತಪ್ಪಿಸಿಕೊಳ್ಳಲು ತಂತ್ರ ರೂಪಿಸಿದೆ.

ಇಂದು ಬೆಂಗಳೂರಿಗರಿಗೆ ತಟ್ಟಲಿದೆ ಆಟೋ ಮುಷ್ಕರದ ಬಿಸಿ..!

ಮತ್ತೆ ಕೆಎಸ್‌ಆರ್‌ಟಿಸಿ ನೌಕರ ಹೋರಾಟ: ಈ ಹಿಂದೆ ನಡೆದ ಸಾರಿಗೆ ಮುಷ್ಕರದ ವೇಳೆ ಅಮಾನತುಗೊಂಡಿರುವ 584 ನೌಕರರನ್ನು ಬೇಷರತ್ತಾಗಿ ಮರು ನೇಮಕ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸಾರಿಗೆ ನೌಕರರು ಡಿ. 19ರಿಂದ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಕುಟುಂಬ ಸದಸ್ಯರೊಂದಿಗೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಬೆಳಗಾವಿಯಲ್ಲಿ ವಿಧಾನಮಂಡಳದ ಅಧಿವೇಶನ ಹಿನ್ನೆಲೆಯಲ್ಲಿ ಹೋರಾಟ ಆರಂಭಿಸಿದ್ದು, ಸೇವೆ ನಿಲ್ಲಿಸದೆ ವಾರದ ರಜೆ ಇರುವ ನೌಕರರು ಧರಣಿಯಲ್ಲಿ ಪಾಲ್ಗೊಂಡಿದ್ದರು. 

ನೌಕರರ ವಿವಿಧ ಬೇಡಿಕೆಗಳೇನು?: ಈ ವೇಳೆ ಸಾರಿಗೆ ಮುಷ್ಕರದ ವೇಳೆ ಅಮಾನತು ಮಾಡಿರುವ 584 ನೌಕರರನ್ನು ಬೇಷರತ್ತಾಗಿ ಪುನಃ ನೌಕರರಿಗೆ ಸೇರ್ಪಡೆ ಮಾಡಬೇಕು. ನೌಕರರು ಹಾಗೂ ಕುಟುಂಬದವರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು. ಸರ್ಕಾರದ ಇಲಾಖೆ, ನಿಗಮ-ಮಂಡಳಿಯಲ್ಲಿ ಇರುವಂತೆ ಆರನೇ ವೇತನ ಆಯೋಗದ ಮಾದರಿಯನ್ನು ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ನೌಕರರಿಗೂ ಅನ್ವಯಿಸುವಂತೆ ತಕ್ಷಣ ಆದೇಶ ಹೊರಡಿಸಬೇಕು. ಕಾರ್ಮಿಕ ಸಂಘದ ಚುನಾವಣೆ ನಡೆಸುವ ಬಗ್ಗೆ ಕ್ರಮ ವಹಿಸಬೇಕು. ಸಾರಿಗೆ ಸಂಸ್ಥೆಯನ್ನು ಖಾಸಗೀಕರಣ ಮಾಡುವ ಧೋರಣೆ ಕೈ ಬಿಡಬೇಕು ಎಂದು ಒತ್ತಾಯಿಸಿದ್ದರು.

click me!