ಕೊರೋನಾ ವೈರಸ್ ಲಾಕ್‌ಡೌನ್ 4ನೇ ಹಂತ ಮುಗಿದೆ. ಇದೀಗ ಅನ್‌ಲಾಕ್ 1 ಜಾರಿಯಾಗಿದೆ. ಆರಂಭಿಕ 2 ಹಂತದ ಲಾಕ್‌ಡೌನ್‌ನಲ್ಲಿ ಮೆತ್ತಗಿದ್ದ ಕೊರೋನಾ ವೈರಸ್ ಇದೀಗ ಭಾರತದಲ್ಲಿ ಅಟ್ಟಹಾಸ ಮೆರೆಯುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಕರ್ನಾಟಕ ಸರ್ಕಾರ ಇದೀಗ ಹೊಸ ಸೂತ್ರಕ್ಕೆ ಮುಂದಾಗಿದೆ. ರಾಜ್ಯದಲ್ಲಿ ರಿವರ್ಸ್ ಕ್ವಾರಂಟೈನ್‌ಗೆ ಪ್ಲಾನ್ ಮಾಡಿದೆ.
ಬೆಂಗಳೂರು(ಜೂ.08): ದೇಶದೆಲ್ಲೆಡೆ ಇಂದಿನಿಂದ ಅನ್‌ಲಾಕ್1 ಜಾರಿಯಲ್ಲಿದೆ. ನಿರ್ಬಂಧ ವಿದಿಸಿದ್ದ ಹಲವು ಕ್ಷೇತ್ರಗಳಿಗೆ ವಿನಾಯಿತಿ ನೀಡಲಾಗಿದೆ. ದೇಗುಲಗಳ ಬಾಗಿಲು ತೆರಯುಲು ಅವಕಾಶ ನೀಡಲಾಗಿದೆ. ಮೊದಲೇ ಕೊರೋನಾ ವೈರಸ್ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ಅನ್‌ಲಾಕ್ 1 ಹಂತದಲ್ಲಿ ಕೊರೋನಾ ವೈರಸ್ ಹರಡುವಿಕೆ ವೇಗ ಹೆಚ್ಚಾಗಲಿದೆ ಎಂದು ತಜ್ಞರ ತಂಡ ಸರ್ಕಾರಕ್ಕೆ ವರದಿ ನೀಡಿದೆ. ಇದರ ಬೆನ್ನಲ್ಲೇ ಕರ್ನಾಟಕ ಸರ್ಕಾರ ಕೊರೋನಾ ವೈರಸ್ ನಿಯಂತ್ರಣಕ್ಕೆ ರಿವರ್ಸ್ ಕ್ವಾರಂಟೈನ್ ಸೂತ್ರ ಅಳವಡಿಸಲು ಮುಂದಾಗಿದೆ.
ಮಹಾ ಎಡವಟ್ಟು: ಕೊರೋನಾ ವರದಿ ಬರುವ ಮೊದ್ಲೇ ಸೋಂಕಿತನನ್ನು ಮನೆಗೆ ಕಳುಹಿಸಿದ್ರು
ಕೊರೋನಾ ವೈರಸ್ ವಕ್ಕರಿಸಿದ ದಿನದಿಂದ ಕ್ವಾರಂಟೈನ್ ಪದ ಕೇಳುತ್ತಲೇ ಇದ್ದೇವೆ. ಇದೀಗ ರಿವರ್ಸ್ ಕ್ವಾರಂಟೈನ್ ಜಾರಿಯಾಗಲಿದೆ. ರಿವರ್ಸ್ ಕ್ವಾರಂಟೈನ್‌ನಲ್ಲಿ ಮುಖ್ಯವಾಗಿ ರಾಜ್ಯದ ಹಿರಿಯ ನಾಗರೀಕರು, ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರನ್ನು ಕ್ವಾರಂಟೈನ್ ಮಾಡಲಾಗುತ್ತದೆ. ಈ ಮೂಲಕ ಕೊರೋನಾ ಸೋಂಕು ಬಹುಬೇಗ ತಗುಲುವ ಮಂದಿಯನ್ನು ವೈರಸ್‌ನಿಂದ ರಕ್ಷಿಸುವ ಯೋಜನೆಯೇ ರಿವರ್ಸ್ ಕ್ವಾರಂಟೈನ್.
ಜೋಗ್ ಪಾಲ್ಸ್, ಸಕ್ರೆಬೈಲು ಆನೆ ಬಿಡಾರ, ತ್ಯಾವರೆಕೊಪ್ಪ ಸಿಂಹಧಾಮ ಡೋರ್ ಓಪನ್
60 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಹಾಗೂ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಎಲ್ಲರನ್ನು ಕ್ವಾರಂಟೈನ್ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಇತರರ ಸಂಪರ್ಕದಿಂದ ದೂರವಿರುವಂತೆ ಮಾಡಲಾಗುವುದು. ಕರ್ನಾಟಕದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರ ಸಂಖ್ಯೆ 57 ಲಕ್ಷ. ಇನ್ನು 15 ಲಕ್ಷ ಮಂದಿ ಹಲವು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಇವರನ್ನು ಹೋಮ್ ಕ್ವಾರಂಟೈನ್ ಮಾಡಲು ಸರ್ಕಾರ ಚಿಂತಿಸಿದೆ.
ರಾಜ್ಯದಲ್ಲಿ ಕೊರೋನಾ ವೈರಸ್ ಹರಡದಂತೆ ತಡೆಯುವುದು ನಮ್ಮ ಆದ್ಯ ಕರ್ತವ್ಯ. ಅದರಲ್ಲೂ ಹಿರಿಯ ನಾಗರೀಕರು, ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುವುದು. ಇದಕ್ಕಾಗಿ ರಿವರ್ಸ್ ಕ್ವಾರಂಟೈನ್ ಪ್ಲಾನ್ ಮಾಡುತ್ತಿದ್ದೇವೆ. ಈ ಕುರಿತು ತಜ್ಞರ ಸಲಹೆ ಕೇಳಿದ್ದೇವೆ ಎಂದು ಉಪಮುಖ್ಯಮಂತ್ರಿ ಸಿಎನ್ ಆಶ್ವತ್ಥ ನಾರಾಯಣ ಹೇಳಿದ್ದಾರೆ.
ರಿವರ್ಸ್ ಕ್ವಾರಂಟೈನ್ ವಿಧಾನವನ್ನು ಕೇರಳದಲ್ಲಿ ಜಾರಿಗೆ ತರಲಾಗಿದೆ. ಕೇರಳದಲ್ಲಿನ ಕ್ಯಾನ್ಸರ್ ಪೀಡಿತರನ್ನು ರಿವರ್ಸ್ ಕ್ವಾರಂಟೈನ್ ಮಾಡಲಾಗಿದೆ. ಈ ಮೂಲಕ ಇವರಿಗೆ ಕೊರೋನಾ ಸೋಂಕು ಬರದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕದಲ್ಲಿ ಇದೇ ರೀತಿ ಹಿರಿಯ ನಾಗರಿಕರನ್ನು ಹಾಗೂ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಎಲ್ಲರನ್ನು ಕ್ವಾರಂಟೈನ್ ಮಾಡಲು ಸೂಕ್ತ ವ್ಯವಸ್ಥೆಯಾಗಬೇಕಿದೆ. ಹೀಗಾಗಿ ಈ ಕುರಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಅಶ್ವತ್ಥ ನಾರಾಯಣ ಹೇಳಿದ್ದಾರೆ.