10 ಸಾವಿರ ಗಡಿ ದಾಟಿದ ಕೊರೋನಾ| ನಿನ್ನೆ 397 ಮಂದಿಗೆ ಕೊರೋನಾ| ಬೆಂಗಳೂರಲ್ಲಿ ಅತ್ಯಧಿಕ 173 ಮಂದಿಗೆ ವೈರಸ್| ಸೋಂಕಿತರಲ್ಲಿ ವಿಷಮ ಶೀತ ಜ್ವರ ಬಾಧಿತರೇ ಅಧಿಕ| ಹೊರರಾಜ್ಯದವರಿಗಿಂತ ಸ್ಥಳೀಯ ಸೋಂಕಿತರೇ ಹೆಚ್ಚು| 146 ಮಂದಿ ಡಿಸ್‌ಚಾಜ್‌ರ್. ಗುಣಮುಖರ ಸಂಖ್ಯೆ 6151ಕ್ಕೇರಿಕೆ| ಸಕ್ರಿಯ ಸೋಂಕಿತರ ಸಂಖ್ಯೆ 3799
ಬೆಂಗಳೂರು(ಜೂ.25): ರಾಜ್ಯದಲ್ಲಿ ಬುಧವಾರ ಹೊಸದಾಗಿ 397 ಕೊರೋನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 10,118ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ವಿಷಮ ಶೀತ ಜ್ವರದ (ಐಎಲ್‌ಐ) ಹಿನ್ನೆಲೆಯಿಂದ ಆಸ್ಪತ್ರೆಗೆ ದಾಖಲಾದವರಿಗೆ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ದೃಢಪಡುತ್ತಿದೆ. ಬುಧವಾರದ ಪ್ರಕರಣಗಳ ಪೈಕಿ ಐಎಲ್‌ಐ ಸಮಸ್ಯೆಯುಳ್ಳ 96 ಜನರು ಸೋಂಕು ದೃಢಪಟ್ಟಿದೆ. ಈ ಪೈಕಿ ಬೆಂಗಳೂರಿನಲ್ಲಿ 68 ಮಂದಿ, ದಕ್ಷಿಣ ಕನ್ನಡ 7, ಕೊಪ್ಪಳ, ಬಳ್ಳಾರಿ, ರಾಮನಗರ ತಲಾ 5, ಶಿವಮೊಗ್ಗ 3, ವಿಜಯಪುರ 2, ಧಾರವಾಡದಲ್ಲಿ ಒಬ್ಬರು ಐಎಲ್‌ಐ ಹಿನ್ನೆಲೆಯುಳ್ಳವರಾಗಿದ್ದಾರೆ.
ಕೊರೋನಾ ವಿರುದ್ಧ ಹೋರಾಟಕ್ಕೆ ಮತ್ತೊಂದು ಅಸ್ತ್ರ ಪ್ರಯೋಗಿಸಲು ಮುಂದಾದ ರಾಜ್ಯ ಸರ್ಕಾರ
ಬೆಂಗಳೂರು ನಗರ ಸತತ ಸತತ ನಾಲ್ಕನೇ ದಿನವೂ ಸೋಂಕಿತರ ಸಂಖ್ಯೆ ಶತಕ ಮೀರಿದ್ದು, 173 ಮಂದಿಗೆ ಸೋಂಕು ದೃಢಪಟ್ಟಿದೆ. ಉಳಿದಂತೆ ಬಳ್ಳಾರಿಯಲ್ಲಿ 34 ಜನರಿಗೆ, ಕಲಬುರಗಿ ಮತ್ತು ರಾಮನಗರದಲ್ಲಿ ತಲಾ 22, ಉಡುಪಿ 14, ರಾಮನಗರ 13, ದಕ್ಷಿಣ ಕನ್ನಡ 12, ಕೊಪ್ಪಳ 11, ರಾಯಚೂರು, ಉತ್ತರ ಕನ್ನಡ ತಲಾ 9, ದಾವಣಗೆರೆ, ಚಿಕ್ಕಬಳ್ಳಾಪುರ ತಲಾ 8, ಮೈಸೂರು, ಬೆಂಗಳೂರು ಗ್ರಾಮಾಂತರ ತಲಾ 7, ಗದಗ, ಕೋಲಾರ ತಲಾ 6, ಬೀದರ್ 5, ವಿಜಯಪುರ 4, ಶಿವಮೊಗ್ಗ 3, ಮಂಡ್ಯ, ಚಿತ್ರದುರ್ಗ, ಚಾಮರಾಜನಗರ, ಕೊಡಗು ತಲಾ 2, ಬೆಳಗಾವಿ ಮತ್ತು ಹಾಸನ, ತುಮಕೂರಿನಲ್ಲಿ ತಲಾ ಒಂದೊಂದು ಪ್ರಕರಣಗಳು ದೃಢಪಟ್ಟಿವೆ.
ಕರ್ನಾಟಕದ ರಾಜಕೀಯ ಗೆಸ್ಟ್ ಹೌಸ್, ಇದೀಗ ಕೋವಿಡ್ ಕೇರ್ ಸೆಂಟರ್.....!
ಬುಧವಾರ ಪ್ರಕರಣಗಳಲ್ಲಿ 75 ಮಂದಿ ಹೊರ ರಾಜ್ಯಗಳಿಂದ, 8 ಜನ ವಿದೇಶದಿಂದ ಬಂದವರಾಗಿದ್ದು, ಉಳಿದ 314 ಜನರಿಗೆ ಸೋಂಕಿತರ ಸಂಪರ್ಕ, ಕಂಟೈನ್ಮೆಂಟ್ ಪ್ರದೇಶ, ಉಸಿರಾಟ ತೊಂದರೆ, ಐಎಲ್‌ಐ ಮತ್ತಿತರ ಕಾರಣಗಳಿಂದ ಸ್ಥಳೀಯವಾಗಿಯೇ ಸೋಂಕು ತಗುಲಿದೆ.
146 ಮಂದಿ ಬಿಡುಗಡೆ:
ಸೋಂಕಿನಿಂದ ಗುಣಮುಖರಾದ 146 ಮಂದಿಯನ್ನು ಬುಧವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದರೊಂದ ರಾಜ್ಯದ ಒಟ್ಟು 10,118 ಸೋಂಕಿತರಲ್ಲಿ 6151 ಜನರು ಗುಣಮುಖರಾದಂತಾಗಿದೆ. ಉಳಿದವರಲ್ಲಿ 112 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಸೇರಿ 3799 ಮಂದಿ ಸಕ್ರಿಯ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಾಲ್ವರು ಅನ್ಯಕಾರಣದ ಮೃತರೂ ಸೇರಿ 168 ಜನ ಮೃತಪಟ್ಟಿದ್ದಾರೆ.