ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಶೀಘ್ರವೇ ಮುಟ್ಟಿನ ರಜೆ, ಸಿಎಂ ಪ್ರತಿಕ್ರಿಯೆ

By Gowthami K  |  First Published Jul 8, 2023, 7:35 PM IST

ರಾಜ್ಯದ ಸರ್ಕಾರಿ ಮಹಿಳಾ ನೌಕರರಿಗೆ ಮುಟ್ಟಿನ ಸಂದರ್ಭದಲ್ಲಿ ರಜೆ ನೀಡುವ ಬಗ್ಗೆ ಹಲವು ದಿನಗಳಿಂದ ಬೇಡಿಕೆ ಇದ್ದು, ಪರಿಶೀಲನೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.


ಬೆಂಗಳೂರು (ಜು.8): ರಾಜ್ಯದ ಸರ್ಕಾರಿ ಮಹಿಳಾ ನೌಕರರಿಗೆ ಮುಟ್ಟಿನ ಸಂದರ್ಭದಲ್ಲಿ ರಜೆ ನೀಡುವ ಬಗ್ಗೆ ಹಲವು ದಿನಗಳಿಂದ ಬೇಡಿಕೆ ಇದೆ. ಇದೀಗ ಉದ್ಯೋಗಸ್ತ  ಹೆಣ್ಮಕ್ಕಳಿಗೆ ಕೇವಲ ಮೂರು ರಾಜ್ಯಗಳಲ್ಲಿ ಮಾತ್ರ ಈ ರಜೆ ಇದೆ. ನಮ್ಮ‌ ರಾಜ್ಯದಲ್ಲಿ ಈ ಬಗ್ಗೆ ಯಾವಾಗ ತೀರ್ಮಾನ ಕೈಗೊಳ್ಳುತ್ತೀರಾ ಎಂಬ ಮುಟ್ಟಿನ ರಜೆ ಬಗ್ಗೆ ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು ನಮ್ಮ ರಾಜ್ಯದಲ್ಲಿ ಮುಟ್ಟಿನ ರಜೆ ಇಲ್ಲ. ಈ ಸಲಹೆಯನ್ನ ಪರಿಗಣನೆಗೆ ತೆಗೆದುಕೊಂಡು ಪರಿಶೀಲನೆ ನಡೆಸುತ್ತೇವೆ ಎಂದಿದ್ದಾರೆ.

ಈ ಮೂಲಕ ರಾಜ್ಯದ ಸರ್ಕಾರಿ ಮಹಿಳಾ ನೌಕರರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಇಂದು ನಗರದಲ್ಲಿ ಜನಮನ ಪ್ರತಿಷ್ಠಾನ ಮತ್ತು ಸಮತಾ ಅಧ್ಯಯನ ಕೇಂದ್ರ ದೇವರಾಜ ಅರಸು ಭವನದಲ್ಲಿ ಹಮ್ಮಿಕೊಂಡಿದ್ದ ಪ್ರಬುದ್ಧ ಕರ್ನಾಟಕ ಜನಮನ ಸಮಾವೇಶದ ಸಂವಾದದಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ಮಹಿಳಾ ಉದ್ಯೋಗಿ ಹಾಗೂ ವಿದ್ಯಾರ್ಥಿನಿಯರಿಗೆ ರಜೆ ಘೋಷಿಸಬೇಕು ಎನ್ನುವ ಬೇಡಿಕೆ ಬಗ್ಗೆ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

Latest Videos

undefined

ಶಾಲಾ ವಾಹನಕ್ಕೆ ಬಲಿಯಾದ ಮೂರು ವರ್ಷದ ಪುಟ್ಟ ಕಂದಮ್ಮ!

ಇನ್ನು ಮಹಿಳೆಯರ ಮೇಲಿನ ದೌರ್ಜನ್ಯ, ಟೀಕೆಗೆ ಕಡಿವಾಣ ಹಾಕುವ ವಿಚಾರವಾಗಿ ಮಾತನಾಡಿರುವ ಸಿದ್ದರಾಮಯ್ಯ, ಯಾವುದೇ ವ್ಯಕ್ತಿ ಆರ್ಥಿಕ, ಸಾಮಾಜಿಕ ಸಬಲರಾದ್ರೆ ಅವರ ಮೇಲಿನ ದೌರ್ಜನ್ಯ ಕಡಿಮೆಯಾಗಲಿದೆ. ಪುರುಷ ಪ್ರಧಾನ ಸಮಾಜ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ಅದನ್ನು ಬದಲಾಯಿಸುವ ಆಡಳಿತ ಕೊಡುವ ಪ್ರಯತ್ನ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕೋಮುಸಂಘರ್ಷ ಸೃಷಿಸುವವರನ್ನು ರಾಜಕೀಯವಾಗಿ ಅನರ್ಹ ಮಾಡಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಹೆಬ್ಬೆಟ್ಟು ಒತ್ತುವವನು,ಕ್ರಿಮಿನಲ್ ಕೇಸ್‌ ಇರುವವನು ಕೂಡ ಎಲೆಕ್ಷನ್‌ನಲ್ಲಿ ನಿಲ್ಲಬಹುದು. ಯಾವುದೇ ಅಪರಾಧ ಪ್ರಕರಣದಲ್ಲಿದ್ದರೂ ಕೂಡ ವ್ಯಕ್ತಿ ಚುನಾವಣೆಗೆ ನಿಲ್ಲಬಹುದು. ಅಪರಾಧಿ ಅಂತ ಆಗುವವರೆಗೂ ಚುನಾವಣೆಗೆ ನಿಲ್ಲಬಹುದು ಅಂತ ಇದೆ. ಕೋಮುಸಂಘರ್ಷದಲ್ಲಿ ಭಾಗಿಯಾಗುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.

ಪಾಕ್ ನಾರಿಯ ಹನಿಟ್ರ್ಯಾಪ್‌ನಲ್ಲಿ ಡಿಆರ್‌ಡಿಒ ವಿಜ್ಞಾನಿ, ಚಾರ್ಜ್​ಶೀಟಲ್ಲಿ​ ಬಯಲಾಯ್ತು ಭಯಾನಕ

ದಲಿತರ ಮೇಲಿನ ದೌರ್ಜನ್ಯ, ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಧಕ್ಕೆ  ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ, ಶಾಂತಿಯ ತೋಟವಾಗಬೇಕು ಅಂದ್ರೆ ಸಮಾನ ಸಮಾಜ ಸೃಷ್ಟಿಯಾಗಬೇಕು. ಕಾನೂನು ಕೈಗೆತ್ತಿಕೊಳ್ಳಬಾರದು. ಹಿಂದಿನ ಸರ್ಕಾರದ ಅವಧಿಯಲ್ಲಿ ಮಾರಲ್ ಪೋಲಿಸಿಂಗ್ ನಡೆದಿತ್ತು. ಅದು ಮಾರಲ್ ಪೋಲಿಸಿಂಗ್ ಅಲ್ಲ ಇಮ್ಮಾರಲ್ ಪೋಲಿಸಿಂಗ್. ನಾನು ಈಗಾಗಲೇ ಈ ವಿಚಾರದಲ್ಲಿ ಅದನ್ನು ಸ್ಪಷ್ಟ ಪಡಿಸಿದ್ದೇನೆ. ನೈತಿಕ ಪೋಲಿಸ್‌ಗಿರಿಗೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಕುವೆಂಪು ಹೇಳಿದ ಸರ್ವ ಜನಾಂಗದ ಶಾಂತಿಯ ತೋಟ ಸೃಷ್ಟಿಸಲು ಪ್ರಯತ್ನಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

click me!