ಕೇಂದ್ರದಿಂದ ಬರ ಪರಿಹಾರ ಹಣ ಇನ್ನೂ ಬಂದಿಲ್ಲ, ಯಾವ ಬ್ಯಾಂಕ್‌ಗೆ ಜಮಾ ಆಗುತ್ತೋ ಗೊತ್ತಿಲ್ಲ: ಡಿಕೆಶಿ

By Ravi JanekalFirst Published Apr 27, 2024, 7:09 PM IST
Highlights

 ಕುಮಾರಸ್ವಾಮಿ ಏನೋ ಹೇಳಿದ್ದಾರಂತೆ ಇಷ್ಟು ಬಂದಿರೋದೇ ಸಾಕು ಬಿಡಿ ಅಂತಾ. ನೀನು ಒಬ್ಬ ನಾಡದ್ರೋಹಿ ಎಂದು ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಬೆಂಗಳೂರು (ಏ.27): ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿತ್ತು. ಒಟ್ಟುಕ 223 ತಾಲೂಕಿನಲ್ಲಿ ಬರಗಾಲ ಬಂದಿತ್ತು. ಇದರಿಂದ ರೈತರಿಗೆ ತುಂಬಾ ಸಮಸ್ಯೆ ಆಗಿದೆ. ಬರಗಾಲದಿಂದ ರಾಜ್ಯದಲ್ಲಿ 35 ಸಾವಿರ ಕೋಟಿ ನಷ್ಟವುಂಟಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿಳಿಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬರ ಪರಿಸ್ಥಿತಿ ಬಗ್ಗೆ, ಮಳೆ ಕೊರತೆ ಬಗ್ಗೆ ಕೇಂದ್ರಕ್ಕೆ ವರದಿ ಕೊಡಲಾಗಿತ್ತು. ಖುದ್ದು ಪ್ರಧಾನಮಂತ್ರಿ ಸೇರಿದಂತೆ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಪರಿಹಾರ ನೀಡಲು ಮನವಿ ಮಾಡಲಾಗಿತ್ತು. ಜೊತೆಗೆ ಈ ಬಾರಿ ಬರಗಾಲ ಇರುವುದರಿಂದ ಉದ್ಯೋಗ ಖಾತ್ರಿ ಸಹ 150 ದಿನ ಮಾಡುವಂತೆ ಮನವಿ ಮಾಡಿದ್ದೆವು. ಆದರೆ ಪರಿಹಾರ ಕೊಡುತ್ತೇವೆ ಎಂದವರು ಕೊಡಲಿಲ್ಲ. ಇದರಿಂದ ನಾವು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಬೇಕಾಯ್ತು.

ಇದೀಗ ಕೋರ್ಟ್‌ ಮಧ್ಯೆ ಪ್ರವೇಶದಿಂದ ಕೇವಲ 3 ಸಾವಿರ ಕೋಟಿ ರೂಪಾಯಿ ಕೊಟ್ಟಿದ್ದಾರೆ. ಈ ಹಣ ಯಾವ ಬ್ಯಾಂಕ್‌ಗೆ ಜಮಾ ಆಗುತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಕೇಂದ್ರ ಸರ್ಕಾರ ರಾಜ್ಯದ ಹಿತ ಕಾಪಾಡುತ್ತಿಲ್ಲ. ಇದು ರಾಜ್ಯಕ್ಕಾದ ದೊಡ್ಡ ಅನ್ಯಾಯ ಇನ್ನೂ ಪರಿಹಾರ ಹಣ ಜಮೆ ಆಗಿಲ್ಲ ಆಗಲೇ ಬಿಜೆಪಿಯವರು ದೊಡ್ಡದಾಗಿ ಹೇಳಿಕೆ ಕೊಡುತ್ತಿದ್ದಾರೆ ರಾಜ್ಯಕ್ಕೆ ಬರಬೇಕಾದ ಹಣ ಪೂರ್ತಿಯಾಗಿ ಬಂದಿಲ್ಲ. ಹೀಗಾಗಿ ಪೂರ್ತಿ ಹಣ ಬಿಡುಗಡೆಗಾಗಿ ಆಗ್ರಹಿಸಿ ನಾಳೆ ನಾವು ಸಚಿವರು ಶಾಸಕರು ಸೇರಿ ಗಾಂಧಿ ಪ್ರತಿಮೆ ಬಳಿ ಮತ್ತೊಮ್ಮೆ ಪ್ರತಿಭಟನೆ ಮಾಡ್ತಿದ್ದೇವೆ ಎಂದರು.

 

ಬರ ಪರಿಹಾರದ ಬಗ್ಗೆ ಅಧಿಕೃತ ಪತ್ರ ಬಂದಿಲ್ಲ, ಕೇಳಿದ್ದಷ್ಟು ಸಿಕ್ಕಿಲ್ಲ: ಸಚಿವ ಕೃಷ್ಣ ಬೈರೇಗೌಡ ಆಕ್ರೋಶ

ಎಚ್‌ಡಿಕೆ ವಿರುದ್ಧ ವಾಗ್ದಾಳಿ:

ಕುಮಾರಸ್ವಾಮಿ ಡಿಕೆಶಿ ನಡುವೆ ನಡೆಯುತ್ತಿರುವ ವಾಕ್ಸಮರ ಇಲ್ಲಿಗೆ ನಿಲ್ಲುವಂತೆ ಕಾಣುತ್ತಿಲ್ಲ. ಸುದ್ದಿಗೋಷ್ಠಿ ವೇಳೆ ಎಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ ಡಿಕೆ ಶಿವಕುಮಾರ, ಕುಮಾರಸ್ವಾಮಿ ಏನೋ ಹೇಳಿದ್ದಾರಂತೆ ಇಷ್ಟು ಬಂದಿರೋದೇ ಸಾಕು ಬಿಡಿ ಅಂತಾ. ನೀನು ಒಬ್ಬ ನಾಡದ್ರೋಹಿ ಎಂದು ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಇನ್ನು ಮತಹಾಕಿದರೆ ಮಾತ್ರ ಮೇಕೆದಾಟು ಯೋಜನೆ ಕೈಹಿಡಿದು ಮಾಡಿಸುತ್ತೇನೆ ಅಂತಾ ಹೇಳಿದ್ದಾರೆ. ಅಂದರೆ ಅಧಿಕಾರ ಸಿಕ್ಕರೆ ಮಾತ್ರನಾ? ಮುಂಚೆಯೇ ಅನುಮತಿ ನೀಡಿಸಬೇಕಿತ್ತು ಅಲ್ವಾ? ಎಂದು ಪ್ರಶ್ನಿಸಿದರು.

click me!