ರೈತರ ಹಾಲು ಖರೀದಿ ದರ 4 ರೂ. ತಗ್ಗಿಸಿದ ಕೆಎಂಎಫ್: ಬರದ ನಡುವೆಯೂ ರೈತರಿಗೆ ಬರೆ ಎಳೆದ ಸರ್ಕಾರ!

By Sathish Kumar KH  |  First Published Dec 25, 2023, 11:05 PM IST

ರೈತರಿಗೆ ಒಂದು ಮಾಹಿತಿಯನ್ನೂ ನೀಡದಂತೆ ಹಾಲು ಖರೀದಿ ದರವನ್ನು 4 ರೂ. ತಗ್ಗಿಸಿದ ಕೆಎಂಎಫ್. ಬರದಿಂದ ತತ್ತರಿಸಿರುವ ರೈತರಿಗೆ ಬರೆ ಎಳೆದ ಸರ್ಕಾರ.


ಬೆಂಗಳೂರು (ಡಿ.25): ದೇಶದಲ್ಲಿ ಹೈನುಗಾರಿಕೆಯಲ್ಲಿ ಕರ್ನಾಟಕ ಎರನಡೇ ಸ್ಥಾನದಲ್ಲಿದೆ. ಕರ್ನಾಟಕ ಹಾಲು ಒಕ್ಕೂಟದ ಮೂಲಕ ರಾಜ್ಯದಲ್ಲಿ ಪಶು ಸಂಗೋಪನೆ ಮಾಡುವ ಎಲ್ಲರೂ ಹೈನೋದ್ಯಮಿಗಳಾಗಿದ್ದಾರೆ. ಆದರೆ, ಸರ್ಕಾರ ಹಾಲಿನ ಮಾರಾಟ ದರವನ್ನು ಹೆಚ್ಚಳ ಮಾಡಲು ಮುಂದಾದಾಗ ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೆ, ಈಗ ಹಾಲಿನ ಮಾರಾಟ ದರದ ಬದಲು ರೈತರಿಂದ ಖರೀದಿ ಮಾಡುವ ದರವನ್ನೇ ಕಡಿಮೆ ಮಾಡಿದೆ. ಈ ಮೂಲಕ ಪಶು ಸಂಗೋಪನೆ ನಂಬಿಕೊಂಡು ಜೀವನ ಮಾಡುವ ರೈತರಿಗೆ ಸಿದ್ದರಾಮಯ್ಯ ಸರ್ಕಾರ ಬರೆ ಎಳೆದಿದೆ ಎಂಬ ಆರೋಪ ಕೇಳಿಬಂದಿದೆ.

ಸುನಿಲ್‌ ತಿರುಪಳ್ಳಿ ದಿಗಟೆಕೊಪ್ಪ ಎನ್ನುವ ರೈತ ತಾವು ಹಾಲು ಹಾಕುವ ಹಾಲಿನ ಡೈರಿಯ ಪುಸ್ತಕವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಹಾಲಿನ ದರ ಇಳಿಕೆ ಮಾಡಿದ ಬಗ್ಗೆ ಸ್ಪಷ್ಟವಾಗಿ ಮಾಹಿತಿ ನೀಡಿದ್ದಾರೆ. ಕಳೆದ ಎರಡು ತಿಂಗಳಲ್ಲಿ ರೈತರಿಂದ ಹಾಲು ಒಕ್ಕೂಟ ಖರೀದಿ ಮಾಡುವ ಹಾಲಿನ ದರವನ್ನು 4 ರೂ. ಇಳಿಕೆ ಮಾಡಲಾಗಿದೆ ಎಂದು ಪೋಸ್ಟ್‌ ಮಾಡಿಕೊಂಡಿದ್ದಾರೆ. ಜೊತೆಗೆ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು ರೈತರನ್ನು ಪಕ್ಷಾತೀತವಾಗಿ ಕಂಡು ನಮ್ಮ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದ್ದಾರೆ.

Tap to resize

Latest Videos

ಸೋಮೇಶ್ವರ ದೇಗುಲಕ್ಕೆ ಹಿಂದೂ ಹುಡುಗಿಯೊಂದಿಗೆ ತೆರಳಿ ತಿಲಕವಿಟ್ಟುಕೊಂಡ ಮುಸ್ಲಿಂ ಯುವಕ: ಮುಂದಾಗಿದ್ದೇ ಬೇರೆ!

ಸಾಮಾಜಿಕ ಜಾಲತಾಣದ ಪೋಸ್ಟ್‌ ಇಲ್ಲಿದೆ ನೋಡಿ..
'ನಮ್ಮನೇಲಿ ಸುಮಾರು ಹತ್ತು ಹದಿನೈದು ವರ್ಷದಿಂದ ಡೈರಿಗೆ ಹಾಲು ಹಾಕ್ತಾ ಇದೀವಿ. ನನಗೆ ಇವತ್ತು ಬೇಜಾರು ಆಗಿದ್ದು ಏನಂದರೆ ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ಒಂದು ಲೀಟರ್ ಹಸುವಿನ ಹಾಲಿಗೆ 34.80 ರೂ. (34 ರೂ.80 ಪೈಸೆ) ಕೊಡ್ತಾ ಇದ್ದರು. ಅದು ನವೆಂಬರ್ ತಿಂಗಳ ಹೊತ್ತಿಗೆ 2 ರೂಪಾಯಿ ಇಳಿಕೆ ಮಾಡಿ 32 ರೂಪಾಯಿ ಆಯ್ತು. ಇವಾಗ ಮೊನ್ನೆಯಿಂದ ನಾಲ್ಕು ದಿನ ಆಯ್ತು ಮತ್ತೆ 2 ರೂಪಾಯಿ ಇಳಿಸಿ ಬರೀ 30 ರೂಪಾಯಿ ಹಾಕ್ತಾ ಇದ್ದಾರಲ್ಲಾ. ಹಂಗಾದ್ರೆ ನಾವು ರೈತರು ಕಷ್ಟಪಟ್ಟು ಹುಲ್ಲು ಕೊಯ್ದು, ಹಿಂಡಿ ಹಾಕಿ, ದನ ಕರುನ ಸಾಕಿ ಸಲುಗಿ ಅಲ್ಪ ಸ್ವಲ್ಪ ಹಣ ಉಳಿತಾಯ ಮಾಡೋದಾದ್ರೂ ಹೆಂಗೆ ಅಂತ' ಎಂದು ಪಗ್ರಶ್ನೆ ಮಾಡಿದ್ದಾರೆ. 

ನಮ್ಮನೇಲಿ ಸುಮಾರು ಹತ್ತು ಹದಿನೈದು ವರ್ಷದಿಂದ ಡೈರಿಗೆ ಹಾಲು ಹಾಕ್ತಾ ಇದೀವಿ. ನನಗೆ ಇವತ್ತು ಬೇಜಾರು ಆಗಿದ್ದು ಏನಂದರೆ ಈ ವರ್ಷ October ತಿಂಗಳಲ್ಲಿ ಒಂದು ಲೀಟರ್ ಹಸುವಿನ ಹಾಲಿಗೆ 34 ರೂಪಾಯಿ 80 ಪೈಸೆ ಕೊಡ್ತಾ ಇದ್ದರು, ಅದು November ತಿಂಗಳ ಹೊತ್ತಿಗೆ 2 ರೂಪಾಯಿ ಇಳಿಕೆ ಮಾಡಿ 32 ರೂಪಾಯಿ ಆಯ್ತು.++ pic.twitter.com/4oC5iRDqnp

— ಸುನಿಲ್ ತಿರುಪಳ್ಳಿ ದಿಗಟೆಕೊಪ್ಪ (@sunildr8)

ಕರ್ನಾಟಕ ಹಾಲು ಒಕ್ಕೂ (KMF) ನವರಿಗೆ ನಾನೊಬ್ಬ ರೈತನಾಗಿ ಮನವಿ ಮಾಡಿಕೊಳ್ತಾ ಇದೀನಿ. ದಯವಿಟ್ಟು ಹೈನುಗಾರಿಕೆ ಮಾಡುವ ರೈತರ ಬದುಕನ್ನು ಹಸನಾಗಿಸುವ ಕೆಲಸ ಮಾಡಿ ಪುಣ್ಯ ಕಟ್ಕೊಳಿ. ಇನ್ನೊಂದು ವಿಷಯ ಏನಂದರೆ ಲೀಟರಿಗೆ 5 ರೂಪಾಯಿ ಪ್ರೋತ್ಸಾಹಧನದ ಹಣವನ್ನು 5 ಅಥವಾ 6 ತಿಂಗಳಿಗೊಮ್ಮೆ ಹಾಕದು ಬಿಟ್ಟು ತಿಂಗಳಿಗೊಮ್ಮೆ ಹಾಕಿದ್ರೆ ರೈತರಿಗೆ ಅನುಕೂಲ ಆಗುತ್ತದೆ ಎಂದು ಮನವಿ ಮಾಡಿದ್ದಾರೆ.

ದತ್ತಮಾಲೆ ಧಾರಣೆಯಿಂದ ಅಂತರ ಕಾಯ್ದುಕೊಂಡರೇ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ!

ನಂದಿನಿಯನ್ನು ಬಿಟ್ಟುಕೊಡದ ರೈತರಿಗೆ ಕೈಕೊಟ್ಟ ಕೆಎಂಎಫ್: ಇದಕ್ಕೆ ನೆಟ್ಟಿಗರೊಬ್ಬರು ನಂದಿನಿ ಡೈರಿ ಬಿಟ್ಟು ಅಮುಲ್‌ ಡೈರಿಗೆ ಹಾಲು ಹಾಕುವಂತೆ ಸಲಹೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರೈತ ಸುನೀಲ್ 'ನಮ್ಮೂರ ಡೈರಿ ಅಂದರೆ ನಮ್ಮ ನಂದಿನಿ. ಅದು ಯಾವತ್ತಿದ್ದರೂ ನಮ್ಮದೆ. ನಮ್ಮ ಡೈರಿ/ ಸೊಸೈಟಿ ಯ ಏಳ್ಗೆಯ ಜೊತೆಗೆ ನಮ್ಮ ರೈತರ ಏಳಿಗೆಯನ್ನು ಬಯಸಲು ಪಕ್ಷಾತೀತವಾಗಿ ಮಣ್ಣಿನ ಮಕ್ಕಳ ವಿಷಯದಲ್ಲಿ ರಾಜಕೀಯ ಮಾಡದೆ ದಯವಿಟ್ಟು ಜೊತೆಗೂಡಿ ನಿಲ್ಲಿ' ಎಂದು ಮನವಿ ಮಾಡಿದ್ದಾರೆ.

ಡಿಸೆಂಬರ್ ತಿಂಗಳ ಹಾಲು ಹಾಕಿದ ಡೈರಿ ಪುಸ್ತಕ

click me!