ಮೈಸೂರು ದಸರಾ ಅಂಬಾರಿ ಹೊರುವ ಬಲರಾಮ ಇನ್ನಿಲ್ಲ: 10 ದಿನ ಆಹಾರವನ್ನೇ ಸೇವಿಸಿಲ್ಲ!

Published : May 07, 2023, 09:42 PM ISTUpdated : May 07, 2023, 10:11 PM IST
ಮೈಸೂರು ದಸರಾ ಅಂಬಾರಿ ಹೊರುವ ಬಲರಾಮ ಇನ್ನಿಲ್ಲ: 10 ದಿನ ಆಹಾರವನ್ನೇ ಸೇವಿಸಿಲ್ಲ!

ಸಾರಾಂಶ

ವಿಶ್ವಪ್ರಸಿದ್ಧ ಮೈಸೂರು ದಸರಾ ಉತ್ಸವದಲ್ಲಿ ಕರುನಾಡ‌ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಿಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು, ಗಾಂಭೀರ್ಯವಾಗಿ ಸಾಗುತ್ತಿದ್ದ ಬಲರಾಮ ಆನೆ ಸಾವನ್ನಪ್ಪಿದೆ. 

ಮೈಸೂರು  (ಮೇ 07): ವಿಶ್ವಪ್ರಸಿದ್ಧ ಮೈಸೂರು ದಸರಾ ಉತ್ಸವದಲ್ಲಿ ಕರುನಾಡ‌ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಿಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು, ರಾಜಬೀದಿಗಳಲ್ಲಿ ಗಾಂಭೀರ್ಯವಾಗಿ ಸಾಗುತ್ತಿದ್ದ ಬಲರಾಮ ಆನೆ ಸಾವನ್ನಪ್ಪಿದೆ. 

ಮೈಸೂರು ದಸರಾ, ಎಷ್ಟೊಂದು ಸುಂದರಾ... ಎಂದು ಹಾಡುವ ಕನ್ನಡ ನಾಡಿನ ಜನತೆಗೆ ಮೈಸೂರು ದಸರಾ ಮೆರಗು ಹೆಚ್ಚುವಂತೆ ಮಾಡುವುದೇ ಅಂಬಾರಿ ಮೆರವಣಿಗೆ ಆಗಿದೆ. ವಿಶ್ವಪ್ರಸಿದ್ಧ ಮೈಸೂರು ದಸರಾದಲ್ಲಿ 750 ಕೆ.ಜಿ ತೂಕದ ಚಿನ್ನದ ಅಂಬಾರಿಯನ್ನು ಬರೋಬ್ಬರಿ 14 ಬಾರಿ ಹೊತ್ತು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದ ಬಲರಾಮ (67) ಆನೆ ಇದೀಗ ಸಾವನ್ನಪ್ಪಿದೆ. ದಸರಾ ಉತ್ಸವದಲ್ಲಿ ಭಾರಿ ಸೌಮ್ಯ ಸ್ವಭಾವದಿಂದ ಹೆಜ್ಜೆಯನ್ನು ಹಾಕುತ್ತಾ, ಎಲ್ಲರ ಮನವನ್ನೂ ಗೆದ್ದಿದ್ದ ಬಲರಾಮನಿಗೆ ಹಲವು ದಿನಗಳಿಂದ ಬಾಯಲ್ಲಿ ಹುಣ್ಣು ಆಗಿತ್ತು. ಇದರಿಂದಾಗಿ ಆಹಾರವನ್ನು ಸೇವಿಸಲಾಗದೇ ತೀವ್ರ ಅಸ್ವಸ್ಥನಾಗಿದ್ದನು. 

ಕರ್ನಾಟಕದಲ್ಲಿ ಪ್ರಧಾನಿ ಮೋದಿ ಪ್ರಚಾರ ಅಂತ್ಯ: 18 ಸಮಾವೇಶ, 6 ರೋಡ್‌ ಶೋಗಳ ಮಾಹಿತಿ ಇಲ್ಲಿದೆ!

ವೈದ್ಯರಿಂದ ಚಿಕಿತ್ಸೆ ನೀಡಿದರೂ ಫಲಿಸಲಿಲ್ಲ:  ಬಲರಾಮ ಆಹಾರ ಸೇವನೆ ಕಡಿಮೆ ಮಾಡಿದ ತಕ್ಷಣವೇ ಮಾವುತ ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದಾನೆ. ಕೂಡಲೇ ವೈದ್ಯರನ್ನು ನಿಯೋಜಿಸಿ ಚಿಕಿತ್ಸೆ ನೀಡುತ್ತಾ ಬಂದಿದೆ. ಆದರೆ, ಕಳೆದ ಹತ್ತು ದಿನಗಳಿಂದ ನೋವು ಹೆಚ್ಚಾಗಿ ಉಲ್ಬಣಗೊಂಡಿತ್ತು. ತೀವ್ರ ನೋವಿನಿಂದ ಬಳಲುತ್ತಿದ್ದ ಬಲರಾಮನಿಗೆ ಆಹಾರ ಸೇವನೆ ಕಷ್ಟವಾಗುತ್ತಿತ್ತು. ಇಂದು ಬೆಳಗ್ಗೆಯಿಂದಲೂ ತೀವ್ರ ಅಸ್ವಸ್ಥಗೊಂಡಿದ್ದನು. ಕೂಡಲೇ, ನಾಗರಹೊಳೆ ಉದ್ಯಾನದ ಹುಣಸೂರು ರೇಂಜ್‌ನ ಭೀಮನಕಟ್ಟೆ ಆನೆ ಶಿಬಿರದಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ.

1999ರಿಂದ 14 ವರ್ಷ ಅಂಬಾರಿ ಹೊತ್ತ ಬಲರಾಮ: ನಾಡಿನ ಜನರೆಲ್ಲರೂ ಹಬ್ಬದಂತೆ ಆಚರಣೆ ಮಾಡುವ ದಸರಾ ಉತ್ಸವದ ಅಂಬಾರಿಯನ್ನು ಹೊತ್ತು ಸಾಗುತ್ತಿದ್ದ ಪ್ರಮುಖ ಆನೆಗಳ ಸಾಲಿನಲ್ಲಿ ಬಲರಾಮ ಆನೆಯೂ ಕೂಡ ಪ್ರಮುಖ ಸಾಲಿನಲ್ಲಿ ನಿಲ್ಲುತ್ತದೆ. ಕಳೆದ 1987 ರಲ್ಲಿ ಕರ್ನಾಟಕದ ಕೊಡಗು ಪ್ರದೇಶದ ಸೋಮವಾರಪೇಟೆ ಬಳಿಯ ಕಟ್ಟೆಪುರ ಅರಣ್ಯದಲ್ಲಿ ಸೆರೆಸಿಕ್ಕ ಬಲರಾಮನನ್ನು ತರಬೇತಿ ಮೂಲಕ ಪಳಗಿಸಲಾಗಿತ್ತು. ರಾಜ್ಯದಲ್ಲಿ ದ್ರೋಣನ ನಂತರ ಬಲರಾಮ ಅಂಬಾರಿ ಹೊರಲು ಮುಂದಾದನು. ಇತ್ತೀಚೆಗೆ ಅಂಬಾರಿ ಹೊರುತ್ತಿದ್ದ ಅರ್ಜುನ ಆನೆಯು, ಆಕಸ್ಮಿಕವಾಗಿ ಮಾವುತನನ್ನು ಕೊಂದಿದ್ದಕ್ಕಾಗಿ, ಬಲರಾಮನನ್ನುಅಂಬಾರಿ ಹೊರಲು ಆಯ್ಕೆ ಮಾಡಲಾಯಿತು. ಅದರಂತೆ 1999 ಮತ್ತು 2011ರ ಅವಧಿಯಲ್ಲಿ ಒಟ್ಟು 14 ಬಾರಿ ಚಿನ್ನದ ಅಂಬಾರಿಯಲ್ಲಿ ಹೊತ್ತು ಸಾಗಿದ ಕೀರ್ತಿ ಬಲರಾಮನದ್ದಾಗಿದೆ.

ಮಾವುತನ ಬಿಟ್ಟಿರಲಾದ ಬಲರಾಮ: ಮುಖ್ಯವಾಗಿ ಬಲರಾಮ ಆನೆ 2.7 ಮೀಟರ್ ಎತ್ತರ, ಸುಮಾರು 4590 ಕೆ.ಜಿ. ಭಾರವಿತ್ತು. ಈ ಆನೆ ತನ್ನ ಮಾವುತನನ್ನು ಬಿಟ್ಟು ಬೇರ್ಯಾವ ವ್ಯಕ್ತಿಯನ್ನೂ ಕೂಡ ನಂಬುತ್ತಿರಲಿಲ್ಲ. ತನ್ನ ಮಾವುತ ಆಹಾರವನ್ನು ಕೊಟ್ಟರಷ್ಟೇ ಸೇವನೆ ಮಾಡುತ್ತಿತ್ತು. ಬೇರೆ ಯಾರೇ ಬಂದು ಆಹಾರ ಕೊಟ್ಟರೂ ಸೇವಿಸುತ್ತಿರಲಿಲ್ಲ. ಜೊತೆಗೆ, ಮಾವುತ ಹೇಳಿದಂತೆ ಎಲ್ಲ ಮಾತುಗಳನ್ನು ಬಲರಾಮ ಚಾಚೂತಪ್ಪದೇ ಪಾಲಿಸುತ್ತಿದ್ದನು.

ದಕ್ಷಿಣ ಕಾಶಿ ನಂಜನಗೂಡು ಶ್ರೀ ಕಂಠೇಶ್ವರನ ದರ್ಶನ ಪಡೆದ ಪ್ರಧಾನಿ ಮೋದಿ!

ತನ್ನ ಶಾಂತ ಸ್ವಭಾವ ಹಾಗೂ ಒಬ್ಬ ಮಾವುತನ ಮೇಲೆ ಇಟ್ಟಿದ್ದ ಪ್ರೀತಿಯಿಂದ ನಾಡಿನ ಜನರ ಹೃದಯವನ್ನು ಬಲರಾಮ ಗೆದ್ದಿದ್ದನು. ಆದರೆ, ಅಂಬಾರಿ ಹೊರುವುದನ್ನು ಬದಲಿಸುವ ಮುನ್ನವೇ ಬಲರಾಮ ತೂಕ ಕಳೆದುಕೊಂಡಿದ್ದರಿಂದ, ವಿಶ್ರಾಂತಿ ನೀಡಲಾಗಿತ್ತು. ಹೀಗಾಗಿ, ಬಲರಾಮನ ಬದಲು ಅರ್ಜುನನಿಗೆ ಅಂಬಾರಿ ಹೊರುವ ಅವಕಾಶ ನೀಡಲಾಗಿತ್ತು. ಆದರೆ, ಈಗ ಬಲರಾಮ ನಮ್ಮನ್ನೆಲ್ಲ ಅಗಲಿದ್ದಾನೆ ಎನ್ನುವುದೇ ದುಖಃಕರ ಸಂಗತಿಯಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ