ಮೋದಿ ಸಭೆ ಬಳಿಕ ಯಡಿಯೂರಪ್ಪ ಪ್ರತಿಕ್ರಿಯೆ; ರಾಜ್ಯದಲ್ಲಿ ಲಸಿಕೆ ಬಳಕೆ ಮಾಹಿತಿ ನೀಡಿದ CM

Published : Jan 11, 2021, 06:05 PM ISTUpdated : Jan 11, 2021, 06:22 PM IST
ಮೋದಿ ಸಭೆ ಬಳಿಕ ಯಡಿಯೂರಪ್ಪ ಪ್ರತಿಕ್ರಿಯೆ; ರಾಜ್ಯದಲ್ಲಿ ಲಸಿಕೆ ಬಳಕೆ ಮಾಹಿತಿ ನೀಡಿದ CM

ಸಾರಾಂಶ

ಕೊರೋನಾ ಲಸಿಕೆ ವಿತರಣೆ, ತೆಗೆದುಕೊಳ್ಳಬೇಕಾದ ಕ್ರಮ ಸೇರಿದಂತೆ ಹಲವು ವಿಚಾರಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪಾಲ್ಗೊಂಡು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇದೀಗ ರಾಜ್ಯದಲ್ಲಿನ ಲಸಿಕೆ ಬಳಕೆ ಹಾಗೂ ವಿತರಣೆ ಕುರಿತು ಮಾಹಿತಿ ನೀಡಿದ್ದಾರೆ.

ಬೆಂಗಳೂರು(ಜ.11):  ಕೊರೋನಾ ಲಸಿಕೆ ಹಂಚಿಕೆ ಹಾಗೂ ನೀಡುವಿಕೆ ಕುರಿತು ಪ್ರದಾನಿ ನರೇಂದ್ರ ಮೋದಿ ಎಲ್ಲಾ ಮುಖ್ಯಮಂತ್ರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಪಾಲ್ಗೊಂಡಿದ್ದರು.  ರಾಜ್ಯದಲ್ಲಿ ತಯಾರಿ ಹಾಗೂ ಹಂಚಿಕೆ ಕುರಿತು ಮಾಹಿತಿ ಪಡೆದುಕೊಂಡ ಮೋದಿ ಕೆಲ ಸೂಚನೆಗಳನ್ನು ನೀಡಿದ್ದಾರೆ. ಈ ಕುರಿತು ಯಡಿಯೂರಪ್ಪ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಮುಖ್ಯಮಂತ್ರಿಗಳ ಜೊತೆ ಮೋದಿ ಸಭೆ; ಉಚಿತ ಲಸಿಕೆ ಜೊತೆಗೆ ವಿಶೇಷ ಮನವಿ ಮಾಡಿದ ಪ್ರಧಾನಿ!.

ಮೊದಲ ಹಂತದಲ್ಲಿ ದೇಶದಲ್ಲಿನ 3 ಕೋಟಿ ಹೆಲ್ತ್ ವರ್ಕಸ್‌ಗೆ ಲಸಿಕೆ ನೀಡಲಾಗುವುದು. ಇದರಲ್ಲಿ ರಾಜ್ಯದಲ್ಲಿ 16 ವಾಕ್ಸಿನೇಷನ್ ನೀಡಲಾಗುವುದು ಎಂದು ಯಡಿಯೂರಪ್ಪ ಹೇಳಿದ್ದಾರೆ.  ರಾಜ್ಯದಲ್ಲೂ 16 ರಿಂದ ಲಸಿಕೆ ನೀಡುವಿಕೆ ಆರಂಭಗೊಳ್ಳಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಕರ್ನಾಟಕದ 235 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು. ಈಗಾಗಲೇ ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ. ಲಸಿಕೆ ಶೇಖರಣೆಗೆ ಕೋಲ್ಡ್ ಸ್ಟೋರೇಜ್, ಹಂಚಿಕೆ, ವಿತರಣೆ, ನೀಡುವಿಕೆ ಸೇರಿದಂತೆ ಎಲ್ಲಾ ಹಂತದಲ್ಲೂ ನಿಗಾವಹಿಸಲಾಗುವುದು. ಹಂತ ಹಂತವಾಗಿ ಕೊರೋನಾ ಲಸಿಕೆ ಜನರಿಗೆ ಸಿಗಲಿದೆ. ಹೀಗಾಗಿ ಎಲ್ಲರೂ ಸಹಕರಿಸಬೇಕು ಎಂದು ಯಡಿಯೂರಪ್ಪ ಮನವಿ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!