
ಬೆಂಗಳೂರು (ಮಾ.11): ಕನ್ನಡ ಚಿತ್ರರಂಗದ ನಟಿ ರನ್ಯಾ ರಾವ್ ದುಬೈನಿಂದ ಭಾರತಕ್ಕೆ ಚಿನ್ನವನ್ನು ಕದ್ದು ತರುವಾಗ ಗೋಲ್ಡ್ ಸ್ಮಗ್ಲಿಂಗ್ ಕೇಸಿನಲ್ಲಿ ಸಿಕ್ಕಿಬಿದ್ದಿದ್ದಾರೆ. ಇದೀಗ ನಟಿಯ ಹಿಂದೆ ಯಾರಾರಿದ್ದಾರೆ ಎಂಬುದರ ತನಿಖೆ ನಡೆಯುತ್ತಿದ್ದಾಗ ನಟಿಯ ಮೊಬೈಲ್‌ನಿಂದ ಡಿಲೀಟ್ ಮಾಡಲಾಗಿದ್ದ ದಾಖಲೆಗಳನ್ನು ರಿಟ್ರೀವ್ ಮಾಡಲಾಗಿದ್ದು, ಪ್ರಭಾವಿ ರಾಜಕಾರಣಿಯೊಬ್ಬರ ಫೋಟೋ ಹಾಗೂ ವಿವಿಧ ಆಡಿಯೋಗಳು ಲಭ್ಯವಾಗಿವೆ.
ಹೌದು, ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸಿನಲ್ಲಿ ಆಕೆಯ ಮೊಬೈಲ್ ನಲ್ಲಿ ಸ್ಪೋಟಕ ಆಡಿಯೋ ಪತ್ತೆಯಾಗಿದೆ. ಗೋಲ್ಡ್ ಸ್ಮಗ್ಲಿಂಗ್‌ನ ಸಿಂಡಿಕೇಟ್ ಸದಸ್ಯರಿಗೆ ಕಳುಹಿಸಿದ್ದ ವಾಟ್ಸಪ್ ಆಡಿಯೋ ಪತ್ತೆಯಾಗಿವೆ. ಮೊಬೈಲ್ ರಿಟ್ರೀವ್ ವೇಳೆ ಸಾಕಷ್ಟು ಟೆಕ್ನಿಕಲ್ ಸಾಕ್ಷ್ಯ ಲಭ್ಯವಾಗಿವೆ. ಆಡಿಯೋ ಮಾತ್ರವಲ್ಲ, ಒಬ್ಬ ಪ್ರಭಾವಿ ರಾಜಕಾರಣಿಯ ಫೋಟೋ ಕೂಡ ಶೇರ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಸಿಂಡಿಕೇಟ್ ಸದಸ್ಯರಿಗೆ ಆಡಿಯೋಗಳನ್ನ ವಾಟ್ಸಾಫ್ ಅಲ್ಲಿ ರವಾನೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗುತ್ತಿದೆ.
ಈ ಆಡಿಯೋಗಳನ್ನು ಬಳಸಿಕೊಂಡು ಉಳಿದ ಸ್ಮಗ್ಲಿಂಗ್ ಸಿಂಡಿಕೇಟ್ ಸದಸ್ಯರಿಗೆ ಗಾಳ ಹಾಕಲಾಗುತ್ತಿತ್ತು. ಇದೀಗ ರನ್ಯಾ ರಾವ್ ಕೇಸಿನಲ್ಲಿ ಡಿಆರ್‌ಐ ಅಧಿಕಾರಿಗಳು ಈಗಾಗಲೇ ಇಬ್ಬರನ್ನು ಬಂಧಿಸಿದ್ದಾರೆ. ಜೊತೆಗೆ, ಇನ್ನೂ ಮೂರ್ನಾಲ್ಕು ಮಂದಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ರನ್ಯಾ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ನಲ್ಲಿ ಇದೀಗ ಸಾಕಷ್ಟು ಸಾಕ್ಷ್ಯಗಳು ಪತ್ತೆಯಾಗಿವೆ ಎಂಬುದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: ಜೀವನ ಹಾಳಾದ ಬೇಸರ, ಪತಿ ಜತಿನ್ ಹುಕ್ಕೇರಿಯೇ ನಟಿ ರನ್ಯಾಳ ಕೃತ್ಯದ ಜಾಲವನ್ನು ಅಧಿಕಾರಿಗಳಿಗೆ ಕೊಟ್ರಾ?
ರನ್ಯಾ ರಾವ್ ನಟಿ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ತನಿಖೆಯನ್ನು ಸಿಬಿಐ ಚುರುಕುಗೊಳಿಸಿದೆ. ಸಿಬಿಐ ಅಧಿಕಾರಿಗಳು ಬೆಂಗಳೂರಿನಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ರನ್ಯಾ ಮನೆ, ಕೆಐಎಡಿಬಿ ಕಚೇರಿ ಹಾಗೂ ರನ್ಯಾ ಮದುವೆಯಾಗಿದ್ದ ಹೋಟೆಲ್ ನಲ್ಲಿ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಇನ್ನು ರನ್ಯಾ ಮದುವೆಯಾಗಿದ್ದ ವೇಳೆ ಹಾಜರಾಗಿದ್ದ ಪ್ರಭಾವಿಗಳಿಗೂ ಸಂಕಷ್ಟ ಎದುರಾಗಬಹುದು. ಸಿಬಿಐನಿಂದ ರನ್ಯಾ ಮದುವೆ ಫೂಟೇಜ್ ಹಾಗೂ ಪೋಟೋಗಳ ಪರಿಶೀಲನೆ ಮಾಡಲಾಗುತ್ತಿದೆ.
ರಾಜ್ಯದ ಯಾವ್ಯಾವ ಪ್ರಭಾವಿಗಳು ನಟಿ ರನ್ಯಾ ಮದುವೆಗೆ ಹಾಜರಾಗಿದ್ದರು ಎಂಬುದನ್ನು ಸಿಬಿಐ ಪರಿಶೀಲನೆ ಮಾಡುತ್ತಿದೆ. ಈ ವೇಳೆ ನಟಿ ರನ್ಯಾಗೆ ಅತ್ಯಂತ ದುಬಾರಿ ಉಡುಗೊರೆಗಳನ್ನು ಯಾರು ಕೊಟ್ಟಿದ್ದಾರೆ? ಬಂಗಾರ ಹಾಗೂ ಚಿನ್ನಾಭರಣ ಯಾರು ಕೊಟ್ಟಿದ್ದಾರೆ? ದುಬಾರಿ ಗಿಫ್ಟ್ ಕೊಡುವಂತಹ ಸಂಬಂಧ ಏನಿದೆ? ಎಂಬುದನ್ನು ಪರಿಶೀಲನೆ ಮಾಡುತ್ತಿದ್ದಾರೆ. ಇನ್ನು ನಟಿ ರನ್ಯಾ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ್ದವರಿಗೂ ಸಿಬಿಐ ಸಂಕಷ್ಟ ಎದುರಾಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ನಟಿ ರನ್ಯಾ ರಾವ್ ಜೊತೆ ನಂಟು ಹೊಂದಿರುವ ಸಚಿವರ ಹೆಸರು ಹೇಳಿ: ಪ್ರತಿಪಕ್ಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ