ಕೋವಿಡ್ ಹೆಚ್ಚಳ, ಆರೋಗ್ಯ ಇಲಾಖೆ ಸಿಬ್ಬಂದಿ ರಜೆ ಕ್ಯಾನ್ಸಲ್; ಸಚಿವ ದಿನೇಶ್ ಗುಂಡೂರಾವ್

Published : May 26, 2025, 07:40 PM IST
Covid 19 Dinesh Gundu rao

ಸಾರಾಂಶ

ರಾಜ್ಯದಲ್ಲಿ ಕೋವಿಡ್-19 ರೂಪಾಂತರಿ ಒಮಿಕ್ರಾನ್ ಹರಡುವಿಕೆ ಬಗ್ಗೆ ತಜ್ಞರೊಂದಿಗೆ ಚರ್ಚಿಸಲಾಗಿದೆ. ಗರ್ಭಿಣಿಯರು, ವೃದ್ಧರು ಮತ್ತು ಉಸಿರಾಟದ ಸಮಸ್ಯೆ ಇರುವವರು ಮಾಸ್ಕ್ ಧರಿಸುವುದು ಕಡ್ಡಾಯ. ಸದ್ಯಕ್ಕೆ ಉಳಿದವರಿಗೆ ಮಾಸ್ಕ್ ಕಡ್ಡಾಯವಿಲ್ಲ.

ಬೆಂಗಳೂರು (ಮೇ 26): ರಾಜ್ಯದಲ್ಲಿ ಕೋವಿಡ್-19 ರೂಪಾಂತರಿ ತಳಿ ಒಮಿಕ್ರಾನ್‌ ವೈರಸ್ ಹರಡುವಿಕೆ ಹಾಗೂ ತೀವ್ರತೆಯ ವಸ್ತುಸ್ಥಿತಿಯ ಬಗ್ಗೆ ತಜ್ಞರಿಂದ ಚರ್ಚೆ ಮಾಡಿದ್ದೇವೆ. ಸದ್ಯಕ್ಕೆ ಗರ್ಭಿಣಿಯರು, ವೃದ್ಧರು, ಉಸಿರಾಟ ಸಮಸ್ಯೆ ಉದ್ದವರು ಮಾಸ್ಕ್ ಧರಿಸಿದರೆ ಸಾಕು. ಉಳಿದ ಜನಸಾಮಾನ್ಯರಿಗೆ ಮಾಸ್ಕ್ ಕಡ್ಡಾಯವಿಲ್ಲ. ಸೋಂಕಿತರ ಸಂಖ್ಯೆ ಹೆಚ್ಚಾದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ರಜೆ ಕೊಡಲಾಗುವುದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಕೋವಿಡ್ ವಸ್ತುಸ್ಥಿತಿ ಏನಿದೆ ಎಂಬುದರ ಬಗ್ಗೆ ತಜ್ಞರ ಸಲಹಾ ಸಮಿತಿಯೊಂದಿಗೆ ಚರ್ಚೆ ಮಾಡಿದ್ದೇವೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಯಾವೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ. ಸದ್ಯಕ್ಕೆ ಲಸಿಕೆ ತೆಗೆದುಕೊಳ್ಳಲು ಯಾವುದೇ ಮಾರ್ಗಸೂಚಿಗಳಿಲ್ಲ. ಲಸಿಕೆ ಬಗ್ಗೆ ಕೇಂದ್ರ ಸರ್ಕಾರ ಸೂಚನೆ ನೀಡಬೇಕು. ಶಾಲಾ ಮಕ್ಕಳಿಗೆ ಜ್ವರ ನೆಗಡಿ ಕಂಡು ಬಂದರೆ ರಜೆ ನೀಡಲು ಸೂಚನೆ. ಟೆಸ್ಟ್ ಬಗ್ಗೆ ಹಿಂದಿನ ಮಾರ್ಗ ಸೂಚಿಗಳನ್ನು ಅನುಸರಿಸುತ್ತೇವೆ. ಗರ್ಭಿಣಿ, ವಯಸ್ಸಾದವರು ಮಾಸ್ಕ್ ಧರಿಸುವುದು ಉತ್ತಮ. ಕೋವಿಡ್ ಟೆಸ್ಟ್‌ ಗಳಿಗೆ ಬೇಕಾದ ವ್ಯವಸ್ಥೆ ಗಳನ್ನು ಸಹಾ ನಾವು ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

ಪ್ರತಿನಿತ್ಯ ಕೋವಿಡ್ ಸೋಂಕು ಏರಿಕೆ ಬಗ್ಗೆ ಬಗ್ಗೆ ಗಮನ ಇಟ್ಟಿರಿ, ಕೇಂದ್ರದ ಜೊತೆ ಸಂಪರ್ಕ ದಲ್ಲಿ ಇರಿ ಅಂತಾ ಸಿಎಂ ಸೂಚನೆ ಕೊಟ್ಟಿದ್ದಾರೆ. ಇನ್ನು ಆರೋಗ್ಯ ಸಿಬ್ಬಂದಿ, ಡಾಕ್ಟರ್‌ಗಳು ಯಾರೂ ರಜೆ ಮೇಲೆ ಹೋಗಬಾರದು ಅಂತಾ ಸೂಚನೆ ಕೊಟ್ಟಿದ್ದೇವೆ. ರಾಜ್ಯದಲ್ಲಿ ಕೋವಿಡ್ ಟೆಸ್ಟಿಂಗ್ ಕಿಟ್ ರೆಡಿ ಮಾಡಿಕೊಂಡಿದ್ದೇವೆ. ಮುಂದೆ ಕೇಸ್ ಹೆಚ್ಚಾದರೆ ಅದಕ್ಕೂ ತಯಾರಿ ಇದೆ. ವಿದೇಶದಿಂದ ಬರುವವರ ಸ್ಕ್ರೀನಿಂಗ್ ಮಾಡಲು ಸೂಚಿಸಿದ್ದೇವೆ‌. ಆದರೆ ಅವರಿಗೆ ಸ್ಕ್ರೀನಿಂಗ್ ಮಾಡಿಸಿಕೊಳ್ಳುವುದಕ್ಕೆ ಸದ್ಯಕ್ಕೆ ಕಡ್ಡಾಯ ಎಂದು ತಿಳಿಸಿಲ್ಲ. ಪ್ರತಿ ಎರಡು ಮೂರು ದಿನಗಳಿಗೊಮ್ಮೆ ತಜ್ಞರ ಜೊತೆ ಸಂಪರ್ಕ ದಲ್ಲಿ ಇರಲು ಸಿಎಂ ಸಿದ್ದರಾಮಯ್ಯ ಅವರು ಸೂಚನೆ ಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಹಿಂದಿನಂತೆ ಕೋವಿಡ್ ಪರೀಕ್ಷೆಯಲ್ಲಿ ರೆಮಿಡೆಸಿವಿರ್, RTPCR ಪ್ರಕ್ಯೂರ್ ಮಾಡ್ತಿದ್ದೇವೆ. ಯಾರಿಗೂ ಕಡ್ಡಾಯವಾಗಿ ಟೆಸ್ಟಿಂಗ್ ಇಲ್ಲ. ಯಾರಿಗೆ ತೀವ್ರ ಅನಾರೋಗ್ಯ ಇರುತ್ತದೆಯೋ ಅವರು ಟೆಸ್ಟಿಂಗ್ ಮಾಡಿಸಿಕೊಳ್ಳಬೇಕು. ಇದು ಕೋವಿಡ್-19 ರೂಪಾಂತರಿ ಹಳೆಯ ಓಮಿಕ್ರಾನ್ ತಳಿ ಆಗಿರುವುದರಿಂದ ಇದರ ದುಷ್ಪರಿಣಾಮ ಹೆಚ್ಚಾಗಿ ಬೀರುವುದಿಲ್ಲ. ಇದೀಗ ಸೋಂಕು ಹರಡುತ್ತಿದ್ದು, ಮುಂದಿನ ದಿನಗಳಲ್ಲಿ ಪರಿಣಾಮವನ್ನು ಕಾದು ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ವಿದೇಶದ ದಿಂದ ಬಂದವರಿಗೆ ಕಡ್ಡಾಯ ಟೆಸ್ಟಿಂಗ್ ಇಲ್ಲ ಎಂದು ತಿಳಿಸಿದರು.

ಕೇಂದ್ರದ ಅಧಿಕಾರಿಗಳ ಜೊತೆ ನಮ್ಮ ಅಧಿಕಾರಿಗಳು ಸಂಪರ್ಕದಲ್ಲಿ ಇದಾರೆ. ಅವರು ಎಲ್ಲಾ ಚರ್ಚೆ ಮಾಡುತ್ತಿದ್ದು, ಕೇಂದ್ರ ಆರೋಗ್ಯ ಇಲಾಖೆಗೂ ನಿರಂತರವಾಗಿ ವರದಿಗಳನ್ನು ಸಲ್ಲಿಕೆ ಮಾಡುತ್ತಾರೆ. ಇದೀಗ ರಾಜ್ಯದಲ್ಲಿ ಆಕ್ಸಿಜನ್, ವೆಂಟಿಲೇಟರ್, ಬೆಡ್ಎಲ್ಲಾ ಇದೆ. ಒಂದು ವೇಳೆ ಕೋವಿಡ್-19 ಸೋಂಕು ಉಲ್ಬಣಗೊಂಡರೆ ಯಾವ ರೀತಿ ನೋಡಿಕೊಳ್ಳಬೇಕು ಅಂತ ಗೊತ್ತಿದೆ. ಹಾಗಾಗಿ ಮುನ್ನೆಚ್ಚರಿಕೆ ಬಿಟ್ಟು ಯಾವುದೇ ಕ್ರಮ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಕೆಮ್ಮು, ನೆಗಡಿ, ಜ್ವರ ಇದ್ದವರು ಕೋವಿಡ್ ಪರೀಕ್ಷೆ ಮಾಡಿಸಿ:
ಕೋವಿಡ್ ಪ್ರಕರಣ ಗಳು ಹೆಚ್ಚಾಗುತ್ತಿರುವ ಹಿನ್ನಲೆ ಇಂದು ಸಭೆ ಮಾಡಿದ್ದೇವೆ. ಗರ್ಭಿಣಿ ಯರು ಮಾಸ್ಕ ಧರಿಸಬೇಕು. ಜನನಿಬಿಡ ಪ್ರದೇಶದಲ್ಲಿ ಎಚ್ಚರಿಕೆಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜನರು ಆತಂಕ ಪಡುವ ಅಗತ್ಯ ಇಲ್ಲ. ಮಾಸ್ಕ್ ಕಡ್ಡಾಯ ಎಂಬ ವಿಚಾರ ಸದ್ಯಕ್ಕೆ ಚರ್ಚೆ ಮಾಡಿಲ್ಲ. ಟೆಸ್ಟಿಂಗ್ ಗೆ ನಾವು ವ್ಯವಸ್ಥೆ ಮಾಡಿಕೊಂಡಿದ್ದೇವೆ. ಸದ್ಯಕ್ಕೆ ಮಾಸ್ ಟೆಸ್ಟಿಂಗ್ ಮಾಡಿಸಲ್ಲ. ಯಾರಿಗೆ ಕೆಮ್ಮು, ನೆಗಡಿ ಜ್ವರ ಇರುತ್ತೋ ಅವರು ಟೆಸ್ಟ್ ಮಾಡಿಸಿ.
- ಶರಣ ಪ್ರಕಾಶ್ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌