Karnataka dry Days: ಇಂದಿನಿಂದ 4 ದಿನ ಮದ್ಯ ಮಾರಾಟವಿಲ್ಲ, ಬಹಿರಂಗ ಪ್ರಚಾರವೂ ಇರಲ್ಲ!

By Sathish Kumar KH  |  First Published May 8, 2023, 7:35 PM IST

ಮೇ 8ರ ಸಂಜೆ 5 ಗಂಟೆಯಿಂದ ರಾಜ್ಯಾದ್ಯಂತ 4 ದಿನಗಳವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಜೊತೆಗೆ, ಬಹಿರಂಗ ಪ್ರಚಾರಕ್ಕೂ ತೆರೆ ಬಿದ್ದಿದ್ದು, ಮನೆ ಮನೆ ಪ್ರಚಾರ ಆರಂಭವಾಗಿದೆ.


ಬೆಂಗಳೂರು (ಮೇ 08): ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮದ್ಯ ಮಾರಾಟ ನಿಷೇಧದ  (Dry Days) ದಿನಗಳು  ಆರಂಭವಾಗಿದೆ. ಮೇ 8 ರಂದು ಸಂಜೆ 5 ರಿಂದ ಮೇ 10 ರ ಮಧ್ಯರಾತ್ರಿಯವರೆಗೆ ಮತ್ತು ಮೇ 13 ರ ಬೆಳಿಗ್ಗೆ 6 ರಿಂದ ಮಧ್ಯರಾತ್ರಿಯವರೆಗೆ ಯಾವುದೇ ಮದ್ಯ ಮಾರಾಟ ಮಾಡುವ ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳು ಕಾರ್ಯ ನಿರ್ವಹಿಸದಂತೆ ಪೊಲೀಸ್‌ ಇಲಾಖೆ ನಿಷೇಧಾಜ್ಞೆ  ಹೊರಡಿಸಿದೆ.

ಕರ್ನಾಟಕವಿಧಾನಸಭೆ ಚುನಾವಣೆ ಅಂಗವಾಗಿ ಮದ್ಯ ನಿಷೇಧದ ಜಾರಿ ಮೇ 8ರ (ಸೋಮವಾರ) ಸಂಜೆ 5 ಗಂಟೆಗೆ ಪ್ರಾರಂಭವಾಗುತ್ತವೆ. ಇಂದು ಸಂಜೆ 5 ರಿಂದ ಮತದಾನದ ದಿನವಾದ ಮೇ 10 ರ ಮಧ್ಯರಾತ್ರಿಯವರೆಗೆ ಮದ್ಯದ ಅಂಗಡಿಗಳು ಮತ್ತು ಮದ್ಯವನ್ನು ಮಾರಾಟವನ್ನು ನಿಷೇಧಿಸಲಾಗುತ್ತದೆ. ನಂತರ, ಮೇ 13 ರಂದು, ಮತ ಎಣಿಕೆ ದಿನ ಮತ್ತೊಮ್ಮೆ ಮದ್ಯ ಮಾರಾಟವನ್ನು ನಿಷೇಧ (Alcohal sale ban) ಮಾಡಲಾಗುತ್ತದೆ. ರಾಜ್ಯದಲ್ಲಿ ಶಾಂತಿಯುತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಖಚಿತಪಡಿಸಿಕೊಳ್ಳಲು ಪೊಲೀಸ್ ಆಯುಕ್ತರು ನಿಷೇಧಾಜ್ಞೆ ಹೊರಡಿಸಿದ್ದಾರೆ.

Tap to resize

Latest Videos

ಒಂದು ಲಿಂಕ್‌ ಕ್ಲಿಕ್‌ ಮಾಡಿ: ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕಿ, ಮತಗಟ್ಟೆಗೆ ಹೋಗಿ..!

ಮದ್ಯ ಸಂಗ್ರಹಣೆಯೂ ಅಪರಾಧ: ಇನ್ನು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಅವರು ನಗರದ ಔಟ್‌ಲೆಟ್‌ಗಳಲ್ಲಿ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. 'ಸಗಟು ಅಥವಾ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಮದ್ಯ, ವೈನ್, ಅರಕ್ ಅಥವಾ ಇತರ ಯಾವುದೇ ಮಾದಕ ವಸ್ತುಗಳ ಮಾರಾಟ, ಬಳಕೆ, ಸಂಗ್ರಹಣೆ ಮತ್ತು ಸಂಗ್ರಹಣೆ ನಿಷೇಧಿಸಲಾಗಿದೆ. ಒಂದು ವೇಳೆ ಸಂಗ್ರಹಣೆ ಮಾಡಿ ಮಾರಾಟ ಮಾಡಿದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತದೆ. 

ಹೋಮ್‌ ಡೆಲಿವರಿ ಕೂಡ ನಿಷೇಧ: ಬೆಂಗಳೂರು ಮತ್ತು ಮಂಗಳೂರಿನಲ್ಲಿ CL9 ಪರವಾನಗಿ (ರಿಫ್ರೆಶ್‌ಮೆಂಟ್ ರೂಮ್ (ಬಾರ್) ಪರವಾನಗಿ) ಹೊಂದಿರುವ ಮದ್ಯ ಮಾರಾಟ ಮಾಡುವ ಎಲ್ಲಾ ಸ್ಥಳಗಳು ಕೂಡ ಮುಚ್ಚಿರುತ್ತದೆ. ಜೊತೆಗೆ, ಇಂತಹ ಬಾರ್‌ ಮತ್ತು ರೆಸ್ಟೋರೆಂಟ್‌ಗಳಿಂದ ಆಹಾರದ ಡೋರ್ ಡೆಲಿವರಿಯೂ ಇರುವುದಿಲ್ಲ. ಮದ್ಯ ಮಾರಾಟ ನಿಷೇಧಾಜ್ಞೆ ಅನುಸಾರ "ಎಲ್ಲಾ ಮದ್ಯದ ಅಂಗಡಿಗಳು, ವೈನ್ ಬಾರ್‌ಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಹೋಟೆಲುಗಳು, ಅಂಗಡಿಗಳು ಅಥವಾ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಸ್ಥಳದಲ್ಲಿ ನೆಲೆಗೊಂಡಿದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದೆಲ್ಲೆಡೆ ಮೇ 8 ರಂದು ಸಂಜೆ 5 ರಿಂದ ಮೇ 10 ರ ಮಧ್ಯರಾತ್ರಿಯವರೆಗೆ ಮತ್ತು ಮೇ 13 ರಂದು ಬೆಳಿಗ್ಗೆ 6 ರಿಂದ ಮೇ 13 ರ ಮಧ್ಯರಾತ್ರಿಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿರುತ್ತದೆ.  

ಚುನಾವಣಾ ಆದೇಶ ಮದುವೆ ಕಾರ್ಯಕ್ರಮಗಳಿಗೂ ಅನ್ವಯ: ರಾಜ್ಯದಲ್ಲಿ 12 ಸಾವಿರಕ್ಕೂ ಹೆಚ್ಚು ಸಂಸ್ಥೆಗಳು ಸಿಎಲ್ 9, 6 (ಸ್ಟಾರ್ ಹೋಟೆಲ್‌ಗಳು), ಮತ್ತು 2 (ಚಿಲ್ಲರೆ) ಪರವಾನಗಿಗಳನ್ನು ಹೊಂದಿವೆ. 'ಬಾರ್ ಮತ್ತು ರೆಸ್ಟೊರೆಂಟ್‌ಗಳಲ್ಲಿ ಒಂದಕ್ಕೊಂದು ಅಂಟಿಕೊಂಡಿರುವುದರಿಂದ ಆಹಾರವನ್ನೂ ವಿತರಿಸಲು ಸಾಧ್ಯವಾಗುತ್ತಿಲ್ಲ. ಚುನಾವಣೆ ಸಮಯದಲ್ಲಿ ಜಾರಿಯಲ್ಲಿರುವ ಮತ್ತು ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ಬರುವ ಮದ್ಯ ನಿಷೇಧವನ್ನು ಮದುವೆಗೆ ಊಟೋಪಚಾರ ಮಾಡುವವರು ಕೂಡ ಪಾಲಿಸುತ್ತಿದ್ದಾರೆ. ಬೆಂಗಳೂರಿನ ಆದೇಶವು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅನ್ವಯಿಸುತ್ತದೆ ಎಂದು ಕರ್ನಾಟಕ ವೈನ್ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಗೋವಿಂದರಾಜ್ ಹೆಗಡೆ ಹೇಳಿದರು.

ಬಹಿರಂಗ ಪ್ರಚಾರವೂ ಅಂತ್ಯ: ಕಳೆದ ಮೂರ್ನಾಲ್ಕು ತಿಂಗಳಿಂದ ರಾಜ್ಯಾದ್ಯಂತ ರಾಜಕೀಯ ಸಮಾವೇಶಗಳು, ಸಭೆಗಳು, ರೋಡ್‌ ಶೋಗಳು, ರ್ಯಾಲಿಗಳನ್ನು ಆಯೋಜನೆ ಮಾಡುವ ಮೂಲಕ ದೇಶದ ಪ್ರಭಾವಿ ಜನಪ್ರತಿನಿಧಿಗಳು ಬಮದು ಪ್ರಚಾರ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ, ಇಂದು (ಮೇ 8ರ ಸಂಜೆ 6 ಗಂಟೆ ನಂತರ) ಬಹಿರಂಗ ಪ್ರಚಾರಕ್ಕೂ ತೆರೆ ಬಿದ್ದಿದೆ. ಇನ್ನು ನಾಳೆ ಮನೆ, ಮನೆ ಪ್ರಚಾರವನ್ನು ಮಾಡಲು ಅವಕಾಶವಿದ್ದು, ನಾಳೆ ರಾತ್ರಿವರೆಗೂ ಪ್ರಚಾರ ಕಾರ್ಯ ಕೈಗೊಳ್ಳಬಹುದು. ನಂತರ ಮೇ 10 ರಂದು ಬೆಳಗ್ಗೆ 6 ರಿಂದ ಸಂಜೆವರೆಗೂ ಮತದಾನ ಪ್ರಕ್ರಿಯೆ ನಡೆಯಲಿದೆ.

ನಾವು ಹೊರಗಿನವರಲ್ಲ ರಾಮನಗರದವರೇ: ಮನೆ ಮಗನಿಗೆ ವಿಷ ಕೊಡಬೇಡಿ!

ಬಸ್‌ ಸಂಚಾರವೂ ವಿರಳ: ಇನ್ನು ರಾಜ್ಯಾದ್ಯಂತ ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯುವುದರಿಂದ ಕರ್ನಾಟಕ ಸಾರಿಗೆ ಇಲಾಖೆಯ ಬಹತೇಕ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳನ್ನು ಮತಗಟ್ಟೆಗಳಿಗೆ ಸಿಬ್ಬಂದಿ ಕರೆದೊಯ್ಯಲು ನಿಯೋಜನೆ ಮಾಡಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಾರ್ವಜನಿಕರು ಸಂಚಾರ ಮಾಡಲು ಬಸ್‌ಗಳ ವ್ಯವಸ್ಥೆಯೂ ಇರುವುದಿಲ್ಲ. ಒಟ್ಟಾರೆ, ಮೇ 9 ಮತ್ತು ಮೇ 10ನೇ ತಾರೀಖಿನಂದು ಮದ್ಯ ಮಾರಾಟ ಇರುವುದಿಲ್ಲ, ಬಹಿರಂಗ ಪ್ರಚಾರ ಇರುವುದಿಲ್ಲ ಜೊತೆಗೆ ಬಸ್‌ ಸಂಚಾರವೂ ಕೂಡ ಇರುವದಿಲ್ಲ.

click me!