ಚೀನಾದಿಂದ ಹೊರಬರುತ್ತಿರುವ ಕಂಪನಿ ಸೆಳೆಯಲು ಕರ್ನಾಟಕ ಸರ್ಕಾರದ ಹೊಸ ಸ್ಕೀಮ್!

Suvarna News   | Asianet News
Published : May 11, 2020, 05:53 PM IST
ಚೀನಾದಿಂದ ಹೊರಬರುತ್ತಿರುವ ಕಂಪನಿ ಸೆಳೆಯಲು ಕರ್ನಾಟಕ ಸರ್ಕಾರದ ಹೊಸ ಸ್ಕೀಮ್!

ಸಾರಾಂಶ

ಚೀನಾದ ವುಹಾನ್‌ನಲ್ಲಿ ಮರಣ ಮೃದಂಗ ಬಾರಿಸಿದ ಕೊರೋನಾ ವೈರಸ್ ಇದೀಗ ವಿಶ್ವದೆಲ್ಲೆಡೆ ಹಬ್ಬಿದೆ. ಚೀನಾ ವಿರುದ್ಧ ಅಮೆರಿಕಾ ಸೇರಿದಂತೆ ಹಲವು ದೇಶಗಳು ಕೆಂಡ ಕಾರುತ್ತಿದೆ. ಇಷ್ಟೇ ಅಲ್ಲ ಚೀನಾ ವಸ್ತುಗಳ ಖರೀದಿಯನ್ನೂ ಬಹಿಷ್ಕರಿಸಿದೆ. ಇದೀಗ ಚೀನಾದಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳು ಚೀನಾದಿಂದ ಹೊರಬರಲು ಸಜ್ಜಾಗಿದೆ. ಈ ಕಂಪನಿಗಳನ್ನು ಸೆಳೆಯಲು ಕರ್ನಾಟಕ ಸರ್ಕಾರ ಕ್ರಮ ಕೈಗೊಂಡಿದೆ.

ಬೆಂಗಳೂರು(ಮೇ.11): ಕೊರೋನಾ ವೈರಸ್ ವಕ್ಕರಿಸಿದ ಮೇಲೆ  ಚೀನಾಗಿಂತ ಇತರ ದೇಶಗಳು ಹೆಚ್ಚು ನಲುಗಿದೆ. ಚೀನಾದಲ್ಲಿ ವ್ಯಾಪಾರ ವಹಿವಾಟು ಆರಂಭವಾಗಿದೆ. ಆದರೆ ಇತರ ದೇಶಗಳಲ್ಲಿ ಸಂಪೂರ್ಣ ಸ್ಥಗಿತಗೊಂಡಿದೆ. ಚೀನಾ ಒಂದೇ ಉಸಿರಿನಲ್ಲಿ ಎಲ್ಲರನ್ನೂ ಹಿಂದಿಕ್ಕ ಮೇಲೆರುವ ಸೂಚನೆ ನೀಡಿತ್ತು. ಆದರೆ ಇದೀಗ ಚೀನಾದಿಂದ ಹಲವು ಬಹುರಾಷ್ಟ್ರೀಯ ಕಂಪನಿಗಳ ಸ್ಥಳಾಂತರಕ್ಕೆ ಮುಂದಾಗಿದೆ.

ಕೊರೋನಾ ಹರಡಿದ ಚೀನಾಗೆ ಬಿಗ್ ಶಾಕ್, Apple ಕಂಪನಿ ಭಾರತಕ್ಕೆ ಶಿಫ್ಟ್!

ಉದ್ಯೋಗಿಗಳ ಕೊರತೆ, ಲಾಕ್‌ಡೌನ್ ಸೇರಿದಂತೆ ಹಲವು ನಿಯಮಗಳಿಂದ ಚೀನಾದಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳು ಇದೀಗ ಭಾರತ ಸೇರಿದಂತೆ ಏಷ್ಯಾದತ್ತ ಮುಖಮಾಡಿದೆ. ಈ ರೀತಿ ಚೀನಾದಿಂದ ಹೊರಬರಲು ನಿರ್ಧರಿಸಿರುವ ಕಂಪನಿಗಳನ್ನು ಸೆಳೆಯಲು ಕರ್ನಾಟಕ ಸರ್ಕಾರ ಕ್ರಮ ಕೈಗೊಂಡಿದೆ. ವಿಶೇಷ ಇನ್ವೆಸ್ಟ್‌ಮೆಂಟ್ ಟಾಸ್ಕ್ ಫೋರ್ಸ್ ತಂಡ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಮೇ 17ಕ್ಕೆ ಲಾಕ್‌ಡೌನ್ ಮುಗಿದ ಬಳಿಕ ಮೋದಿ ಮಾಸ್ಟರ್ ಪ್ಲಾನ್ ಏನು..?

ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರ ಮಾರ್ಗದರ್ಶನದಲ್ಲಿ ಸ್ಪೆಷಲ್ ಇನ್ವೆಸ್ಟ್ ಮೆಂಟ್ ಟಾಸ್ಕ್ ಫೋರ್ಸ್ ರಚನೆಯಾಗಿದೆ. ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಈ ತಂಡ, ಚೀನಾದಿಂದ ಹೊರಬರಲು ನಿರ್ಧರಿಸುವ ಕಂಪನಿಗಳ ಜೊತೆ ಮಾತುಕತೆ ನಡೆಸಲಿದೆ. ಇಷ್ಟೇ ಅಲ್ಲ ಕಂಪನಿಗಳಿಗೆ ಬೇಕಾದ ಮೂಲಭೂತ ಸೌಲಭ್ಯ ಸೇರಿದಂತೆ ಹಲವು ಸೌಕರ್ಯಗಳನ್ನು ಒದಗಿಸಲಿದೆ. 

ರಾಜ್ಯದ ವಿವಿಧೆಡೆ ಹೂಡಿಕೆ ಮಾಡಲು ಚೀನಾ ಕಂಪನಿಗಳಿಗೆ ಅವಕಾಶ ನೀಡುವ  ಟಾಸ್ಕ್ ಪೋರ್ಸ್ ತಂಡ ತೀರ್ಮಾನ ಮಾಡಲಿದೆ. ವಿಶೇಷ ಟಾಸ್ಕ್ ಫೋರ್ಸ್ ತಂಡ ಗರಿಷ್ಠ ಕಂಪನಿಗಳನ್ನು ಸೆಳೆಯುವ ಪ್ರಯತ್ನದಲ್ಲಿದೆ. ಈ ಮೂಲಕ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಯ ಬಹುದೊಡ್ಡ ಪ್ಲಾನ್ ಮಾಡಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ