ಬಂಧಿತ ನಟಿ ರನ್ಯಾಳಿಂದ ರೂಸಿ ಹೋಗಿದ್ದ ಪತಿ ಜತಿನ್ ಹುಕ್ಕೇರಿ ಯಾರು? ಕುಟುಂಬದ ಹಿನ್ನೆಲೆ ಏನು?

Published : Mar 11, 2025, 01:17 PM ISTUpdated : Mar 11, 2025, 02:17 PM IST
 ಬಂಧಿತ ನಟಿ ರನ್ಯಾಳಿಂದ ರೂಸಿ ಹೋಗಿದ್ದ ಪತಿ ಜತಿನ್ ಹುಕ್ಕೇರಿ ಯಾರು? ಕುಟುಂಬದ ಹಿನ್ನೆಲೆ ಏನು?

ಸಾರಾಂಶ

ದುಬೈ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ರನ್ಯಾ ರಾವ್ ಅವರ ಸಂಪರ್ಕಿತರ ಮಾಹಿತಿ ಡಿಆರ್‌ಐ ಕಲೆಹಾಕುತ್ತಿದೆ. ರನ್ಯಾ ಪತಿ ಜತಿನ್ ಹುಕ್ಕೇರಿ ಮತ್ತು ರಾಜಕೀಯ ಬಣವೊಂದು ಡಿಆರ್‌ಐಗೆ ಮಾಹಿತಿ ಸೋರಿಕೆ ಮಾಡಿದ್ದಾರೆ ಎನ್ನಲಾಗಿದೆ. ವಾಸ್ತುಶಿಲ್ಪಿ ಜತಿನ್, ರನ್ಯಾಳ ಕಳ್ಳ ವ್ಯವಹಾರ ತಿಳಿದು ದೂರವಾಗಿದ್ದರು. ವನ್ಯಜೀವಿ ಛಾಯಾಗ್ರಹಣದ ವೇಳೆ ರನ್ಯಾ ಮತ್ತು ಜತಿನ್ ಭೇಟಿಯಾಗಿ ಪ್ರೀತಿಸಿ ಮದುವೆಯಾಗಿದ್ದರು. ವಿಚ್ಛೇದನಕ್ಕೆ ಮುಂದಾದಾಗ ಜತಿನ್‌ಗೆ ಬೆದರಿಕೆ ಹಾಕಲಾಗಿತ್ತು ಎಂದು ತಿಳಿದುಬಂದಿದೆ.

ದುಬೈನಿಂದ ಕೆ.ಜಿ.ಗಟ್ಟಲೆ ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು, ಆರೋಪಿ ರನ್ಯಾ ರಾವ್‌ ಜತೆಗೆ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ. 
ನಟಿ ರನ್ಯಾ ತಂಡದ ಚಿನ್ನ ಕಳ್ಳ ಸಾಗಾಣಿಕೆ ಕೃತ್ಯದ ಮಾಹಿತಿಯನ್ನು ಕಂದಾಯ ಜಾರಿನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳಿಗೆ ಆಕೆಯ ಪತಿ ಜತಿನ್ ಹುಕ್ಕೇರಿ ಹಾಗೂ ಕಾಂಗ್ರೆಸ್ ಪಕ್ಷದ ಒಂದು ಬಣವೇ ಸೋರಿಕೆ ಮಾಡಿದೆ ಎನ್ನಲಾಗುತ್ತಿದೆ. 

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಪತ್ನಿ ಜತೆ ಮುನಿಸಿಕೊಂಡು ದೂರವಾಗಿದ್ದ ರನ್ಯಾಳ ಪತಿ ಜತಿನ್ ಹುಕ್ಕೇರಿ ಅಥವಾ ಸಚಿವರೊಬ್ಬರಿಗೆ ಬ್ರೇಕ್ ಹಾಕುವ ಸಲುವಾಗಿ ಚಿನ್ನ ಸಾಗಾಣಿಕೆ ಬಗ್ಗೆ ಡಿಆರ್‌ಐ ಅಧಿಕಾರಿಗೆ ಆ ಸಚಿವರ ರಾಜಕೀಯ ವಿರೋಧಿ ಗುಂಪಿನ ಪ್ರಭಾವಿ ಮಾಹಿತಿ ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರ ಬೆನ್ನಲ್ಲೇ  ಜತಿನ್ ಹುಕ್ಕೇರಿ ಯಾರು? ಎಂಬ ಕುತೂಹಲ ಜೊತೆಗೆ ಹಿನ್ನೆಲೆ ಬಗ್ಗೆ ಜಾಲಾಡಲಾಗುತ್ತಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಜತಿನ್‌  ಉತ್ತಮ ಹೆಸರು ಮಾಡಿರುವ ವಾಸ್ತುಶಿಲ್ಪಿಯಾಗಿದ್ದಾರೆ.ಪ್ರತಿಷ್ಠಿತ ಸ್ವಂತ ಕಂಪೆನಿಯೊಂದನ್ನು ತಮ್ಮ ಸಹೋದರನ ಪಾಲುದಾರಿಕೆಯಲ್ಲಿ ನಡೆಸುತ್ತಿದ್ದಾರೆ. ಕೈಗಾರಿಕೆಗಳ ವಿನ್ಯಾಸದಲ್ಲಿ ಅವರು ಉತ್ತಮ ಹೆಸರು ಮಾಡಿದ್ದಾರೆ. ಅಲ್ಲದೆ ಜತಿನ್ ಕುಟುಂಬಕ್ಕೆ ಸಹ ಒಳ್ಳೆಯ ಹಿನ್ನೆಲೆ ಇದ್ದು, ಬೆಳಗಾವಿ ಪ್ರದೇಶದಲ್ಲಿ ಅವರಿಗೆ ಉತ್ತಮ ಹೆಸರಿದೆ.

ಜೀವನ ಹಾಳಾದ ಬೇಸರ, ಪತಿ ಜತಿನ್‌ ಹುಕ್ಕೇರಿಯೇ ನಟಿ ರನ್ಯಾಳ ಕೃತ್ಯದ ಜಾಲವನ್ನು ಅಧಿಕಾರಿಗಳಿಗೆ ಕೊಟ್ರಾ?

ಜತಿನ್ ಹುಕ್ಕೇರಿ ಬೆಂಗಳೂರಿನ ಆರ್‌ವಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ಆರ್ಕಿಟೆಕ್ಚರ್ ಮತ್ತು ಇಂಟೀರಿಯರ್ ಡಿಸೈನ್‌ನಲ್ಲಿ ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ (ಬಿ.ಆರ್ಕ್.) ಪದವಿ ಪಡೆದರು. ನಂತರ, ಲಂಡನ್‌ನಲ್ಲಿರುವ ರಾಯಲ್ ಕಾಲೇಜ್ ಆಫ್ ಆರ್ಟ್‌ನ ಎಕ್ಸಿಕ್ಯುಟಿವ್ ಎಜುಕೇಶನ್ ಪ್ರೋಗ್ರಾಂನಿಂದ ಡಿಸ್ರಪ್ಟಿವ್ ಮಾರ್ಕೆಟ್ ಇನ್ನೋವೇಶನ್  ಪದವಿ ಪಡೆದಿದ್ದಾರೆ.

ಜತಿನ್ ಭಾರತ ಮತ್ತು ಲಂಡನ್‌ನಾದ್ಯಂತ ತನ್ನ ಪ್ರಭಾವವನ್ನು ಹರಡುವ ಮೊದಲು ಬೆಂಗಳೂರಿನ ರೆಸ್ಟೋರೆಂಟ್ ಉದ್ಯಮದಲ್ಲಿ ತನ್ನ ಸೃಜನಶೀಲ ವಿನ್ಯಾಸಗಳಿಗಾಗಿ ಮನ್ನಣೆ ಗಳಿಸಿದರು. WDA & DECODE LLC ಯ ಸ್ಥಾಪಕ ಮತ್ತು ಸೃಜನಶೀಲ ನಿರ್ದೇಶಕರು ಮತ್ತು ಕ್ರಾಫ್ಟ್ ಕೋಡ್‌ನ ಸ್ಥಾಪಕರಾಗಿದ್ದಾರೆ.

ಲಿಂಕ್ಡ್‌ಇನ್ ಪ್ರೊಫೈಲ್‌ ಪ್ರಕಾರ  ವಾಸ್ತುಶಿಲ್ಪ ಮತ್ತು ಯೋಜನಾ ಉದ್ಯಮದಲ್ಲಿ ಕೆಲಸ ಮಾಡಿದ ಅನುಭವಿ ವಾಸ್ತುಶಿಲ್ಪ ವಿನ್ಯಾಸಕ. ವಾಸ್ತುಶಿಲ್ಪ ಇನ್‌ಸೈಡ್‌, ಕಸ್ಟಮ್ ಇನ್‌ಸೈಡ್‌, ಮನರಂಜನೆ, ವಿನ್ಯಾಸ ಮತ್ತು ಮನರಂಜನೆಯಲ್ಲಿ ಪರಿಣತಿ ಹೊಂದಿದ್ದಾರೆ. ಲಂಡನ್‌ನ ರಾಯಲ್ ಕಾಲೇಜ್ ಆಫ್ ಆರ್ಟ್‌ನಿಂದ ಪದವಿ ಪಡೆದ ಪ್ರಬಲ ಕಲೆ ಮತ್ತು ವಿನ್ಯಾಸ ವೃತ್ತಿಪರರು ಎಂದು ಬರೆಯಲಾಗಿದೆ. 

ಬೆಂಗಳೂರಿನ ಕಾಕ್‌ಟೈಲ್ ಬಾರ್ ಮತ್ತು ರೆಸ್ಟೋರೆಂಟ್ ಹ್ಯಾಂಗೊವರ್ ಹುಕ್ಕೇರಿಯ ಅತ್ಯಂತ ಪ್ರಸಿದ್ಧ  ಪ್ರಾಜೆಕ್ಟ್‌ಗಳಲ್ಲಿ ಒಂದಾಗಿದೆ. ಇದು ಅದರ ಪ್ರಾದೇಶಿಕ ವಿನ್ಯಾಸದ ವಿಷಯದಲ್ಲಿ ಅದ್ಭುತವಾಗಿದೆ. ಇದು ಬಾರ್‌ಗೆ ಅತ್ಯಂತ ಸರಳ ಮತ್ತು ನವೀನ ಪರಿಕಲ್ಪನೆಯನ್ನು ಹೊಂದಿದೆ. ಇದರಲ್ಲಿ ಸೌಲಭ್ಯ ಹೇಗಿದೆ ಎಂದರೆ ಎರಡೂ ಮಹಡಿಗಳಲ್ಲಿ ಮತ್ತು ಎಲ್ಲಾ ಬದಿಗಳಲ್ಲಿ ತೆರೆದಿರುತ್ತದೆ. ಗ್ರಾಹಕರ ಅನುಭವವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.

ನಟಿ ರನ್ಯಾ ಚಿನ್ನ ಪ್ರಕರಣದಲ್ಲಿ ಮತ್ತೊಬ್ಬ ಅರೆಸ್ಟ್ , ಬಂಧಿತ ಪ್ರತಿಷ್ಠಿತ ಹೊಟೇಲ್‌ ಮಾಲೀಕರ ಮೊಮ್ಮಗ!

ಬೆಂಗಳೂರಿನಲ್ಲಿ  ಮಿಕ್ಕಂತೆ ಹ್ಯಾಂಗೊವರ್, ಬೆಂಗಳೂರು XOOX, ಬ್ರೂಮಿಲ್ ಮತ್ತು ಆಲಿವ್ ಬೀಚ್ ಸೇರಿವೆ, ಆದರೆ ಅವರು ದೆಹಲಿ ಮತ್ತು ಮುಂಬೈನಲ್ಲಿ ದೆಹಲಿಯಲ್ಲಿ ಮಂಕಿ ಬಾರ್ ಮತ್ತು ಮುಂಬೈನಲ್ಲಿ ಗೇಟ್‌ವೇ ಟ್ಯಾಪ್‌ರೂಮ್‌ನಂತಹ ಯೋಜನೆಗಳಲ್ಲಿಯೂ ಕೆಲಸ ಮಾಡಿದ್ದಾರೆ.

ಹುಕ್ಕೇರಿ ಯುವ, ವಿನ್ಯಾಸ-ಕೇಂದ್ರಿತ ವೃತ್ತಿಪರರ ತಂಡವಾದ WDA ಯನ್ನು ಮುನ್ನಡೆಸುತ್ತಾರೆ ಮತ್ತು ಹಾಸ್ಪಿಟಾಲಿಟಿ, ಚಿಲ್ಲರೆ ವ್ಯಾಪಾರ, ವಸತಿ ಮತ್ತು ಸಾಂಸ್ಥಿಕ ವಲಯಗಳಾದ್ಯಂತ ಯೋಜನೆಗಳಿಗೆ ಕೊಡುಗೆ ನೀಡಿದ್ದಾರೆ.

 ಪ್ರಸ್ತುತ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್‌ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅವರ ಮಲಮಗಳು ರನ್ಯಾ ರಾವ್‌ ಳನ್ನು ಕಳೆದ 2024ರ ನವೆಂಬರ್‌ ನಲ್ಲಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್‌ನಲ್ಲಿ ಅದ್ದೂರಿಯಾಗೊ ವಿವಾಹವಾದರು.  

ಸ್ಮಗ್ಲರ್‌ ರನ್ಯಾಳನ್ನು 2 ತಿಂಗಳಿಂದ ದೂರ ಇಟ್ಟಿದ್ದ ಪತಿ ಜತಿನ್‌?  ರನ್ಯಾಳನ್ನು ಮದುವೆಯಾದ ಬಳಿಕ ಆಕೆಯ ಮತ್ತೊಂದು ಮುಖ ಅರಿವಾದ ಹಿನ್ನೆಲೆಯಲ್ಲಿ ಆಕೆಯೊಂದಿಗೆ ಹಲವು ಬಾರಿ ಜಗಳವಾಡಿದ್ದ ಪತಿ ಜತಿನ್‌. ಇದೇ ಕಾರಣಕ್ಕೆ ಆಕೆಯನ್ನು 2 ತಿಂಗಳಿನಿಂದ ದೂರ ಇಟ್ಟಿದ್ದರು ಎನ್ನಲಾಗಿದೆ. ಆಕೆಯ ವಿದೇಶ ಪ್ರಯಾಣ, ರಹಸ್ಯವಾಗಿ ಕೆಲವರೊಂದಿಗೆ ಮಾತನಾಡುತ್ತಿದ್ದಾಗ ಪತಿಗೆ ಅನುಮಾನ ಮೂಡಿ, ಪತ್ನಿ ರನ್ಯಾಳ ನಿಗೂಢ ನಡವಳಿಕೆ ಬೆನ್ನು ಹತ್ತಿ ಹೋದಾಗ ಆಕೆಯ ಕಳ್ಳ ವ್ಯವಹಾರಗಳು ಗೊತ್ತಾಗಿದೆ. ಇದರ ನಂತರ ಜತೀನ್ ಜಗಳವಾಡಿ ಮೋಸ ಮಾಡಿದೆ ವಿಚ್ಚೇದನ ಕೊಡುತ್ತೇನೆ ಎಂದು ಪ್ರತ್ಯೇಕವಾಗಲು ಮುಂದಾಗಿದ್ದರು ಎನ್ನಲಾಗಿದೆ.

ಜತಿನ್‌ ಹುಕ್ಕೇರಿ ಪರಿಚಯವಾಗಿದ್ದು ಹೇಗೆ?
ರನ್ಯಾಗೆ ವನ್ಯಜೀವಿ ಫೋಟೋಗ್ರಫಿ ಹವ್ಯಾಸವಿತ್ತು. ಈ ಬಗ್ಗೆ 4 ವರ್ಷದ ಹಿಂದೆ ಕಂಪೆನಿ ಕೂಡ ತೆರೆದಿದ್ದು ಬಳಿಕ ಮುಚ್ಚಿದ್ದಳು. 2024ರ ಫೆಬ್ರವರಿಯಲ್ಲಿ ವನ್ಯಜೀವಿ ಫೋಟೋ ತೆಗೆಯಲು ರನ್ಯಾ ಕಾಡಿಗೆ ಹೋಗಿದ್ದಾಗ ಅದೇ ಕಾಡಿಗೆ ವಿಹಾರಕ್ಕೆಂದು ವಾಸ್ತುಶಿಲ್ಪಿ ಜತಿನ್‌ ಸಹ ಬಂದಿದ್ದರು. ಅಲ್ಲಿ ಪರಿಚಯವಾಗಿ ಬಳಿಕ ಪ್ರೀತಿಗೆ ತಿರುಗಿ ಎರಡೂ ಕುಟುಂಬಳ ಸಮ್ಮತಿ ಪಡೆದು ಇಬ್ಬರೂ ಅದೇ ವರ್ಷ ನವೆಂಬರ್‌ ನಲ್ಲಿ ಮದುವೆಯಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಅಳಿಯನಿಗೆ ಮಲತಂದೆ ಧಮ್ಕಿ:
ಕೌಟುಂಬಿಕ ಕಲಹ ಹಿನ್ನೆಲೆ ಜನವರಿಯಲ್ಲಿ ಜತಿನ್ ವಿಚ್ಚೇದನಕ್ಕೆ ಮುಂದಾಗಿದ್ದರು. ಆಗ ಆಕೆಯ ಸ್ವಂತ ತಂದೆ ಹೆಗ್ದೇಶ್ ಮತ್ತು ಮಲತಂದೆ ರಾಮಚಂದ್ರರಾಮ್ ಮಧ್ಯಪ್ರವೇಶಿಸಿ ಸಂಧಾನಕ್ಕೆ ಮುಂದಾಗಿದ್ದರು. ಆದರೆ ಅದು  ವಿಫಲವಾಗಿದ್ದಕ್ಕೆ ನಿನ್ನಿಂದ ನನ್ನ ಮಗಳು ಒಳ್ಳೆಯ ದಾರಿಗೆ ಬರುವ ನಿರೀಕ್ಷೆ ಇದೆ ಸುಮ್ಮನೆ ಆಕೆಯೊಂದಿಗೆ ಜೀವನ ಮಾಡು ಇಲ್ಲದಿದ್ದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲವೆಂದು ಡಿಜಿಪಿ ಧಮ್ಕಿ ಹಾಕಿದ್ದರು ಎಂಬ ಆರೋಪವಿದೆ. ಇದರಿಂದ ಕದಲಿದ ಜತಿನ್ 2 ತಿಂಗಳಿಂದ ಪತ್ನಿಯಿಂದ ದೂರವಾಗಿದ್ದರು ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: BBK 12 - ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ