ಎತ್ತಿನಹೊಳೆಯಲ್ಲಿ ಏನೆಲ್ಲ ಸಮಸ್ಯೆ ಇದೆ ಅದರ ಬಗ್ಗೆ ಚರ್ಚೆ ಮಾಡಿದ್ದೇವೆ. ಪ್ರತ್ಯೇಕವಾದ ಸರ್ವೇ ಮಾಡುತ್ತೇವೆ ಎಂದು ಜಲಸಂಪನ್ಮೂಲ ಸಚಿವ, ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಬೆಂಗಳೂರು (ಜೂ.13): ಎತ್ತಿನಹೊಳೆಯಲ್ಲಿ ಏನೆಲ್ಲ ಸಮಸ್ಯೆ ಇದೆ ಅದರ ಬಗ್ಗೆ ಚರ್ಚೆ ಮಾಡಿದ್ದೇವೆ. ಪ್ರತ್ಯೇಕವಾದ ಸರ್ವೇ ಮಾಡುತ್ತೇವೆ ಎಂದು ಜಲಸಂಪನ್ಮೂಲ ಸಚಿವ, ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಇಂದು ಬೆಂಗಳೂರಿನ ವಿಕಾಸಸೌಧದಲ್ಲಿ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆಗಳ ಅರಣ್ಯ ತಿರುವಳಿ ಮತ್ತು ಭೂಸ್ವಾಧೀನ ಪ್ರಸ್ತಾವನೆ ಕುರಿತು ಸಭೆಯಲ್ಲಿ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಂದಾಯ ಹಾಗೂ ಫಾರೆಸ್ಟ್ ಡಿಪಾರ್ಟ್‌ಮೆಂಟ್‌ನಿಂದ ಪ್ರತ್ಯೇಕ ಸರ್ವೇ ಮಾಡುತ್ತೇವೆ. ಎತ್ತಿನಹೊಳೆ ಪ್ರಾಜೆಕ್ಟ್ ನಲ್ಲಿ 50ಕೋಟಿ ರೂ. ಹಣ ರೈತರಿಗೆ ಕೊಡಬೇಕಾಗಿತ್ತು. ಆ ಪೈಕಿ ಈಗಾಗಲೇ 10 ಕೋಟಿ ರೂಪಾಯಿ ಕೊಟ್ಟಿದ್ದೇವೆ. ಆದರೆ ಕೆಲವು ಜಾಗ ಅರಣ್ಯ ಇಲಾಖೆ ನಮ್ಮದೇ ಅಂತಾ ಹೇಳ್ತಾ ಇದ್ದಾರೆ. ಹೀಗಾಗಿ ಇದನ್ನ ಕ್ಯಾಬಿನೆಟ್‌ನಲ್ಲಿ ಇಟ್ಟು ಚರ್ಚೆ ಮಾಡುತ್ತಾರೆ ಎಂದರು.
ರಾಜ್ಯಕ್ಕೆ ಕಳಂಕ ತಂದ ದರ್ಶನ್ ಸಿನಿಮಾ ಬ್ಯಾನ್ ಮಾಡಿ -ಮಾಜಿ ಶಾಸಕ ಆಗ್ರಹ
ಮೊದಲ ಹಂತದಲ್ಲಿ 45 ಕಿ ಲೋ ಮೀಟರ್ ವರೆಗೂ ನೀರು ಹರಿಸಬೇಕು. ನೀರನ್ನು ಹೊರಗಡೆ ತೆಗೆದು ತೋರಿಸಬೇಕು ಎಂದು ಹೇಳಿದ್ದೇನೆ. ಆ ಸಂಬಂಧ ಸ್ಪೆಷಲ್ ಟೆಕ್ನಿಕಲ್ ಟೀಮ್ ರಚನೆ ಮಾಡುತ್ತೇವೆ. ಯಾವ ಕಡೆ ನೀರು ಸಮುದ್ರಕ್ಕೆ ಸೇರುತ್ತಿದೆ, ಅದನ್ನು ಗಮನಕ್ಕೆ ತರುವಂತೆ ಒಂದು ಟೀಮ್ ರಚನೆ ಮಾಡಲು ಹೇಳಿದ್ದೇನೆ. ಇನ್ನೂ ಟೆಕ್ನಿಕಲ್ ಟೀಮ್ ರಚನೆ ಮಾಡಿಲ್ಲ. ಎತ್ತಿನ ಹೊಳೆಗೆ ಎಲ್ಲಿಂದೆಲ್ಲಾ ನೀರು ತರಲು ಸಾಧ್ಯವೋ ಎಲ್ಲಾ ಕಡೆಯಿಂದಲೂ ನೀರು ತರಲು ಪ್ಲಾನ್ ಮಾಡಿದ್ದೇವೆ ಎಂದರು.
ಬಿಎಸ್ ಯಡಿಯೂರಪ್ಪ ವಿರುದ್ಧ ಅರೆಸ್ಟ್ ವಾರೆಂಟ್ ವಿಚಾರ ಸಂಬಂಧ ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವಾಗ? ನನಗೆ ಗೊತ್ತಿಲ್ಲ? ನಾನು ಮೀಟಿಂಗ್‌ನಲ್ಲಿದ್ದೇನೆ ನೀವು ಹೇಳಿದ್ಮೇಲೆ ಗೊತ್ತಾಗಿದ್ದು. ನನಗೆ ಈ ವಿಚಾರದಲ್ಲಿ ತಿಳಿವಳಿಕೆ ಇಲ್ಲ ಎಂದು ಪ್ರತಿಕ್ರಿಯಿಸಲು ನಿರಾಕರಿಸಿದರು
ಮಾಡಿದ ಪಾಪ ಕರ್ಮಗಳು ಕೊನೆಯಾಗಲೆಂದು ತೊಡೆಯ ಚರ್ಮದಿಂದ ತಾಯಿಗೆ ಚಪ್ಪಲಿ ಮಾಡಿಸಿದ ಮಗ!
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪೋಕ್ಸೋ ಕ್ಸೇಸ್‌ನಲ್ಲಿ ಸಿಲುಕಿಕೊಂಡಿದ್ದು, ವಿಚಾರಣೆಗೆ ಹಾಜರಾಗಲು ಕೋರ್ಟ್ ನೋಟೀಸ್ ಜಾರಿ ಮಾಡಲಾಗಿತ್ತು. ಆದರೆ ವಿಚಾರಣೆಗೆ ಗೈರು ಆಗಿದ್ದರು ಜೊತೆಗೆ ವಿಚಾರಣೆಗೆ ಬರಲು ಕಾಲಾವಕಾಶ ಕೋರಿ ನಿರೀಕ್ಷಣಾ ಜಾಮೀನು ಪಡೆಯಲು ಅರ್ಜಿ ಸಲ್ಲಿಕೆ ಮಾಡಿದ್ದರು. ಇದೀಗ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದು ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಇದರಿಂದ ಯಡಿಯೂರಪ್ಪ ಬಂಧನವಾಗುವ ಸಾಧ್ಯತೆಯಿದೆ.