ಕರ್ನಾಟಕದಲ್ಲಿ ಬಿಯರ್ ಪ್ರಿಯರಿಗೆ ಮತ್ತೊಂದು ಆಘಾತ ಕಾದಿದೆ. ಸರ್ಕಾರವು ಬಿಯರ್ ದರವನ್ನು ಮತ್ತೆ ಹೆಚ್ಚಿಸಲು ನಿರ್ಧರಿಸಿದೆ. ಮೂರು ಹೊಸ ಸ್ಲ್ಯಾಬ್‌ಗಳ ಅಡಿಯಲ್ಲಿ ಬಿಯರ್ ದರವನ್ನು ಪ್ರತಿ ಬಾಟಲಿಗೆ ₹10 ರಿಂದ ₹12 ರೂ. ವರೆಗೆ ಹೆಚ್ಚಿಸಲು ಮುಂದಾಗಿದೆ.
ಬೆಂಗಳೂರು (ಸೆ.10): ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಎಲ್ಲ ಗ್ಯಾರಂಟಿಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದುಕೊಂಡಿದ್ದೇವೆ ಎಂದು ಹೇಳುತ್ತಿದೆ. ಆದರೆ, ಅಧಿಕಾರಕ್ಕೆ ಬಂದು ಕೇವಲ ಒಂದೂವರೆ ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಮೂರನೇ ಬಾರಿ ಮದ್ಯದ ದರ ಹೆಚ್ಚಳಕ್ಕೆ ಮುಂದಾಗಿದೆ.
ಹೌದು, ರಾಜ್ಯ ಸರ್ಕಾರದಿಂದ ಎಣ್ಣೆ ಪ್ರಿಯರಿಗೆ ಶಾಕ್ ಮೇಲೆ ಶಾಕ್ ನೀಡಲು ಮುಂದಾಗಿದೆ. ಮದ್ಯ ಪ್ರಿಯರಿಗೆ ಮತ್ತೆ ಬೆಲೆ ಏರಿಕೆ ಭಾಗ್ಯ ನೀಡುವುದು ಫಿಕ್ಸ್ ಆಗಿದೆ. ಶೀಘ್ರದಲ್ಲೇ ರಾಜ್ಯದಲ್ಲಿ ದುಬಾರಿಯಾಗಲಿದೆ. ಬಿಯರ್ ಮಾರಾಟ ದರವನ್ನು ಹೆಚ್ಚಳ ಮಾಡುವುದಕ್ಕೆ ಮುಂದಾಗಿದೆ. ಇದಾಗಲೇ ಕಳೆದ ಜನವರಿ ತಿಂಗಳಲ್ಲಿ ಎಲ್ಲ ಬಿಯರ್ ಬ್ರ್ಯಾಂಡ್‌ಗಳ ಬೆಲೆಯಲ್ಲಿ ಸರ್ಕಾರದಿಂದ ಶೇ.20ರವರೆಗೆ ದರ ಹೆಚ್ಚಳ ಮಾಡಲಾಗಿತ್ತು. ಆದರೆ, ಪುನಃ ಏಳು ತಿಂಗಳು ಕಳೆದ ನಂತರ ಪುನಃ ಮತ್ತೊಮ್ಮೆ ದರ ಏರಿಕೆಗೆ ಮುಂದಾಗಿದೆ.
undefined
ಇನ್ನು ಕಳೆದ ತಿಂಗಳು ಆ.29ರಂದು ಪ್ರೀಮಿಯಂ ಬ್ರ್ಯಾಂಡ್ ದರ ಇಳಿಕೆ ಮಾಡಿತ್ತು. ಅಂದರೆ ಎಲ್ಲ ಪ್ರೀಮಿಯಂ ಮದ್ಯಗಳು ಎಂದರೆ ಶ್ರೀಮಂತರು ಕುಡಿಯುವಂತ ಬ್ರ್ಯಾಂಡ್‌ಗಳಾಗಿವೆ. ಇವುಗಳ ಫುಲ್ ಬಾಟಲ್ ಮಾರಾಟದ ಮೇಲೆ ದ್ವಲ್ಪ ದರ ಇಳಿಕೆ ಮಾಡಿತ್ತು. ಇದರಿಂದ ಸಾಮಾನ್ಯ ವರ್ಗದ ಜನರು, ಕೂಲಿ ಕಾರ್ಮಿಕರು, ರೈತರು ಸೇರಿದಂತೆ ಕೆಳ ಹಂತದ ವರ್ಗದ ಮದ್ಯ ಪ್ರಿಯರಿಗೆ ಇದರಿಂದ ಯಾವುದೇ ಅನುಕೂಲವೂ ಆಗಿರಲಿಲ್ಲ. ಇದೀಗ ರಾಜ್ಯ ಸರ್ಕಾರದಿಂದ ಪುನಃ ಬಿಯರ್ ದರ ಹೆಚ್ಚಳಕ್ಕೆ ಮುಂದಾಗಿದೆ.
ರಾಜ್ಯ ಸರ್ಕಾರದಿಂದ ಬಿಯರ್ ದರ ಏರಿಕೆ ಮಾಡಲು ಸರ್ಕಾರ ತಯಾರಿ ಮಾಡಿಕೊಂಡಿದೆ. ಈಗಾಗಲೇ ಬಿಯರ್ ದರ ಹೆಚ್ಚಳಕ್ಕೆ ಸರ್ಕಾರದಿಂದ ಕರಡು ಹೊರಡಿಸಲಾಗಿದೆ. ಬಿಯರ್ ದರ ಹೆಚ್ಚಿಸಿ ಮದ್ಯಪ್ರಿಯರಿಗೆ ಅಘಾತ ನೀಡಲು ಎಲ್ಲ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ. ಪ್ರತಿ ಬಾಟಲ್ ಬಿಯರ್ ಮೇಲೆ ಬರೋಬ್ಬರಿ 10 ರೂ.ಗಳಿಂದ 12 ರೂ.ಗಳವರೆಗೆ ದರ ಹೆಚ್ಚಳ ಮಾಡಲು ತೀರ್ಮನಿಸಲಾಗಿದೆ. ಪ್ರತಿ ಬಿಯರ್ ಸ್ಲ್ಯಾಬ್ ಗಳ ಮೇಲೆ ದರ ಏರಿಕೆ ಮಾಡಲು ತಯಾರಿ ನಡೆಸಿದೆ.
ರಾಜ್ಯದಲ್ಲಿ ಪ್ರಸ್ತುತ ಬಿಯರ್ ಮಾರಾಟ ಮಾಡುವ ವೇಳೆ ಒಂದು ಸ್ಲ್ಯಾಬ್ ಮಾದರಿಯಲ್ಲಿ ಮಾತ್ರ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ, ಇದೀಗ ದರ ಹೆಚ್ಚಳ ಮಾಡಿದ ನಂತರ ಎಲ್ಲ ಬಿಯರ್‌ಗಳನ್ನು ಮೂರು ಸ್ಲ್ಯಾಬ್‌ಗಳನ್ನಾಗಿ ಮಾಡಿ ಮಾರಾಟ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ. ಶೀಘ್ರವೇ ಎಲ್ಲ ಬಿಯರ್ ಬ್ರ್ಯಾಂಡ್‌ಗಳನ್ನು ಸ್ಲ್ಯಾಬ್ ಆಧಾರದಲ್ಲಿ ವರ್ಗೀಕರಣ ಮಾಡಿ ದರ ಹೆಚ್ಚಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಮುಂದಾಗುತ್ತಿದೆ ಎಂಬ ಸುಳಿವು ಲಭ್ಯವಾಗಿದೆ.
ಡಾ.ಪರಮೇಶ್ವರ ದ್ರಾಕ್ಷಿ ಗೋಡಂಬಿ ಹೋಮ್ ಮಿನಿಸ್ಟರ್: ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್!
ಬಿಯರ್ ಮಾರಾಟದಲ್ಲಿ 3 ಸ್ಲ್ಯಾಬ್ ಮಾಡಲು ತೀರ್ಮಾನ:
ಆದರೆ, ರಾಜ್ಯ ಸರ್ಕಾರದಿಂದ ಮೇಲೆ ತಿಳಿಸಲಾದ ಎಲ್ಲ ಸ್ಲ್ಯಾಬ್‌ಗಳ ಬಿಯರ್ ದರಗಳನ್ನೂ ಹೆಚ್ಚಳ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಶೀಘ್ರದಲ್ಲಿಯೇ ಬಿಯರ್ ದರ ಹೆಚ್ಚಳದ ಅಂತಿಮ ಬೆಲೆ ನಿಗದಿಪಡಿಸಿ ಸರ್ಕಾರದಿಂದ ಆದೇಶ ಪ್ರಕಟಿಸಲಾಗುತ್ತದೆ.