ಸಿದ್ದರಾಮಯ್ಯ ಹಿಂದೂ ವಿರೋಧಿ, ಈ ರಾಜ್ಯದ ಅಜ್ಞಾನಿ ಮುಖ್ಯಮಂತ್ರಿ; ಗುಳೇದಗುಡ್ಡ ಸ್ವಾಮೀಜಿ ಕಿಡಿ

By Ravi Janekal  |  First Published May 13, 2024, 5:04 PM IST

ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರ ದೌರ್ಜನ್ಯ ಖಂಡಿಸಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗುಳೇದಗುಡ್ಡ ಅಮರೇಶ್ವರ ಮಠದ ಸ್ವಾಮೀಜಿ


ಬಾಗಲಕೋಟೆ (ಮೇ.13): ಸಿದ್ದರಾಮಯ್ಯ ಈ ರಾಜ್ಯದ ಅಜ್ಞಾನಿ ಮುಖ್ಯಮಂತ್ರಿ. ನಾವು ಹಾಕುವ ಘೋಷಣೆ ಅಜ್ಞಾನಿ ಮುಖ್ಯಮಂತ್ರಿಗೆ ಮುಟ್ಟಬೇಕು, ಮಾಂಸ ತಿಂದು ದೇವಸ್ಥಾನಕ್ಕೆ ಹೋಗುವ ಸಿದ್ದರಾಮಯ್ಯ ಹಿಂದೂ ವಿರೋಧಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗುಳೇದಗುಡ್ಡದ ಅಮರೇಶ್ವರ ಮಠದ ಡಾ.ನೀಲಕಂಠ ಶಿವಾಚಾರ್ಯ ಸ್ವಾಮೀಜಿ ತೀವ್ರ ವಾಗ್ದಾಳಿ ನಡೆಸಿದರು.

ಇಂದು ಬಾಗಲಕೋಟೆಯಲ್ಲಿ ನಡೆದ 'ಹಿಂದೂ ಸುರಕ್ಷ ಆಂದೋಲನ' ಸಭೆ ಉದ್ದೇಶಿಸಿ ಮಾತನಾಡಿದ ಸ್ವಾಮೀಜಿ, ಇನ್ನೊಂದು ಜನ್ಮ ಅನ್ನೋದು ಇದ್ರೆ ಮುಸ್ಲಿಂ ಧರ್ಮದಲ್ಲಿ ಹುಟ್ಟಬೇಕು ಎಂದು ಹೇಳುವ ಸಿಎಂ ಸಿದ್ದರಾಮಯ್ಯ ಎಂತಹ ಹಿಂದೂ ಇರಬೇಕು? ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಸಿಪಿಐ ರಾಮಪ್ಪ ಬಿರಾದಾರ ಹಾಗೂ ಪಿಎಸ್‌ಐ ಯಮನಪ್ಪ ಮಾಂಗ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಅಲ್ಲದೇ ಅಮಾಯಕರನ್ನ ರಕ್ಷಿಸುವ ಬದಲು ದುಷ್ಟರ ರಕ್ಷಣೆ ಮಾಡುವ ಇಂತಹ ಅಧಿಕಾರಿಗಳನ್ನು ಎಸ್‌ಪಿ ಕಚೇರಿಯಿಂದ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

Tap to resize

Latest Videos

undefined

ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ ; ಪ್ರತಿಭಟನೆಗೆ ಮುಂದಾದ ಹಿಂದೂ ಸಂಘಟನೆ 

ಕಳೆದ ಮೇ.8.ರಂದು ರಾತ್ರಿ ಎಂಟು ಗಂಟೆ ಸಂದರ್ಭದಲ್ಲಿ ನಡೆದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಪ್ರತಿಭಟನೆ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಇದೇ ಪ್ರಕರಣಕ್ಕೆ ಸಂಬಂದಿಸಿದಂತೆ ನವನಗರ PSI ಯಮನಪ್ಪ ಮಾಂಗ್ ಹಾಗೂ ಸಿಒಇಐ ರಾಮಪ್ಪ ಬಿರಾದಾರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಇಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಇದೇ ವೇಳೆ ನೀಲಕಂಠ ಸ್ವಾಮೀಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಪೋಲಿಸ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಹಿಂದೂ ಸಂಘಟನೆ ಕಾರ್ಯಕರ್ತರ ಪ್ರತಿಭಟನೆ: ಕಲ್ಲು ತೂರಾಟ, ಪೊಲೀಸರಿಂದ ಲಾಠಿ ಚಾರ್ಜ್‌

ನವನಗರದ ನಗರ ಸಭೆಯ ಮುಂಭಾಗದಲ್ಲಿ  ಆಯೋಜಿಸಲಾಗಿದ್ದ ಹಿಂದೂ ಸುರಕ್ಷಾ ಆಂದೋಲನದಲ್ಲಿ ಶ್ರೀ ನೀಲಕಂಠ ಶಿವಾಚಾರ್ಯ ಶ್ರೀಗಳು, ಹಿಂದೂ ಜಾಗರಣ ವೇದಿಕೆಯ ಉತ್ತರ ಪ್ರಾಂತ ಪ್ರಮುಖ ಶ್ರೀಕಾಂತ ಹೊಸಕೇರಿ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು,ಕಾರ್ಯಕರ್ತರು ಭಾಗಿಯಾಗಿದ್ದರು.

click me!