ಅನ್ನದಾತರಿಗೆ ಗುಡ್‌ನ್ಯೂಸ್: ಇಂದಿನಿಂದಲೇ ರೈತರ ಪಂಪ್‌ಸೆಟ್‌ಗಳಿಗೆ 7 ತಾಸು ವಿದ್ಯುತ್‌ ನೀಡಲು ಸಿಎಂ ಸಿದ್ದರಾಮಯ್ಯ ಆದೇಶ

By Sathish Kumar KH  |  First Published Nov 6, 2023, 1:12 PM IST

ರೈತರಿಗೆ ಗುಡ್‌ ನ್ಯೂಸ್‌ ನೀಡಿದ ಸಿಎಂ ಸಿದ್ದರಾಮಯ್ಯ. ಇಂದಿನಿಂದಲೇ ರೈತರ ಪಂಪ್‌ಸೆಟ್‌ಗಳಿಗೆ 7 ಗಂಟೆ ತ್ರಿಫೇಸ್‌ ವಿದ್ಯುತ್‌ ಪೂರೈಕೆ ಮಾಡಲಾಗುತ್ತದೆ.


ಬೆಂಗಳೂರು (ನ.06): ರಾಜ್ಯದಲ್ಲಿ ಮಳೆಯ ಅಭಾವದಿಂದ ವಿದ್ಯುತ್‌ ಉತ್ಪಾದನೆ ಕುಂಠಿತವಾದ ಹಿನ್ನೆಲೆಯಲ್ಲಿ ರೈತರಿಗೆ ಪೂರೈಕೆ ಮಾಡುವ 3 ಫೇಸ್‌ ವಿದ್ಯುತ್‌ ಅನ್ನು 5 ಗಂಟೆ ಕೊಡಲು ನಿರ್ಧಾರ ಮಾಡಿದ್ದೆವು. ಆದರೆ, ಈಗ 5 ಗಂಟೆ ವಿದ್ಯುತ್‌ ಸಾಕಾಗುತ್ತಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಪ್ರತಿನಿತ್ಯ 7 ಗಂಟೆಯ ಕಾಲ ತ್ರಿಫೇಸ್‌ ವಿದ್ಯುತ್‌ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ.

ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂಧನ ಇಲಾಖೆಯ ಜೊತೆ ಪರಿಶೀಲನೆ ಸಭೆ ನಡೆಸಿದ್ದೇನೆ. 7 ಗಂಟೆ ವಿದ್ಯುತ್ ಕೊಡ್ತೀವಿ ಅಂತ ಹೇಳಿದ್ದೆವು. ಆದರೆ, ನಾವು 5 ಗಂಟೆ ಕೊಡುತ್ತಿದ್ದೆವು. ಏಕೆಂದರೆ ಕೆಲವರು ರೈತರ ಪಂಪ್‌ಸೆಟ್‌ಗಳಿಗೆ 5 ಗಂಟೆ ಸಾಕು ಎಂದಿದ್ದರು. ಹೀಗಾಗಿ, 5 ಗಂಟೆ ತ್ರಿಫೇಸ್‌ ವಿದ್ಯುತ್‌ ನೀಡಿ ಎಂದು ಸೂಚನೆ ನೀಡಿದ್ದೆನು. ಆದರೆ, ಈಗ 5 ಗಂಟೆಗೆ ಸಾಕಗಲ್ಲ ಎಂಬ ಬೇಡಿಕೆ ಸಹ ಬಂದಿತ್ತು. ಆದ್ದರಿಂದ ಭತ್ತ ಬೆಳೆಯುವಂತಹ ಪ್ರದೇಶ ಸೇರಿ ಕೆಲವು ಭಾಗಗಳಲ್ಲಿ 7 ಗಂಟೆ ತ್ರಿಫೇಸ್‌ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿತ್ತು. ಆದರೆ, ಈಗ ರಾಜ್ಯದ ಎಲ್ಲಾ ಕಡೆ 7 ಗಂಟೆ ವಿದ್ಯುತ್ ಕೊಡಲು ಸೂಚಿಸಿದ್ದೇನೆ ಎಂದು ತಿಳಿಸಿದರು.

Tap to resize

Latest Videos

 ರೈಲು ಪ್ರಯಾಣಿಕರೇ ಎಚ್ಚರ: ನಿಮ್ಮನ್ನು ರಕ್ಷಣೆ ಮಾಡೋ ಪೊಲೀಸಪ್ಪನೇ ರಾತ್ರಿ ದರೋಡೆ ಮಾಡೋಕೆ ಬರ್ತಾನೆ!

ಸರ್ಕಾರಿ ಪ್ರಾಥಮಿಕ ಶಾಲೆ, ಜೂನಿಯರ್‌ ಕಾಲೇಜುಗಳಿಗೆ ಉಚಿತ ವಿದ್ಯುತ್: 
ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಹಾಗೂ ಅಮೃತ  ಜ್ಯೋತಿ ಯೋಜನೆಯಡಿ ವಿದ್ಯುತ್‌ ಬಳಸಿದ 389.66 ಕೋಟಿ ರೂ. ಬಾಕಿ ಉಳಿದಿತ್ತು. ಹೀಗಾಗಿ, ಬಾಕಿ ಹಣವನ್ನ ನಾವು ಒನ್ ಟೈಂ ಮನ್ನಾ ಮಾಡಿದ್ದೇವೆ.  ಇನ್ನು ಸರ್ಕಾರಿ ಪ್ರಾಥಮಿಕ ಸ್ಕೂಲ್, ಜೂನಿಯರ್ ಕಾಲೇಜುಗಳಿಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ನವೆಂಬರ್‌ 1ರ ಕನ್ನಡ ರಾಜ್ಯೋತ್ಸವದ ದಿನದಂದು ಘೋಷಣೆ ಮಾಡಿದ್ದೆನು. ಅದರಂತೆ ಸರ್ಕಾರದಿಂದಲೇ ಪ್ರಾಥಮಿಕ ಶಾಲೆಗಳು ಮತ್ತು ಜೂನಿಯರ್‌ ಕಾಲೇಜುಗಳಲ್ಲಿ ಬಳಕೆಯಾಗುವ ವಿದ್ಯುತ್‌ ಅನ್ನು ಸರ್ಕಾರದಿಂದ ಭರಿಸಲಾಗುತ್ತದೆ ಎಂದು ತಿಳಿಸಿದರು.

ತಾನೆಷ್ಟು ದಿನ ಸಿಎಂ ಅಂತ ಸಿದ್ದರಾಮಯ್ಯಗೆ ಗೊತ್ತಿಲ್ಲ: ಪ್ರಧಾನಿ ಮೋದಿ

ಪಿಎಂ ಮೋದಿಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜಕೀಯ ಭಾಷಣ ಮಾಡಿದ್ದಾರೆ. ಅವರು ಮಾತನಾಡುವ ಮುನ್ನ ದಾಖಲಾತಿಗಳನ್ನ ಇಟ್ಟುಕೊಂಡು ಮಾತನಾಡಲಿ. ಸುಳ್ಳು ಹೇಳಬಾರದು. ದೇಶ ಆರ್ಥಿಕವಾಗಿ ದಿವಾಳಿಯಾಗಿದೆ. ಅವರಿಂದ ಈವರೆಗೆ ಬರಗಾಲದ ಹಣವನ್ನು ಕೊಡೋಕೆ ಆಗಿಲ್ಲ. ಕರ್ನಾಟಕ ಕಾಂಗ್ರೆಸ್‌ 5 ಗ್ಯಾರಂಟಿ ಕೊಡೋಕೆ ಆಗಲ್ಲ ಅಂದಿದ್ದರು. ಆದರೆ, ಈಗ ನಾವು ಮಾಡಿಲ್ವಾ? ಪ್ರಧಾನ ಮಂತ್ರಿಗಳಿಗೆ ಇದು ಶೋಭೆ ತರಲ್ಲ ಈ ರೀತಿಯ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ತಿರುಗೇಟು ನೀಡಿದ್ದಾರೆ. 

click me!