'ಪತ್ರಕರ್ತರು ಸರ್ಕಾರದ ಕಣ್ತೆರೆಸಬೇಕು, ಬದಲಾವಣೆಗೆ ಕಾರಣರಾಗಬೇಕು': ಡಿಕೆ ಶಿವಕುಮಾರ್

By Ravi Janekal  |  First Published Aug 30, 2024, 4:25 PM IST

ಈಗ ಸಿಟಿಜನ್ ಜರ್ನಲಿಸಂ ಚಾಲ್ತಿಗೆ ಬಂದಿದೆ. ಜನರೇ ತಮ್ಮ ಸಮಸ್ಯೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿಕೊಳ್ಳುತ್ತಿದ್ದಾರೆ. ಅದನ್ನೇ ಸುದ್ದಿ ಮಾಡುವ ಕಾಲ ಬಂದಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಹೇಳಿದರು.


ರಾಮನಗರ (ಆ.30): ಈಗ ಸಿಟಿಜನ್ ಜರ್ನಲಿಸಂ ಚಾಲ್ತಿಗೆ ಬಂದಿದೆ. ಜನರೇ ತಮ್ಮ ಸಮಸ್ಯೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿಕೊಳ್ಳುತ್ತಿದ್ದಾರೆ. ಅದನ್ನೇ ಸುದ್ದಿ ಮಾಡುವ ಕಾಲ ಬಂದಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಹೇಳಿದರು.

ರಾಮನಗರದಲ್ಲಿ ಇಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ-2024 ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಡಿಕೆ ಶಿವಕುಮಾರ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಷ್ಟೇ ಪತ್ರಿಕಾರಂಗವೂ ಪ್ರಮುಖವಾಗಿದೆ. ಸ್ವಸ್ಥ ಸಮಾಜ ಕಟ್ಟಲು ದಿನ ಪತ್ರಿಕೆಗಳು ಹಗಲಿರುಳು ಕೆಲಸ ಮಾಡುತ್ತಿವೆ. ರಾಜಕಾರಣ ಮತ್ತು ಪತ್ರಿಕಾ ರಂಗ ಬೇರ್ಪಡಿಸಲು ಸಾಧ್ಯವಿಲ್ಲ. ಪತ್ರಿಕೆ ಇಲ್ಲದೆ ರಾಜಕಾರಣ ನಡೆಯಲ್ಲ. ಸರ್ಕಾರ ನಿರ್ಣಯಗಳನ್ನು ತೆಗೆದುಕೊಂಡರೂ ಅದನ್ನು ಜನರಿಗೆ ಮುಟ್ಟಿಸಲು ಪತ್ರಿಕೆಗಳು ಬೇಕು. ಹಾಗಾಗಿ ಜನ ಸಾಮಾನ್ಯರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಾಮಾಜಿಕ ವರದಿ ಬಿತ್ತರಿಸುವ ಮೂಲಕ ಪತ್ರಿಕೆಗಳು ಸಾಮಾಜಿಕ ಹೊಣೆಗಾರಿಕೆ ನಿರ್ವಹಿಸುತ್ತಿವೆ. ಅಲ್ಲದೆ ಸಮಾಜದ ಬದಲಾವಣೆಯಲ್ಲಿ, ಜ್ಞಾನ ಹೆಚ್ಚಿಸುವಲ್ಲಿ, ಭಾಷೆ ಬೆಳವಣಿಗೆಯಲ್ಲಿ ಪತ್ರಿಕೆಗಳು ಮಹತ್ತರ ಪಾತ್ರವನ್ನು ವಹಿಸುತ್ತವೆ ಎಂದರು.

Latest Videos

undefined

ಬಿಗ್‌ಬಾಸ್‌ ಆಯ್ತು ಇದೀಗ ಟಾಲಿವುಡ್ ನಿಂದ ಶಾಸಕ ಪ್ರದೀಪ್ ಈಶ್ವರ್‌ಗೆ ಬಂದಿದೆಯಂತೆ ಆಫರ್!

ಪತ್ರಕರ್ತರು ವಾಸ್ತವಾಂಶ ಪರಿಶೀಲಿಸಬೇಕು:

ತುಂಗಭದ್ರಾ ಅಣೆಕಟ್ಟೆಯ ಒಂದು ಗೇಟ್ ಕೊಚ್ಚಿಕೊಂಡು ಹೋಯ್ತು. ಅದನ್ನ ನಾವೇ ಮಾಡಿದೆವು ಎಂಬಂತೆ ವಿರೋಧ ಪಕ್ಷದವರು ಬಿಂಬಿಸಿದರು. ಅದಕ್ಕೆ ಕಾರಣ ನಾವಲ್ಲ. ಐದೇ ದಿನದಲ್ಲಿ ಸಮಸ್ಯೆ ಬಗೆಹರಿಸಿದವರು ನಾವು. ಹೀಗಾಗಿ ವಾಸ್ತವಾಂಶ ಪರಿಶೀಲಿಸಿ ಬರೆಯುವುದನ್ನು ಪತ್ರಕರ್ತರು ರೂಢಿಸಿಕೊಳ್ಳಬೇಕು. ಅವರು ಹಾಗೆ ಹೇಳಿದರು, ಇವರು ಹೀಗೆ ಹೇಳಿದ್ರು ಅದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂಬುದನ್ನು ಬಿಟ್ಟು ಅಭಿವೃದ್ಧಿ ವಿಷಯಗಳ ಕಡೆಗೂ ಗಮನ ಹರಿಸಬೇಕು ಎಂದರು.

ರಾಮನಗರಕ್ಕೆ ಕೊಡುಗೆ ಏನು?

ರಾಮನಗರ ಜಿಲ್ಲೆ ಮೂವರು ಮುಖ್ಯಮಂತ್ರಿಗಳನ್ನು ಕೊಟ್ಟಿದೆ. ಆದರೆ ಅವರು ಹೋಗುವಾಗ ತಮ್ಮದೊಂದು ಸಾಕ್ಷ್ಯ, ಗುರುತು ಬಿಟ್ಟುಹೋಗಿದ್ದಾರೆ.  ಕೆಂಗಲ್ ಅವರು ವಿಧಾನಸೌಧ ಬಿಟ್ಟು ಹೋದರು. ದೇವೇಗೌಡ ಮತ್ತು ಕುಮಾರಸ್ವಾಮಿ ಏನು ಬಿಟ್ಟುಹೋದರು? ಈಗ ಅವರು ನಮ್ಮ ಜಿಲ್ಲೆಯನ್ನು ಬಿಟ್ಟು ಮಂಡ್ಯಕ್ಕೆ ಹೋಗಿದ್ದಾರೆ. ನಮ್ಮ ಜಿಲ್ಲೆಯನ್ನ ನಾವೇ ಅಭಿವೃದ್ಧಿ ಮಾಡ್ತೇವೆ. ಸಾಧಿಸುವ ಛಲ ಇದ್ದವರ ಬಳಿಗೆ ಸೋಲು ಸುಳಿಯುವುದಿಲ್ಲ. ನಿಮ್ಮ ಬರೆವಣಿಗೆಯಿಂದ, ತನಿಖೆಯಿಂದ ಸರ್ಕಾರದ ಕಣ್ತೆರೆಸಿ, ಬದಲಾವಣೆಗೆ ಕಾರಣರಾಗಬೇಕು. ಆ ನಿಟ್ಟಿನಲ್ಲಿ ಪತ್ರಕರ್ತರು ಕಾರ್ಯಪ್ರವೃತ್ತರಾಗಬೇಕು. ಸರ್ಕಾರವನ್ನು ತಿದ್ದುವ ಕೆಲಸ ಮಾಡಬೇಕು ಎಂದರು. ಸಾಧಿಸುವ ಛಲ ಇದ್ದವರ ಬಳಿಗೆ ಸೋಲು ಸುಳಿಯುವು. ಆತ್ಮಸಾಕ್ಷಿಗೆ ವಂಚನೆ ಮಾಡಿಕೊಳ್ಳದಂತೆ ಪತ್ರಿಕಾ ಧರ್ಮ ಮೆರೆಯಬೇಕು ಎಂದರು.

ಸಿಎಂ ಸಿದ್ದರಾಮಯ್ಯರನ್ನ ಕಂಡ್ರೆ ಬಿಜೆಪಿಯವರಿಗೆ ಭಯ : ಶಾಸಕ ಪ್ರದೀಪ್ ಈಶ್ವರ್

ನನ್ನ ಮೇಲಿನ ಆರೋಪದಲ್ಲಿ ಹುರುಳಿಲ್ಲ.

ನಾನು ತಿಹಾರ್ ಜೈಲಿನಲ್ಲಿದ್ದಾಗ ಪುಸ್ತಕಗಳನ್ನು ಓದಿಕೊಂಡು ಕುಳಿತಿದ್ದೆ. ನನ್ನ ಮೇಲಿನ ಆರೋಪಗಳಲ್ಲಿ ಹುರುಳಿಲ್ಲ ಎಂದು ಹೇಳಿ ಅಲ್ಲಿಂದ ಬಿಡುಗಡೆ ಮಾಡಿದರು. ನನ್ನ ಬದುಕಿನಲ್ಲಿ ಎಲ್ಲವನ್ನೂ ಎದುರಿಸಿದ್ದೇನೆ. ನಾನು ಯಾವತ್ತೂ ಆತ್ಮ ವಿಶ್ವಾಸ ಕಳೆದುಕೊಂಡವನಲ್ಲ. ಕಳೆದುಕೊಳ್ಳುವುದಿಲ್ಲ.  ಹಾಗೆ ನಾನು ಕೊಟ್ಟ ಮಾತು ಉಳಿಸಿಕೊಳ್ಳುವವನು. ಹಿಟ್ ಅಂಡ್ ರನ್ ಮಾಡುವವನಲ್ಲ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿಗೆ ಟಾಂಗ್ ನೀಡಿದರು. 

click me!