
ಬೆಂಗಳೂರು(ಏ.30): ವಿಶ್ವವೇ ರಂಜಾನ್ ಹಬ್ಬದ ಆಚರಣೆಗೆ ಸಕಲ ತಯಾರಿಯಲ್ಲಿದೆ. ಮುಸ್ಲಿಮ್ ಬಾಂಧವರ ಪವಿತ್ರ ಹಬ್ಬದ ಆಚರಣೆಗೆ ಇದೀಗ ಕರ್ನಾಟಕ ಸರ್ಕಾರ ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ ಮಾಡಿದೆ. ಮೇ.03ರ ಬದಲು ಮೇ 02ರಂದೆ ರಂಜಾಬ್ ಹಬ್ಬ ಆಚರಿಸುತ್ತಿರುವ ಕಾರಣ ಸಾರ್ವತ್ರಿಕ ರಜೆಯನ್ನು ಮೇ02ಕ್ಕೆ ನೀಡಲಾಗಿದೆ.
ಈ ಮೊದಲು ಸಾರ್ವತ್ರಿಕ ರಜೆ ಪಟ್ಟಿಯಲ್ಲಿ ರಂಜಾನ್ ಹಬ್ಬಕ್ಕೆ ಮೇ 3ರಂದು ರಜೆ ನೀಡಲಾಗಿತ್ತು. ಆದ್ರೆ, ಇದೀಗ ಮೂನ್ ಕಮಿಟಿ ಮೇ 2ರಂದು ರಂಜಾನ್ ಆಚರಿಸಲು ತೀರ್ಮಾನಿಸಿದ್ದರಿಂದ ರಾಜ್ಯ ಸರ್ಕಾರ ರಜೆಯಲ್ಲಿ ಬದಲಾವಣೆ ಮಾಡಲಾಗಿದೆ. ಮೇ3ರ ಬದಲಿಗೆ ಮೇ 2ರಂದು ರಜೆ ಘೋಷಣೆ ಮಾಡಲಾಗಿದೆ.
ರಂಜಾನ್: ಉಪವಾಸ ಮುಗಿಸುವಾಗ ಇಂಥ ತಪ್ಪುಗಳನ್ನೆಲ್ಲಾ ಮಾಡಬೇಡಿ
ಈ ಕುರಿತು ಅಧಿಸೂಚನೆ ಹೊರಡಿಸಿರುವ ಸರ್ಕಾರ ರಂಜಾನ್ ಹಬ್ಬದ ಸಾರ್ವತ್ರಿಕ ರಜೆ ಬದಲಾವಣೆ ಮಾಡಿರುವುದಾಗಿ ಹೇಳಿದೆ.
ರಂಜಾನ್ ಸೌಹಾರ್ದತೆಯ ಸಂಕೇತ
ರಂಜಾನ್ ತಿಂಗಳು ಪ್ರತಿಯೊಬ್ಬ ಮುಸ್ಲಿಮರಿಗೆ ಪವಿತ್ರ ತಿಂಗಳಾಗಿದ್ದು ದೇವರನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವ ಮಾರ್ಗವಾಗಿದೆ. ಅಲ್ಲದೇ ಇದು ಸೌಹಾರ್ದತೆ ಬೆಸೆಯುವ ಸಂಕೇತವಾಗಿದೆ ಎಂದು ಅಸ್ಕಿ ¶ೌಂಡೇಶನ್ ಅಧ್ಯಕ್ಷ ಸಮಾಜ ಸೇವಕ ಸಿ.ಬಿ.ಅಸ್ಕಿ (ಕೊಣ್ಣೂರ) ಹೇಳಿದರು.
ಈದ್ ಹಬ್ಬದ ಪ್ರಯುಕ್ತ ಒಂಟೆ ಹರಾಜು, ಬರೋಬ್ಬರಿ 14 ಕೋಟಿ ರೂಗೆ ಮಾರಾಟ!
ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಪವಿತ್ರ ರಂಜಾನ್ ಹಬ್ಬದ ನಿಮಿತ್ತ ಬುಧವಾರ ಮುಸ್ಲಿಂ ಬಾಂದವರಿಗಾಗಿ ಅಸ್ಕಿ ಫೌಂಡೇಶನ್ ವತಿಯಿಂದ ಆಯೋಜಿಸಲಾದ ಇಪ್ತಿಯಾರ್ ಕೂಟ ಕಾರ್ಯಕ್ರಮದಲ್ಲಿ ಮುಸ್ಲಿಂ ಬಾಂಧವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹಬ್ಬ ಹರಿದಿನಗಳು ಪರಸ್ಪರ ಬಾಂಧವ್ಯ ಬೆಸೆಯುವಂತವುಗಳಾಗಿವೆ. ಎಲ್ಲರೂ ಕೂಡಿ ಹಬ್ಬ ಹರಿದಿನಗಳನ್ನು ಆಚರಿಸಿದರೆ ಸಮಾಜದಲ್ಲಿ ಸಂತೋಷ ನೆಮ್ಮದಿ ಶಾಂತಿ ಸದಾಕಾಲ ನೆಲಸಲಿದೆ ತಿಂಗಳ ಪರ‍್ಯಂತ ಮುಸ್ಲಿಂ ಬಾಂಧವರು ದೇವರಲ್ಲಿ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಆಚರಿಸುವ ಪವಿತ್ರ ರಂಜಾನ್ ಹಬ್ಬದಲ್ಲಿ ಕಾಮ, ಕ್ರೋದ, ಮದ, ಮಸ್ತರ ಎಲ್ಲವನ್ನು ತ್ಯಜಿಸಿ ಸಾಮರಸ್ಯದ ಬದುಕನ್ನು ನಡೆಸಲು ಮುಂದಾಗುತ್ತಾರೆ. ಅಂತಹ ಪವಿತ್ರ ಹಬ್ಬದಲ್ಲಿ ಉಪವಾಸ ವೃತ ಕೈಗೊಂಡ ಮುಸ್ಲಿಂ ಬಾಂದವರಿಗೆ ಪ್ರತಿವರ್ಷವೂ ಇಪ್ತಿಯಾರ್(ಭೋಜನ)ಕೂಟವನ್ನು ಅಸ್ಕಿ ¶ೌಂಡೇಶನ್ ವತಿಯಿಂದ ಆಯೋಜಿಸುತ್ತ ಬರಲಾಗಿದೆ. ಇಂತಹ ಇಪ್ತಿಯಾರ್ ಕೂಟದಲ್ಲಿ ಪಾಲ್ಗೊಳ್ಳುವುದರಿಂದ ಪ್ರತಿಯೊಬ್ಬರು ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆಯಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಆಯೋಜಿಸಲಾಗಿರುವ ಇಪ್ತಿಯಾರ್ ಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ತೋರಿಸಿರುವ ಪ್ರೀತಿ ಭಾವೈಕ್ಯತೆಗೆ ಸಾಕ್ಷಿಯಾಗಿದೆ ಎಂದರು.
ಪ್ರವಾದಿಗಳು ಹಾಕಿಕೊಟ್ಟದಾರಿಯಲ್ಲಿ ನಡೆಯೋಣ
ಇಂದಿನ ಸಮಾಜದಲ್ಲಿ ಬೆಳಕನ್ನು ಹಚ್ಚುವವರು ಇದ್ದಾರೆ, ಬೆಳಕನ್ನು ಅಳಿಸುವವರು ಇದ್ದಾರೆ. ಆದರೆ ಭಗವಂತ ನಮಗೆ ಬೆಳಕನ್ನು ಬೆಳಗುವಂತಹ ಶಕ್ತಿಯನ್ನು ಕೊಟ್ಟಿದ್ದಾನೆ. ಅಂಧಕಾರದ ಭರವಸೆಯ ಬೆಳಕಾಗಿ ನಾವು ಮಹಾನ್ ಪ್ರವಾದಿಗಳು ಹಾಕಿಕೊಟ್ಟದಾರಿಯಲ್ಲಿ ಮುನ್ನಡೆಯಬೇಕಿದೆ ಎಂದು ರಾಜ್ಯ ಸಾಲಿಡಾರಿಟಿ ಯೂತ್ ಮೂಮೆಂಟ್ ಅಧ್ಯಕ್ಷ ಮೌಲ್ವಿ ಲಬೀದ್ ಆಲಿಯಾ ಹೇಳಿದರು.
ಶಿರಾಳಕೊಪ್ಪದ ಹಜರತ್ ಉಮರ್ ಫಾರೂಖ್ ಮಸೀದಿಯಲ್ಲಿ ಮಂಗಳವಾರ ಸಂಜೆ ಇಫ್ತಾರ್ ಸೌಹಾದÜರ್ ಕೂಟದಲ್ಲಿ ಪ್ರಮುಖ ಭಾಷಣಕಾರರಾಗಿದ್ದ ಅವರು, ನಾವು ಸಮಾಜದಲ್ಲಿ ಮಾನವೀಯ ಮೌಲ್ಯ ಪ್ರಚುರಪಡಿಸುವ ಕಾರ್ಯ ಮಾಡಬೇಕಿದೆ. ರಂಜಾನ್ ಪವಿತ್ರ ತಿಂಗಳಾಗಿದ್ದು, ಈ ಪವಿತ್ರ ತಿಂಗಳಲ್ಲಿ ಸೂರ್ಯೋದಯಕ್ಕಿಂತ ಮೊದಲು ಹಾಗೂ ಸುರ್ಯಾಸ್ತÜದ ನಂತರ ಊಟ ಮಾಡುತ್ತೇವೆ. ನಮ್ಮಲ್ಲಿರುವ ಕೆಟ್ಟಭಾವನೆಗಳನ್ನು ಅಳಿಸಿಹಾಕುವ, ಸುಟ್ಟು ಹಾಕುವ ಶಕ್ತಿ ಉಪವಾಸಕ್ಕೆ ಇರುತ್ತದೆ. ನಮ್ಮಲ್ಲಿರುವ ಕೆಟ್ಟಗುಣಗಳನ್ನು ಅಳಿಸಿಹಾಕಿ ಉತ್ತಮ ಗುಣಗಳನ್ನು ಬೆಳಸಿಕೊಂಡಾಗ ಮಾತ್ರ ರಂಜಾನ್ ಸಮಯದಲ್ಲಿ ನಾವು ಮಾಡುವ ಉಪವಾಸಕ್ಕೆ ಬೆಲೆ ಬರುತ್ತದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ