
ಬೆಂಗಳೂರು, (ಮೇ.20): ಲಾಕ್ ಡೌನ್ 4.0 ವೇಳೆಯಲ್ಲಿ ಅಂತರ್ ಜಿಲ್ಲೆಯೊಳಗೆ ಪ್ರಯಾಣಿಸಲು ಪಾಸ್ ಅಗತ್ಯವಿರುವುದಿಲ್ಲ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಡಿಜಿಪಿ ಕರ್ನಾಟಕ ಟ್ವಿಟ್ಟರ್ ನಲ್ಲಿ ತಿಳಿಸಿದ್ದು, ಪ್ರಯಾಣ ಮಾಡುವಾಗ ಅಗತ್ಯ ವಸ್ತುಗಳನ್ನು, ದಾಖಲೆಗಳನ್ನು ಕೊಂಡೊಯ್ಯಿರಿ. ಆದ್ರೆ, ಸಂಜೆ 7ರಿಂದ ಬೆಳಗ್ಗೆ 7ಯವರೆಗೆ ಎಂದಿನಿಂತೆ ಲಾಕ್ ಡೌನ್ ಜಾರಿಯಲ್ಲಿರುತ್ತೆ. ಆದ್ದರಿಂದ ಈ ಸಮಯದೊಳಗೆ ಮಾತ್ರ ಪ್ರಯಾಣ ಮಾಡಲು ಅವಕಾಶವಿದೆ ಎಂದು ಹೇಳಿದ್ದಾರೆ.
ಪ್ರಯಾಣಿಕರ ಗಮನಕ್ಕೆ: ಬಸ್ ಸಂಚಾರದಲ್ಲಿ ಕೊಂಚ ಬದಲಾವಣೆ....!
ಇನ್ನೊಂದು ಪ್ರಮುಖಾಂಶ ಅಂದ್ರೆ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಮೇ.31ರ ವರೆಗೆ ಪ್ರತಿ ಭಾನುವಾರ ಸಂಪೂರ್ಣ ಲಾಕ್‌ಡೌನ್ ಇರಲಿದೆ.ಹಾಗಾಗಿ ಯಾವುದೇ ಅಂಗಡಿ-ಮುಂಗಟ್ಟುಗಳು ತೆಗೆಯುವಂತಿಲ್ಲ. ಇನ್ನು ಯಾವುದೇ ವಾಹನಗಳ ಸಂಚಾರಕ್ಕೆ ಅನುಮತಿ ಇರುವುದಿಲ್ಲ.
ಮಾರ್ಚ್ 25ರಿಂದ ಹೊರಡಿಸಲಾಗಿದ್ದ ಲಾಕ್ ಡೌನ್ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶವಿರಲಿಲ್ಲ. ಬಳಿಕ ಸ್ವಲ್ಪ ವಿನಾಯ್ತಿ ನೀಡಿ ಪಾಸ್ ಹೊಂದಿರುವವರಿಗೆ ನಿಯಮ ಹೇರಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.
ಆದರೆ, ಇದೀಗ ಲಾಕ್‌ಡೌನ್ 4.0 ರಾಜ್ಯಸರ್ಕಾರ ಬಹುತೇಕ ಚಟುವಟಿಕೆಗಳಿಗೆ ನಿರ್ಬಂಧ ಸಡಿಲಿಸಿದ್ದು, ಅಂತರ್ ಜಿಲ್ಲೆಗಳ ವಾಹನ ಸಂಚಾರಕ್ಕೆ ಇನ್ನು ಮುಂದೆ ಪಾಸ್ ಅಗತ್ಯವಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ