ರಾಜ್ಯ ಸರ್ಕಾರವು ಹಾಲು, ವಿದ್ಯುತ್, ಕಸ ಸಂಗ್ರಹಣೆ ಮತ್ತು ಡೀಸೆಲ್ ದರಗಳನ್ನು ಹೆಚ್ಚಿಸಿದೆ, ಇದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹಾಲಿನ ದರ ಏರಿಕೆಯ ಪರಿಣಾಮವಾಗಿ ಟೀ ಮತ್ತು ಕಾಫಿ ದರಗಳು ಸಹ ಏರಿಕೆಯಾಗಿವೆ, ಲಾರಿ ಮಾಲೀಕರ ಸಂಘಟನೆಗಳು ಸರ್ಕಾರದ ವಿರುದ್ಧ ಮುಷ್ಕರಕ್ಕೆ ಸಿದ್ಧತೆ ನಡೆಸಿವೆ.
ರಾಜ್ಯ ಸರ್ಕಾರ ಜನತೆಗೆ ದರ ಏರಿಕೆಯ ಶಾಕ್ ನೀಡಿದೆ. ರಾಜ್ಯ ಸರ್ಕಾರ ಹಾಲಿನ ಬೆಲೆ, ವಿದ್ಯುತ್ ದರ, ಕಸ ಸಂಗ್ರಹಣೆ ದರ ಹಾಗೂ ಡೀಸೆಲ್ ದರ ಹೆಚ್ಚಿಸಿದೆ. ಕೇಂದ್ರ ಸರ್ಕಾರ ಟೋಲ್ ದರಗಳನ್ನು ಹೆಚ್ಚಿಸಿದೆ. ಇದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಹಾಲು ದರ ಏರಿಕೆ ಎಫೆಕ್ಟ್ ನಿಂದ ಟೀ, ಕಾಫಿ ದರ ಕೂಡ ಏರಿಕೆಯಾಗಿದೆ. ಟೀ ಅಂಗಡಿ ಮುಂದೆ ದರ ಏರಿಕೆ ಬೋರ್ಡ್ ಅಳವಡಿಕೆ ಮಾಡಲಾಗಿದೆ. ಹಾಲು, ಕಾಫಿ, ಹಾಗೂ ಟೀ ಪುಡಿ ಹೆಚ್ಚಳದಿಂದ ದರ ಏರಿಕೆ ಮಾಡಲಾಗಿದೆ ಎಂದು ಬೋರ್ಡ್ ನಲ್ಲಿ ಬರೆಯಲಾಗಿದ್ದು, ಹೀಗಾಗಿ ಗ್ರಾಹಕರು ಸಹಕಾರ ನೀಡಬೇಕೆಂದು ಮನವಿ ಮಾಡಲಾಗಿದೆ.
ಸರ್ಕಾರದ ಖಜಾನೆ ತುಂಬಿಸಿಕೊಳ್ಳಲು ಬೆಲೆ ಏರಿಕೆ ಅಸ್ತ್ರ: ಎಂಟಿಬಿ ನಾಗರಾಜ್ ವಾಗ್ದಾಳಿ
5 ರಿಂದ 10 ರೂ ಏರಿಕೆ!
ಹೋಟೆಲ್ ಗಳಲ್ಲಿ ಕಾಫಿ, ಟೀ ದರ ಏರಿಕೆ ಕಂಡಿದ್ದು, ಒಂದು ಗ್ಲಾಸ್ ಕಾಫಿ ಮತ್ತು ಟೀ ಬೆಲೆ
5 ರಿಂದ 10 ರೂಪಾಯಿವರೆಗೆ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ಈಗಾಗಲೇ ಸಾಕಷ್ಟು ಹೋಟೆಲ್ ಗಳು ಬೆಲೆ ಏರಿಕೆ ಮಾಡಿದೆ. ಸರ್ಕಾರ ಒಂದು ಲೀಟರ್ ಹಾಲಿಗೆ 4 ರೂಪಾಯಿ ಏರಿಕೆ ಮಾಡಿದೆ. ಆದ್ರೆ ಹೋಟೆಲ್ ಗಳು 100 ಗ್ರಾಂ ಕಾಫಿ,ಟೀಗೆ 5 ರೂಪಾಯಿ ಏರಿಕೆ ಮಾಡಿದ್ದಾರೆ. ಹೀಗಾಗಿ ಜನ ಇವರು ನಮ್ಮ ಜೇಬಿಗೆ ಕತ್ತರಿ ಹಾಕ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ವಿರುದ್ದ ಸಿಡಿದೆದ್ದ ಲಾರಿ ಮಾಲೀಕರ ಸಂಘಟನೆ:
ಬೆಲೆ ಏರಿಕೆಯಿಂದ ಬೇಸತ್ತು ಸರ್ಕಾರದ ವಿರುದ್ದ ಲಾರಿ ಓನರ್ಸ್ ಅಸೋಸಿಯೇಷನ್ ಸಿಡಿದೆದ್ದಿದೆ. ರಾಜ್ಯಾದ್ಯಂತ ಸರ್ಕಾರದ ವಿರುದ್ದ ಮುಷ್ಕರಕ್ಕೆ ಸಿದ್ದತೆ ನಡೆಸಿದ್ದು, ಮುಷ್ಕರ ಸಂಬಂಧ ಇಂದು ಜಿಲ್ಲಾ ಮತ್ತು ತಾಲೂಕು ಮಟ್ಟದ ಲಾರಿ ಮಾಲೀಕರ ಸಂಘಟನೆಗಳು ಸಭೆ ನಡೆಸುತ್ತಿದೆ. ಬಳಿಕ ಮಧ್ಯಾಹ್ನ 1.30 ಕ್ಕೆ ಸುದ್ದಿಗೋಷ್ಠಿ ಕರೆದಿದೆ.
ಗ್ಯಾರಂಟಿ ಯೋಜನೆಗಳಿಗೂ ಬೆಲೆ ಏರಿಕೆಗೂ ಸಂಬಂಧವಿಲ್ಲ: ಸಚಿವ ವೆಂಕಟೇಶ್
ಯಾವೆಲ್ಲಾ ಬೆಲೆ ಏರಿಕೆ ವಿರುದ್ದ ಸಮರ
1. ಡಿಸೇಲ್ ದರ ಹೆಚ್ಚಳ.
2. ರಾಜ್ಯ ಹೆದ್ದಾರಿಗಳಿಗೆ ಟೋಲ್ ಅಳವಡಿಕೆ ಹಣ ವಸೂಲಿ ಮಾಡುತ್ತಿರುವುದು.
3. ಆರ್ಟಿಓ ಬಾರ್ಡರ್ ಚೆಕ್ ಪೋಸ್ಟ್.
4. FC ಫಿಟ್ನೆಸ್ ಶುಲ್ಕ ಹೆಚ್ಚಿಸಿರುವುದು.
5. ಬೆಂಗಳೂರು ನಗರದಲ್ಲಿ ಸರಕು ಸಾಗಾಣಿಕೆ ವಾಹನಗಳಿಗೆ ನೋ ಎಂಟ್ರಿ.
6. ಚಾಲಕರ ಮೇಲೆ ಹಲ್ಲೆ.
ಡೀಸೆಲ್ ಮೇಲಿನ ಮಾರಾಟ ತೆರಿಗೆ ಹೆಚ್ಚಿಸುವ ರಾಜ್ಯ ಸರ್ಕಾರದ ಕ್ರಮದಿಂದಾಗಿ ಪ್ರತಿ ಲೀ. ಡೀಸೆಲ್ ಬೆಲೆ 2 ರು.ನಷ್ಟು ಏರಿಕೆಯಾಗಿದೆ. ಅಲ್ಲದೆ, ಕಳೆದ ಜೂನ್‌ನಲ್ಲೂ ತೆರಿಗೆ ಹೆಚ್ಚಳದಿಂದಾಗಿ ಡೀಸೆಲ್ ಬೆಲೆ 1.50 ರು. ಹೆಚ್ಚಳವಾಗಿತ್ತು. ಈ ಮೂಲಕ ಕಳೆದೊಂದು ವರ್ಷದಿಂದ ಡೀಸೆಲ್ ಬೆಲೆ 3.50 ರು. ಹೆಚ್ಚಳವಾದಂತಾಗಿದೆ.
ದರ ಹೆಚ್ಚಳದಿಂದಾಗಿ ಸರಕು ಸಾಗಣೆ ಲಾರಿಗಳಿಗೆ ಭಾರೀ ಹೊರೆಯಾಗುತ್ತಿದೆ. ಹೀಗಾಗಿ ಸದ್ಯ ಹೆಚ್ಚಳ ಮಾಡಿರುವ ದರವನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಸರಕು ಸಾಗಣೆ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡೀಸೆಲ್ ಮೇಲೆ ತೆರಿಗೆ ರೂಪದಲ್ಲಿ 40 ರು.ನಷ್ಟು ಹಣ ಪಡೆಯುತ್ತಿವೆ. ಹೀಗೆ ತೆರಿಗೆ ಹೊರೆ ಹೊರಿಸಿರುವುದರಿಂದ ಲಾರಿ ಮಾಲೀಕರು ಸಾಯುವುದೋ ಅಥವಾ ಬದುಕುವುದೋ ತಿಳಿಯದಂತಾಗಿದೆ. ಎಂದು ಫೆಡರೇಷನ್ ಆಫ್ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘ ಆಗ್ರಹಿಸಿದೆ.