
ಬಾಗಲಕೋಟೆ (ಜು.17): ರಾಜ್ಯದಲ್ಲಿ ಅಧಿಕಾರಿ ಹಂಚಿಕೆ ಕುರಿತು ಒಡಂಬಡಿಕೆ ಆಗಿದ್ದರೆ ಹೈಕಮಾಂಡ್ ಡಿ.ಕೆ.ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಲಿ ಎಂದು ಶ್ರೀಶೈಲ ಪೀಠದ ಜಗದ್ಗುರು ಪಂಡಿತಾರಾಧ್ಯ ಚನ್ನಸಿದ್ಧರಾಮ ಶ್ರೀಗಳು ಹೇಳಿದ್ದಾರೆ. ಈ ಮೂಲಕ ಸರ್ಕಾರದ ರಚನೆ ವೇಳೆ ಸಿಎಂ ಸ್ಥಾನ ಕುರಿತು ಒಡಂಬಡಿಕೆ ಆಗಿದ್ದರೆ ಹೈಕಮಾಂಡ್ ಅದನ್ನು ನೆರವೇರಿಸಲಿ ಎಂದು ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಅಮೀನಗಡದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರಿಗಳು, ‘ಸರ್ಕಾರ ರಚನೆ ಸಂದರ್ಭದಲ್ಲಿ ಏನು ಒಡಂಬಡಿಕೆ ಆಗಿತ್ತು ಎನ್ನುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಒಡಂಬಡಿಕೆ ಬಗ್ಗೆ ಗೊತ್ತಿಲ್ಲದೆ ಈ ಸಂದರ್ಭದಲ್ಲಿ ಮಾತನಾಡುವುದು ಸೂಕ್ತ ಅಲ್ಲ. ಒಂದು ವೇಳೆ ಒಡಂಬಡಿಕೆ ಆಗಿದ್ದೇ ಆದರೆ ಒಡಂಬಡಿಕೆಗೆ ಅನುಗುಣವಾಗಿ ಪಕ್ಷದ ಹೈಕಮಾಂಡ್ ನೆರವೇರಿಸಬೇಕು ಎಂದು ಹೇಳಿದರು.
ಡಿಕೆಶಿ, ಸಿದ್ದು ಮುತ್ಸದ್ಧಿಗಳು:
ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮುತ್ಸದ್ಧಿ ರಾಜಕಾರಣಿಗಳು. ಸಾಕಷ್ಟು ಅನುಭವ ಹೊಂದಿರುವಂತವರು. ಕುರ್ಚಿಗಾಗಿ ಜಗಳ, ಕಿತ್ತಾಟ, ಸಮಸ್ಯೆ ಮಾಡುವುದಕ್ಕಿಂತ ರಾಜ್ಯದ ಅಭಿವೃದ್ಧಿ ಯಾವ ರೀತಿ ಮಾಡಬೇಕು ಅನ್ನೋದನ್ನು ಎಲ್ಲಾ ಮುಖಂಡರು ಗಮನ ಕೊಡಬೇಕು ಶ್ರೀಗಳು ಸಲಹೆ ನೀಡಿದರು.
ಹಿಂದೂಗಳ ಹತ್ಯೆ ನೋವಿನ ಸಂಗತಿ:
ರಾಜ್ಯದಲ್ಲಿ ಹಿಂದೂಗಳ ಹತ್ಯೆ ಆಗುತ್ತಿರುವುದು ಬಹಳ ನೋವಿನ ಸಂಗತಿಯಾಗಿದೆ. ಅಮಾಯಕ ಹಿಂದೂಗಳ ಹತ್ಯೆಯನ್ನು ಬಹಳಷ್ಟು ಕಡೆ ನೋಡುತ್ತಿದ್ದೇವೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಭಾರತ ಹಲವು ಸಮುದಾಯ, ಸಂಪ್ರದಾಯದ ವಿಶಿಷ್ಟ ದೇಶ. ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ಪರಿಪಾಲನೆ ಈ ದೇಶದ ಕಡ್ಡಾಯ ನಿಯಮ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ