ಬೆಂಗಳೂರಿನಲ್ಲಿ ಭಯಾನಕ ಸದ್ದು, ಭೂಕಂಪವಲ್ಲ, ಹೆದರೋ ಅಗತ್ಯವಿಲ್ಲ...!

Published : May 20, 2020, 02:08 PM ISTUpdated : May 20, 2020, 03:48 PM IST
ಬೆಂಗಳೂರಿನಲ್ಲಿ ಭಯಾನಕ ಸದ್ದು, ಭೂಕಂಪವಲ್ಲ, ಹೆದರೋ ಅಗತ್ಯವಿಲ್ಲ...!

ಸಾರಾಂಶ

ಬೆಂಗಳೂರಿನಲ್ಲಿ ಭಯಾನಕ ಸದ್ದು, ಕಾರಣವಿನ್ನೂ ತಿಳಿದು ಬಂದಿಲ್ಲ!| I ಈ ಸಂಬಂಧ ತಪಾಸಣೆ ನಡೆಸುವುದಾಗಿ KSNDMC ಅಧಿಕಾರಿಗಳು| ಹೀಗಿದ್ದರೂ ಬೆಂಗಳೂರಿನ ಜನತೆ ಭಯ ಬೀಳುವ ಅಗತ್ಯವಿಲ್ಲ, ಇದು ಭೂಕಂಪವಲಲ್ಲ: ಅಧಿಕಾರಿಗಳ ಸ್ಪಷ್ಟನೆ| ಶಬ್ಧಕ್ಕೇನು ಕಾರಣವಾಗಿರಬಹುದು? ಇಲ್ಲಿದೆ ವಿವರ

ಬೆಂಗಳೂರು(ಮೇ.20) ಮಧ್ಯಾಹ್ನ ಊಟ ಮಾಡಿ ಆರಾಮಾಗಿ ಕುಳಿತಿದ್ದ ಬೆಂಗಳೂರಿನ ಜನತೆಯನ್ನು ಭಯಾನಕ ಶಬ್ಧವೊಂದು ಬೆಚ್ಚಿ ಬೀಳಿಸಿದೆ. ಸ್ಟೋಟದಂತೆ ಕೇಳಿಬಂದ ಸದ್ದು ಏನೆಂಬುವುದು ಸದ್ಯ ಎಲ್ಲೆಡೆ ಚರ್ಚೆಯಾಗುತ್ತಿದೆ. ಆದರೆ ಭಯ ಬೇಡ ಬೆಂಗಳೂರಿನಲ್ಲಿ ಯಾವುದೇ ಭೂಕಂಪ ಸಂಭವಿಸಿಲ್ಲ ಎಂದು KSNDMC ಅಧಿಕಾರಿಗಳು ತಿಳಿಸಿದ್ದಾರೆ.

ಕ್ವಾರೆಂಟೈನ್ ಸೀಲ್ ಇರೋ ಪೊಲೀಸರು ಕರ್ತವ್ಯಕ್ಕೆ ನಿಯೋಜನೆ

ಹೌದು ಮಧ್ಯಾಹ್ನ ಸುಮಾರು 1.45ರ ಸುಮಾರಿಗೆ ಸ್ಪೋಟದಂತಹ ಈ ಶಬ್ಧ ಬೆಂಗಳೂರಿನ ಬಹುತೇಕ ಕಡೆ ಕೇಳಿ ಬಂದಿದೆ. ಸರ್ಜಾಪುರ, ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ, ಮಾರತ್‌ ಹಳ್ಳಿ, ಇಂಧಿರಾನಗರ, ಹೆಬ್ಬಾಳ, ಜೆ. ಪಿ. ನಗರ, ಕೆ. ಆರ್‌ ಪುರಂ ಸೇರಿದಂತೆ ಅನೇಕ ಕಡೆ ಈ ಸದ್ದು ಜನರ ನಿದ್ದೆಗೆಡಿಸಿದೆ. ಅನೇಕ ಮಂದಿ ಇದು HALನಲ್ಲಿರುವ ಯುದ್ಧ ವಿಮಾನ ಮಿರಾಜ್ 2000 ಆರಾಟ ಮಾಡುವಾಗ ಕೇಳಿ ಬಂದ ಶಬ್ಧವಾಗಿರಬಹುದು ಎಂದು ಅಂದಾಜಿಸಿದ್ದಾರೆ.

ತಜ್ಞರು ಹೇಳೋದೇನು?

ಈ ಸಂಬಂಧ ಸುವರ್ಣ ನ್ಯೂಸ್​ಗೆ ಭೂಗರ್ಭ ಶಾಸ್ತ್ರಜ್ಞ ಪ್ರಕಾಶ್​ ಸ್ಪಷ್ಟನೆ ನೀಡಿದ್ದು, ಹವಾಮಾನ ಬದಲಾವಣೆಯಿಂದ ಶಬ್ದ ಕೇಳಿಸುತ್ತದೆ. ಭೂಗರ್ಭದಲ್ಲಿ ಯಾವುದೇ ಕಂಪನ ಆಗಿಲ್ಲ. ಚಂಡಮಾರುತ ಚಲನೆ ಆದಾಗ ಹವಾಮಾನ ಬದಲಾವಣೆಯಾಗುತ್ತದೆ. ಹವಾಮಾನ ಬದಲಾವಣೆ ವೇಳೆ ಬಿಸಿಗಾಳಿ ಚಲನೆಯಾಗುತ್ತದೆ. ಬಿಸಿಗಾಳಿ ಚಲನೆಯಾದಾಗ ಸ್ಫೋಟ ಶಬ್ಧ ಕೇಳಿಸುತ್ತದೆ. ಅಂಫಾನ್​ ಚಂಡಮಾರುತದಿಂದ ಹವಾಮಾನ ಬದಲಾವಣೆಯಾಗಿರಬಹುದು. ಹೆಚ್ಚಿನ ಒತ್ತಡ, ಬಿಸಿ ಗಾಳಿಯ ಘರ್ಷಣೆಯಿಂದ ಶಬ್ಧ ಉಂಟಾಗುತ್ತದೆ ಎಂದಿದ್ದಾರೆ.

ಲಾಕ್‌ಡೌನ್ ನಡುವೆ ಗುಡ್‌ನ್ಯೂಸ್: ಮುಚ್ಚಿತು ಓಝೋನ್ ಪದರದ ಅತಿ ದೊಡ್ಡ ರಂಧ್ರ!

ಭಯ ಬೇಡ, ಭೂಕಂಪ ಅಲ್ಲ

ಇನ್ನು ಕರ್ನಾಟಕ ನೈಸರ್ಗಿಕ ವಿಪತ್ತು ಕೇಂದ್ರದ ವಿಜ್ಞಾನಿಗಳು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಶಬ್ಧಕ್ಕೇನು ಕಾರಣ ಎಂಬುವುದನ್ನು ಅತೀ ಶೀಘ್ರದಲ್ಲೇ ಪತ್ತೆ ಹಚ್ಚುವುದಾಗಿ ತಿಳಿಸಿದೆ. ಹೀಗಿದ್ದರೂ ಇದು ಭೂಕಂಪದಿಂದ ಬಂದ ಸದ್ದು ಅಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ಭೂಕಂಪ ಸಂಭವಿಸಿದೆ ಎಂದು ಭಯಭೀತರಾದವರು ನೆಮ್ಮದಿ ನಿಟ್ಟುಸಿರು ಬಿಡಬಹುದಾಗಿದೆ.

ಟ್ವಿಟರ್‌ನಲ್ಲಿ ಚರ್ಚೆ

ಟ್ವಿಟರ್‌ನಲ್ಲಿ ಈ ಸಂಬಂಧ ತೀವ್ರ ಚರ್ಚೆಯಾಗುತ್ತಿದ್ದು, ಬೆಂಗಳೂರಿನ ಅನೇಕ ಕಡೆ ಈ ಸದ್ದು ಕೇಳಿರುವುದು ದೃಢವಾಗಿದೆ.

ಅನೇಕ ಮಂದಿ ಇದಕ್ಕೇನು ಕಾರಣವಾಗಿರಬಹುದೆಂಬುವುದನ್ನೂ ಇಲ್ಲಿ ಉಲ್ಲೇಖಿಸಿದ್ದಾರೆ.

ಬೆಂಗಳೂರು ಪೊಲೀಸರು ಕೂಡಾ ಈ ಸಂಬಂಧ ಪ್ರತಿಕ್ರಿಯಿಸಿದ್ದು, ಭಾರೀ ಶಬ್ಧ ಕೇಳಿರುವ ಬಗ್ಗೆ ಎಲ್ಲೆಡೆಯಿಂದ ಮಾಹಿತಿ ಬರಲಾರಂಭಿಸಿದೆ. ಈವರೆಗೆ ಯಾವುದೇ ಹಾನಿ ಬ್ಗೆ ವರದಿಯಾಗಿಲ್ಲ ಹೀಗಾಗಿ ಭಯ ಬೇಡ. ನಾವು ಈ ಬಗ್ಗೆ ಪರಿಶೀಲನೆ ನಡೆಸಿ ಈ ಬಬಗ್ಗೆ ಸ್ಪಷ್ಟ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.

ಸದ್ಯ ಕೊರೋನಾದಿಂದ ಮನೆಯೊಳಗಿರುವ ಬೆಂಗಳೂರಿನ ಜನತೆಗೆ ಈ ಭಾರೀ ಶಬ್ಧ ಬೆಚ್ಚಿ ಬೀಳಿಸಿದೆ ಎಂಬುವುದರಲ್ಲಿ ಅನುಮಾನವಿಲ್ಲ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!