
ಉಡುಪಿ (ಜೂ.9): ಡೀಸೆಲ್ ದರ ಏರಿಕೆ(Diesel price hike) ಹಾಗೂ ನಿರ್ವಹಣಾ ವೆಚ್ಚಗಳು ಹೆಚ್ಚಾಗಿರುವುದರಿಂದ ರಾಜ್ಯಾದ್ಯಂತ ಚಾಲನೆಯಲ್ಲಿರುವ ಎಲ್ಲಾ ಖಾಸಗಿ ಮಜಲು ವಾಹನ (ಡೇ ಸರ್ವಿಸ್) ಬಸ್‌ಗಳ ಪ್ರಯಾಣ ದರವನ್ನು ಶೇ.3 ರಿಂದ 8ರವರೆಗೆ ಪರಿಷ್ಕರಿಸಿ ಮಂಗಳವಾರದಿಂದ (ಜೂ.9) ಹೊಸ ದರ ಜಾರಿಗೆ ತರಲಾಗುತ್ತಿದೆ ಎಂದು ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್(Kuiladi Suresh Nayak) ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ 5300 ಬಸ್ಗಳು ಒಕ್ಕೂಟದ ವ್ಯಾಪ್ತಿಯಲ್ಲಿದ್ದು, ರಾಜ್ಯ ಸರ್ಕಾರ ಒಂದು ವರ್ಷದ ಹಿಂದೆ 3 ರು. ಹಾಗೂ ಕೇಂದ್ರ ಸರ್ಕಾರ 4 ಬಾರಿ 8.17 ರು. ಡೀಸೆಲ್ ದರ ಏರಿಕೆ ಮಾಡಿದೆ. ವಾಹನದ ಬಿಡಿ ಭಾಗಗಳ ದರ, ಟೈರ್,ಟೈರ್ ರಿಸೋಲಿಂಗ್ ದರ, ಟೋಲ್ ದರ, ನೌಕರರ ವೇತನ, ಸರ್ಕಾರದ ತೆರಿಗೆ ಸಹಿತ ದೈನಂದಿನ ವೆಚ್ಚಗಳಲ್ಲಿ ತೀವ್ರ ಏರಿಕೆಯಾಗಿರುವುದರಿಂದ ಬಸ್ ಟಿಕೆಟ್ ದರ ಹೆಚ್ಚಿಸಲು ಅನಿವಾರ್ಯವಾಗಿ ನಿರ್ಧರಿಸಲಾಗಿದೆ ಎಂದರು. ಶಾಲಾ ವಿದ್ಯಾರ್ಥಿಗಳಿಗೆ ಮುಂಚಿತವಾಗಿ ಸಿಗುತ್ತಿದ್ದ ರಿಯಾಯಿತಿ ಮುಂದುವರಿಯಲಿದೆ ಎಂದು ಮಾಹಿತಿ ನೀಡಿದರು.
ರಾಜ್ಯ ಸರ್ಕಾರದ ಅಧಿಸೂಚನೆ ಪ್ರಕಾರ ಪ್ರತಿ ಪ್ರಯಾಣಿಕರಿಗೆ 4 ಪೈಸೆಯಂತೆ ಪ್ರತಿ ಕಿ.ಮೀ.ಗೆ ಕನಿಷ್ಟ 0.25 ಪೈಸೆಯವರೆಗೆ ಸೆಸ್ ಹಾಕಲು ಅವಕಾಶವಿದ್ದು, ಹಾಲಿ ದರದ ಮೇಲೆ ಶೇ.3ರಿಂದ 8ರವರೆಗೆ ದರ ಪರಿಷ್ಕರಣೆ ಮಾಡಲಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ