ಏಪ್ರಿಲ್ 15 ರಿಂದ ಅನಿರ್ಧಷ್ಟಾವಧಿ ಲಾರಿ ಮುಷ್ಕರ, ರಾಜ್ಯಕ್ಕೆ ಬೇರೆ ಲಾರಿ ಎಂಟ್ರಿ ಇಲ್ಲ!

Published : Apr 05, 2025, 02:56 PM ISTUpdated : Apr 05, 2025, 03:08 PM IST
ಏಪ್ರಿಲ್ 15 ರಿಂದ ಅನಿರ್ಧಷ್ಟಾವಧಿ ಲಾರಿ ಮುಷ್ಕರ, ರಾಜ್ಯಕ್ಕೆ ಬೇರೆ ಲಾರಿ ಎಂಟ್ರಿ ಇಲ್ಲ!

ಸಾರಾಂಶ

ಡೀಸೆಲ್ ದರ ಏರಿಕೆ ವಿರೋಧಿಸಿ ಏಪ್ರಿಲ್ 15 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಲಾರಿ ಮಾಲೀಕರ ಸಂಘ ಕರೆ ನೀಡಿದೆ. ರಾಜ್ಯಾದ್ಯಂತ ಆರು ಲಕ್ಷ ಲಾರಿಗಳು ಸ್ಥಗಿತಗೊಳ್ಳಲಿದ್ದು, ಗೂಡ್ಸ್ ಸಾಗಣೆ ಸಂಪೂರ್ಣ ಬಂದ್ ಆಗಲಿದೆ. ಬೇಡಿಕೆ ಈಡೇರುವವರೆಗೆ ಮುಷ್ಕರ ಮುಂದುವರೆಯಲಿದೆ ಎಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ. ಸರ್ಕಾರಕ್ಕೆ ಏಪ್ರಿಲ್ 14 ರವರೆಗೆ ಗಡುವು ನೀಡಲಾಗಿದೆ.

ಬೆಂಗಳೂರು (ಏ.5): ರಾಜ್ಯ ಸರ್ಕಾರ ಡೀಸೆಲ್‌ ಮೇಲಿನ ದರ ಏರಿಕೆಯನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿರುವ ಲಾರಿ ಮಾಲೀಕರು, ಏಪ್ರಿಲ್ 15 ರಂದು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಸಂಬಂಧ ಲಾರಿ ಮಾಲೀಕರು ಸಭೆ  ನಡೆಸಿ ತೀರ್ಮಾನ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನಿರ್ಧಾರ  ತೆಗೆದುಕೊಂಡಿದ್ದಾರೆ. ಈ ಬಗ್ಗೆ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಮಾಹಿತಿ ನೀಡಿದ್ದು, ಎಲ್ಲಾ ರೀತಿಯ  ಲಾರಿಗಳ ಸಂಚಾರ ಸ್ಥಗಿತಗೊಳಿಸಲಿದ್ದೇವೆ ಎಂದಿದ್ದಾರೆ. ಬೇಡಿಕೆ ಈಡೇರಿಸುವವರೆಗೂ ಲಾರಿಗಳ ಸಂಚಾರ ಬಂದ್ ಮಾಡಲು ತೀರ್ಮಾನ ತೆಗೆದು ಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಏರ್ ಪೋರ್ಟ್ ಟ್ಯಾಕ್ಸಿ, ಜಲ್ಲಿ ಕಲ್ಲು ಲಾರಿ, ಮರಳು ಲಾರಿ , ಗೂಡ್ಸ್ ವಾಹನಗಳು ,ಅಕ್ಕಿ ಲೊಡ್, ಗೂಡ್ಸ್, ಪೆಟ್ರೋಲ್ ಡಿಸೇಲ್ ಲಾರಿ  ಹೀಗೆ  ⁠6 ಲಕ್ಷ ಲಾರಿಗಳು ತಮ್ಮ ಕೆಲಸವನ್ನು ನಿಲ್ಲಿಸಲಿವೆ. ಲಾರಿ ಚಾಲಕರ ಸಂಘದಿಂದ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದು, ಬೇರೆ ರಾಜ್ಯದಿಂದಲೂ ವಾಹನ ಬರೋದಿಲ್ಲ. ಎಲ್ಲಾ ಬಾರ್ಡರ್ ಚೆಕ್ ಪೋಸ್ಟ್ ಗಳಲ್ಲಿ ವಾಹನಗಳು ನಿಲ್ಲಿಸಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ.

ಹಾಲಿನ ದರ ಏರಿಕೆ ಬೆನ್ನಲ್ಲೇ, ರಾಜ್ಯದ ಜನತೆಗೆ ಮತ್ತಷ್ಟು ಬಿಸಿಯಾದ ಟೀ ಕಾಫಿ, 5ರಿಂದ 10ರೂ ಏರಿಕೆ!

ಏಪ್ರಿಲ್ 14 ರ ವರೆಗೆ ಸರ್ಕಾರಕ್ಕೆ ಸಮಯ ಕೊಡುತ್ತೇವೆ. 15ರ ರಾತ್ರಿಯಿಂದಲೇ ಹೋರಾಟ  ಆರಂಭವಾಗಲಿದೆ. ಗೂಡ್ಸ್ ಟ್ರಾನ್ಸ್ ಪೋರ್ಟ್ ಸಂಪೂರ್ಣ ಬಂದ್ ಆಗಲಿದೆ. ಪೆಟ್ರೋಲಿಯಂ ಅಸೋಸಿಯೇಷನ್, ಚಾಲಕರ ಸಂಘ ಬೆಂಬಲ ಇದೆ. ಯಾವುದೇ ರಾಜ್ಯದಿಂದ ಕರ್ನಾಟಕ ಒಳಗೆ ವಾಣಿಜ್ಯ ವಾಹನ ಸಂಚಾರ ಮಾಡಲ್ಲ ಎಂದು ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಮಾಹಿತಿ ನೀಡಿದ್ದಾರೆ.

ಡೀಸೆಲ್‌ ಮೇಲಿನ ಮಾರಾಟ ತೆರಿಗೆ ಹೆಚ್ಚಿಸುವ ರಾಜ್ಯ ಸರ್ಕಾರದ ಕ್ರಮದಿಂದಾಗಿ ಪ್ರತಿ ಲೀ. ಡೀಸೆಲ್‌ ಬೆಲೆ 2 ರು.ನಷ್ಟು ಏರಿಕೆಯಾಗಿದೆ. ಅಲ್ಲದೆ, ಕಳೆದ ಜೂನ್‌ನಲ್ಲೂ ತೆರಿಗೆ ಹೆಚ್ಚಳದಿಂದಾಗಿ ಡೀಸೆಲ್‌ ಬೆಲೆ 1.50 ರು. ಹೆಚ್ಚಳವಾಗಿತ್ತು. ಈ ಮೂಲಕ ಕಳೆದೊಂದು ವರ್ಷದಿಂದ ಡೀಸೆಲ್‌ ಬೆಲೆ 3.50 ರು. ಹೆಚ್ಚಳವಾದಂತಾಗಿದೆ.

Bengaluru: ಜನರಿಗೆ ದರ ಏರಿಕೆ ಬರೆ, ವಿದೇಶ ಪ್ರವಾಸಕ್ಕೆ ಮೆಟ್ರೋ ಅಧಿಕಾರಿಗಳಿಂದ 26 ಲಕ್ಷ ಖರ್ಚು!

ದರ ಹೆಚ್ಚಳದಿಂದಾಗಿ ಸರಕು ಸಾಗಣೆ ಲಾರಿಗಳಿಗೆ ಭಾರೀ ಹೊರೆಯಾಗುತ್ತಿದೆ. ಹೀಗಾಗಿ ಸದ್ಯ ಹೆಚ್ಚಳ ಮಾಡಿರುವ ದರವನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಸರಕು ಸಾಗಣೆ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಫೆಡರೇಷನ್‌ ಆಫ್‌ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘ ಆಗ್ರಹಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ