ಹಿಂದೂಗಳ ಜಮೀನು 'ವಕ್ಫ್ ಆಸ್ತಿ' ಅಂತಾರಲ್ಲ ಅದೇನು ಸೌದಿಯ ಮುಲ್ಲಾಗಳು ಕೊಟ್ಟ ಆಸ್ತಿನಾ?: ಪ್ರತಾಪ್ ಸಿಂಹ ವಾಗ್ದಾಳಿ

By Ravi Janekal  |  First Published Oct 29, 2024, 10:10 AM IST

ನಾಡಿನ ರೈತರು, ಹಿಂದೂಗಳ ಆಸ್ತಿಯನ್ನು ಮುಸ್ಲಿಮರು 'ವಕ್ಫ್ ಆಸ್ತಿ' ಅಂತಾರಲ್ಲ ಅದು ಅವರಿಗೆ ಯಾರಿಂದ ಬಂತು? ಅಕ್ಬರ್, ಔರಂಗಜೇಬ್ , ಜಿನ್ನಾ ಅಥವಾ ಯಾರಾದರೂ ಸೌದಿಯ ಮುಲ್ಲಾಗಳು ಕೊಟ್ಟ ಆಸ್ತಿನಾ ಇದು? ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.


ಮೈಸೂರು (ಅ.29): ಈ ನಾಡಿನ ರೈತರು, ಹಿಂದೂಗಳ ಆಸ್ತಿಯನ್ನು ಮುಸ್ಲಿಮರು 'ವಕ್ಫ್ ಆಸ್ತಿ' ಅಂತಾರಲ್ಲ ಅದು ಅವರಿಗೆ ಯಾರಿಂದ ಬಂತು? ಅಕ್ಬರ್, ಔರಂಗಜೇಬ್ , ಜಿನ್ನಾ ಅಥವಾ ಯಾರಾದರೂ ಸೌದಿಯ ಮುಲ್ಲಾಗಳು ಕೊಟ್ಟ ಆಸ್ತಿನಾ ಇದು? ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.

ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಹೆಸರು ವಿಚಾರ ಸಂಬಂಧ ಇಂದು ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಮೈಸೂರಿನ ಹುಣಸೂರಿನಲ್ಲೂ ಗಣೇಶ ದೇವಾಲಯದ 17 ಏಕರೆ ನಮ್ಮದು ಅಂತಾ ವಕ್ಫ್ ಬೋರ್ಡ್ ಕೂತಿದೆ, ಚಿಕ್ಕಮಗಳೂರಿನಲ್ಲೂ ಇದೇ ಕಥೆ ಆಗಿದೆ. ಕಂಡವರ ಜಮೀನಿಗೆಲ್ಲಾ  ಮುಲ್ಲಾಗಳು ನೋಟಿಸ್ ಕೊಡುತ್ತಾ ಇದು ನಮ್ಮದು ಅಂತಿದ್ದಾರೆ. ಅಷ್ಟಕ್ಕೂ ಪ್ರತ್ಯೇಕ ಆಸ್ತಿ ಮುಸ್ಲಿಂರಿಗೆ  ಎಲ್ಲಿಂದ ಬಂತು?  ಯಾರಿಂದ ಅವರಿಗೆ ಬಳುವಳಿಯಾಗಿ ಬಂದಿದ್ದು? ವಕ್ಫ್ ಬೋರ್ಡ್ ಜಮೀನಿನಲ್ಲಿ ಮುಸ್ಲಿಮರಿಗೆ ಉಳುಮೆ ಮಾಡಲು ಅವಕಾಶ ಕೊಟ್ಟಿದ್ದಿರಾ? ನಮ್ಮ ದೇವಾಲಯ, ಮಠಗಳಲ್ಲಿ ಹಾಕುವಂತೆ ಯಾವತ್ತಾದರೂ ಮಸೀದಿ ಚರ್ಚ್ ಗಳಲ್ಲಿ ಹಸಿದವರಿಗೆ ಹಿಡಿ ಅನ್ನ ಹಾಕಿದ್ದೀರಾ?  ಎಂದು ಪ್ರಶ್ನಿಸಿದರು.

Tap to resize

Latest Videos

undefined

ವಿಜಯಪುರ ಬಳಿಕ ಮತ್ತೆರಡು ಜಿಲ್ಲೆಗೆ ವಕ್ಫ್ ಶಾಕ್! ರೈತರ ಭೂಮಿಯಲ್ಲಿ 'ವಕ್ಫ್ ಆಸ್ತಿ' ಹೆಸರು!

ಮುಡಾ ಹಗರಣ ಬಳಿಕ ಸಿಎಂಗೆ ಭಕ್ತಿ ಹೆಚ್ಚಾಗಿದೆ:

ಸಿಎಂ ಸಿದ್ದರಾಮಯ್ಯಗೆ ಮುಡಾ ಕಷ್ಟ ಎದುರಾದಾಗ ಚಾಮುಂಡಿ ತಾಯಿ, ಹಾಸನಾಂಬೆ ತಾಯಿ ನೆನಪಾಗಿದ್ದಾರೆ. ಸಿಎಂ ಮೊದಲು ಕಾರ್ಯಕ್ರಮಗಳಲ್ಲಿ ಕಾರ್ಯಕರ್ತರು ಕೇಸರಿ ಶಾಲು ಹಾಕಿದರೆ ಅದನ್ನ ಕಿತ್ತು ಬಿಸಾಕುತ್ತಿದ್ದರು. ಅಂತವರು ಮುಡಾ ಪ್ರಕರಣದ ನಂತರ ಹಿಂದೂ ಧರ್ಮದ ಮೇಲೆ ನಂಬಿಕೆ ಬಂದುಬಿಟ್ಟಿದೆ. ನಮ್ಮ ದೇವರ ಮೇಲೆ ಶ್ರದ್ಧೆ ಭಕ್ತಿ ಕೂಡ ಬಂದಿದೆ. ಒಂದಂತೂ ನಿಜ, ಅವರಿಗೆ ಕಷ್ಟ ಬಂದಾಗ ಸಹಾಯಕ್ಕೆ ಬರೋದು ನಮ್ಮ ದೇವಾನುದೇವತೆಗಳೇ ಹೊರತು ಯಾವುದೇ ಧರ್ಮದ ದೇವರಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯ ವಕ್ಫ್ ಆಸ್ತಿ ವಿಚಾರದಲ್ಲಿ  ಹಿಂದೂಗಳ ವಿರುದ್ದ ನಿಲುವು ತೆಗೆದು ಕೊಳ್ಳವುದಿಲ್ಲ ಎಂದು ಕೊಂಡಿದ್ದೇನೆ. ಪ್ರಧಾನ ಮಂತ್ರಿಗಳು ವಕ್ಫ್ ಕಾಯ್ದೆ, ವಕ್ಫ್ ಬೋರ್ಡ್ ಅನ್ನೆ ರದ್ದು ಮಾಡಬೇಕು ಎಂದು ಆಗ್ರಹಿಸಿದರು.

ವಿಜಯಪುರ ಬಳಿಕ ಧಾರವಾಡ ರೈತರಿಗೂ ಬಿಗ್ ಶಾಕ್; ಪೂರ್ವಜರಿಂದ ಬಂದ ಭೂಮಿಗೂ ವಕ್ಫ್ ಆಸ್ತಿ ಹೆಸರು!

ಮುಡಾ ಹಗರಣದಲ್ಲಿ ಇಡಿ ವಿಚಾರಣೆ ಶುರು ಮಾಡಿದ ಮೇಲೆ ಮುಡಾ ಕ್ಲೀನ್ ಆಗಬಹುದು ಎಂಬ ನಂಬಿಕೆ ಬಂದಿದೆ. 50:50 ಅನುಪಾತದಲ್ಲಿ ಅಕ್ರಮವಾಗಿ ಸೈಟ್ ಪಡೆದವರ ಎಲ್ಲಾ ಸೈಟ್ ವಾಪಾಸ್ ಕಿತ್ತುಕೊಳ್ಳಬೇಕು. ಮೈಸೂರಿಗೆ ಒಳ್ಳೆಯ ನಗರಾಭಿವೃದ್ಧಿ ಪ್ರಾಧಿಕಾರ ಬೇಕು, ಒಳ್ಳೆಯ ಜನಪ್ರತಿನಿಧಿಗಳು ಬೇಕು ಎಂದರು. ಇದೇ ವೇಳೆ ಯತ್ನಾಳ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯತ್ನಾಳ್ ಬಿಜೆಪಿ ಪಕ್ಷದ ಜನಪ್ರಿಯ ನೇತಾರ. ಯತ್ನಾಳರೇ ವಕ್ಫ್ ಬಗ್ಗೆ ಮೊದಲು ಧ್ವನಿ ಎತ್ತಿದವರು. ವಕ್ಫ್ ವಿರುದ್ಧ ಪ್ರತಿಭಟನೆಯಲ್ಲಿ ನಾನು ಕೂಡ ಯತ್ನಾಳ್ ಜೊತೆಯಲ್ಲಿ ಭಾಗಿಯಾಗುತ್ತೇನೆ ಎಂದರು.
 

click me!