
ಬೆಂಗಳೂರು, (ಜು.18): ರಾಜ್ಯದಲ್ಲಿ ನಾಳೆಯಿಂದ (ಜು.19) ಅನ್ ಲಾಕ್-4.0 ಜಾರಿಗೆ ಬರಲಿದ್ದು, ಲಾಕ್ ಡೌನ್ ನಿಯಮದಲ್ಲಿ ಇನ್ನಷ್ಟು ಸಡಿಲಿಕೆ ಮಾಡಲಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಇಂದು (ಜುಲೈ 18) ತಮ್ಮ ನಿವಾಸದಲ್ಲಿ ಸಚಿವರು ಹಾಗು ಅಧಿಕಾರಿಗಳ ಜೊತೆ ಕೊರೋನಾ ಕುರಿತು ಚರ್ಚೆ ನಡೆಸಿದ್ದು ಶೇ.50ರಷ್ಟು ಚಿತ್ರಮಂದಿರಗಳನ್ನು ತೆರೆಯಲು ನಿರ್ಧಾರ ಕೈಗೊಳ್ಳಲಾಗಿದೆ.
ಕರ್ನಾಟಕದಲ್ಲಿ ಶಾಲೆ ಪ್ರಾರಂಭ ಯಾವಾಗ? ಸುಳಿವು ಕೊಟ್ಟ ಸುರೇಶ್ ಕುಮಾರ್
ಇನ್ನು ನೈಟ್ ಕರ್ಫ್ಯೂನ ರಾತ್ರಿ 10 ರಿಂದ ಬೆಳಗ್ಗೆ 5 ರ ವರಗೆ ವಿಧಿಸಲು ತೀರ್ಮಾನಿಸಲಾಗಿದೆ. ಇನ್ನು ಈ ಸಭೆಯಲ್ಲಿ ಪಬ್ ಮತ್ತು ಈಜುಕೊಳ ತೆರೆಯಲು ಅನುಮತಿ ನೀಡಿಲ್ಲ.
ಸುಮಾರು ಮೂರು ತಿಂಗಳಿನಿಂದ ಬಂದ್ ಆಗಿದ್ದ ಚಿತ್ರಮಂದಿರಗಳನ್ನು ಶೇಕಡಾ 50ರಷ್ಟು ಪ್ರೇಕ್ಷಕರೊಂದಿಗೆ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಜೊತೆಗೆ ಜುಲೈ 26ರಿಂದ ಪದವಿ ಕಾಲೇಜು ತೆರೆಯಲು ಅವಕಾಶ ನೀಡಲಾಗಿದ್ದು, ಆಫ್ಲೈನ್ ತರಗತಿಗೆ ಹಾಜರಾಗಲು ಲಸಿಕೆ ಪಡೆದಿರಬೇಕು. 1 ಡೋಸ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.
* ದೇವಸ್ಥಾನಗಳಲ್ಲಿ ಇದ್ದ ನಿರ್ಬಂಧ ಸಂಪೂರ್ಣ ತೆರವು
* ಜುಲೈ 26ರಿಂದ ಪದವಿ ತರಗತಿಗಳು ಆರಂಭ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಮೊದಲ ಡೋಸ್ ಕಡ್ಡಾಯ
* ನೈಟ್ ಕರ್ಫ್ಯೂ ರಾತ್ರಿ 9ಗಂಟೆಯ ಬದಲಾಗಿ 10ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಜಾರಿ
* ಒಳಾಂಗಣ ಚಿತ್ರೀಕರಣಕ್ಕೆ ಅವಕಾಶವಿಲ್ಲ
* ಮದುವೆ ಸಮಾರಂಭಗಳಿಗೆ ಈ ಮೊದಲು ಇದ್ದ ನಿರ್ಬಂಧ ಮುಂದುವರಿಕೆ, 100 ಜನರಿಗೆ ಅವಕಾಶ
* ಅಂತ್ಯ ಸಂಸ್ಕಾಕ್ಕೆ 20 ಜನರಿಗೆ ಅವಕಾಶ
* ಪಬ್, ಕ್ಲಬ್ ಗಳು ಸದ್ಯಕ್ಕೆ ಓಪನ್ ಇಲ್ಲ
* ಈಜುಕೊಳಗಳಿಗೆ ಸದ್ಯಕ್ಕೆ ಅವಕಾಶವಿಲ್ಲ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ