ಕಾಂಗ್ರೆಸ್ ಉಚಿತ ಯೋಜನೆಗೆ ಹೈರಾಣಾದ ಜನ, ನಿನ್ನೆಯಿಂದ ಬಿಯರ್ ಬೆಲೆ ಶೇ.20 ರಷ್ಟು ಹೆಚ್ಚಳ!

Published : Jun 10, 2023, 10:52 AM ISTUpdated : Jun 10, 2023, 11:45 AM IST
ಕಾಂಗ್ರೆಸ್ ಉಚಿತ ಯೋಜನೆಗೆ ಹೈರಾಣಾದ ಜನ, ನಿನ್ನೆಯಿಂದ ಬಿಯರ್ ಬೆಲೆ ಶೇ.20 ರಷ್ಟು ಹೆಚ್ಚಳ!

ಸಾರಾಂಶ

ಕಾಂಗ್ರೆಸ್ ಉಚಿತ ಯೋಜನೆ ಜಾರಿಗೆ ಹಣ ಸಾಲುತ್ತಿಲ್ಲ. ಆದಾಯ ಕ್ರೋಡಿಕರಿಸಲು ಇದೀಗ ಸಿಕ್ಕ ಸಿಕ್ಕ ವಸ್ತುಗಳ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ಇದೀಗ ಮದ್ಯದ ಮೇಲೆ ಶೇಕಡಾ 20 ರಷ್ಟು ತೆರಿಗೆ ಹೆಚ್ಚಿಸಲಾಗಿದೆ. ನಿನ್ನೆಯಿಂದಲೇ ಬಿಯರ್ ಬೆಲೆ ಹೆಚ್ಚಳವಾಗಿದೆ.

ಬೆಂಗಳೂರು(ಜೂ.10): ಕಾಂಗ್ರೆಸ್ ಪಂಚ ಗ್ಯಾರೆಂಟಿ ಯೋಜನೆ ಜಾರಿಗೊಳ್ಳುತ್ತಿದೆ. ಜೂನ್ 11 ರಂದು ಶಕ್ತಿ ಯೋಜನೆ ಮೂಲಕ ಕಾಂಗ್ರೆಸ್ ಉಚಿತ ಯೋಜನೆಗಳು ಒಂದೊಂದೆ ಜಾರಿಯಾಗಲಿದೆ. ಆದರೆ ಕಾಂಗ್ರೆಸ್ ಉಚಿತ ಗ್ಯಾರೆಂಟಿಯಿಂದ ರಾಜ್ಯದ ಬೊಕ್ಕಸ ಬರಿದಾಗುತ್ತಿದೆ. ಹೀಗಾಗಿ ಆದಾಯ ಮೂಲಕ ಕ್ರೋಡಿಕರಿಸಲು ಸಿಕ್ಕ ಸಿಕ್ಕ ವಸ್ತುಗಳ ಬೆಲೆ ಏರಿಕೆ ಮಾಡಲಾಗುತ್ತಿದೆ. ಉಚಿತದ ನೆಪದಲ್ಲಿ ಇದೀಗ ವಿದ್ಯುತ್ ಬೆಲೆ ಏರಿಕೆ ಮಾಡಲಾಗಿದೆ. ಇದರ ಬೆನ್ನಲ್ಲೇ ಮದ್ಯಪ್ರಿಯರಿಗೆ ಶಾಕ್ ನೀಡಿದೆ. ಆದಾಯ ಸಂಗ್ರಹಿಸಲು ಸರ್ಕಾರ ಶೇಕಡಾ 20 ರಷ್ಟು ಮದ್ಯದ ಬೆಲೆ ಏರಿಕೆ ಮಾಡಿದೆ. ನಿನ್ನೆಯಿಂದಲೇ(ಜೂ.10) ಬಿಯರ್ ಬೆಲೆ ಹೆಚ್ಚಳವಾಗಿದೆ.

ಬಿಯರ್ ಮೇಲೆ ಶೇಕಡಾ 20 ರಷ್ಟು ತೆರಿಗೆ ವಿಧಿಸಲಾಗಿದೆ. ಈ ಮೂಲಕ ಬಿಯರ್ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ 500 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಹರಿದು ಬರಲಿದೆ. ಕೇವಲ ಬಿಯರ್ ಮಾತ್ರವಲ್ಲ, ಇತರ ಮದ್ಯದ ಮೇಲೂ ತೆರಿಗೆ ವಿಧಿಸಲಾಗಿದೆ. ಬಿಯರ್ ಹೊರತು ಪಡಿಸಿ ಇತರ ಮದ್ಯದ ಬೆಲೆಯನ್ನು ಶೇಕಡಾ 15 ರಷ್ಟು ಹೆಚ್ಚಿಸಲಾಗಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ 3,000 ಕೋಟಿ ರೂಪಾಯಿ ಹರಿದು ಬರಲಿದೆ.

ಏನ್‌ ಕಾಲ ಬಂತಪ್ಪಾ..ಮದ್ವೆ ಮನೆಯಲ್ಲಿ ತಾಂಬೂಲದ ಜೊತೆ ಮದ್ಯದ ಬಾಟಲಿ ಗಿಫ್ಟ್‌!

ಇಷ್ಟಕ್ಕೇ ರಾಜ್ಯ ಸರ್ಕಾರದ ಆದಾಯ ಕ್ರೋಡಿಕರಣ ನಡೆ ಮುಗಿದಿಲ್ಲ. ಮದ್ಯ ಲೈಸೆನ್ಸ್  ಶುಲ್ಕ ಹೆಚ್ಚಿಸಲಾಗಿದೆ. ಲಿಕ್ಕರ್ ಲೈಸೆನ್ಸ್ ಫೀಯನ್ನು ಶೇಕಡಾ 25 ರಷ್ಟು ಹೆಚ್ಚಿಸಲಾಗಿದೆ. 2016 ರಿಂದ ಲಿಕ್ಕರ್ ಲೈಸೆನ್ಸ್ ದರ ಹೆಚ್ಚಿಸಿಲ್ಲ. ಹೀಗಾಗಿ ಶೇಕಡಾ 25 ರಷ್ಟು ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ. ಈ ಮೂಲಕ ವಾರ್ಷಿಕ 175 ಕೋಟಿ ರೂಪಾಯಿ ಆದಾಯ ಕ್ರೋಡಿಕರಿಸಲು ಮುಂದಾಗಿದೆ.

2023-24 ರ ವಾರ್ಷಿಕದಲ್ಲಿ ಈಗಾಗಲೇ 35 ಸಾವಿರ ಕೋಟಿ ಆದಾಯದ ಟಾರ್ಗೆಟ್ ಮಾಡಲಾಗಿದೆ. 39 ಸಾವಿರ ಕೋಟಿ ರೂಪಾಯಿ ಸಂಗ್ರಹಿಸುಲ ಗುರಿ ಇಟ್ಟುಕೊಂಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಇನ್ನು 4 ಸಾವಿರ ಕೋಟಿಗೆ ಇತರ ವಸ್ತುಗಳ ಬೆಲೆ ತೆರಿಗೆ ವಿಧಿಸುವ ಸಾಧ್ಯತೆ ಇದೆ.  

ರಾಜ್ಯ ಸರ್ಕಾರದ ಈ ನಡೆಯನ್ನು ಮದ್ಯಪ್ರಿಯರು ವಿರೋಧಿಸಿದ್ದಾರೆ. ಮದ್ಯಪ್ರಿಯರ ಸಂಘಗಳು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ. ಯಾರಿಗೋ ಉಚಿತ ನೀಡಲು ಹೋಗಿ ಮದ್ಯದ ಮೇಲೆ ಯಾಕೆ ಬರೆ ಎಳೆಯುತ್ತಿದ್ದೀರಿ? ರಾಜ್ಯದ ಬೊಕ್ಕಸ ಕಾಲಿ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದು ಯಾಕೆ? ಎಂದು ಮದ್ಯಪ್ರಿಯರ ಸಂಘದ ಸದಸ್ಯರ ಆಕ್ರೋಶ ಹೊರಹಾಕಿದ್ದಾರೆ.

Delhi Night Life: ಕುಡುಕರಿಗೆ ಸಂತೋಷದ ಸುದ್ದಿ; ಇನ್ಮುಂದೆ ದಿಲ್ಲಿಯಲ್ಲಿ 24 ಗಂಟೆಗಳ ಕಾಲವೂ ಕುಡೀತಾ ಇರ್ಬೋದು!

ಈ ಬಗ್ಗೆ ಮಾತನಾಡಿದ ಫೆಡರೇಶನ್‌ ಆಫ್‌ ವೈನ್‌ ಮರ್ಚಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಎಸ್‌.ಗುರುಸ್ವಾಮಿ, ಮದ್ಯದ ದರ ಹೆಚ್ಚಳ ನಿರ್ಧಾರ ಸರಿಯಲ್ಲ. ಸರ್ಕಾರ ಈ ಕುರಿತು ಯಾವುದೂ ಸ್ಪಷ್ಟ ನಿರ್ಧಾರ ತಿಳಿಸಿಲ್ಲ. ಈವರೆಗೆ ಸರ್ಕಾರ ಅಸೋಸಿಯೇಶನ್‌ ಜೊತೆಗೆ ಮಾತನಾಡಿಲ್ಲ. ಈಗಾಗಲೇ ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಮದ್ಯದ ಬೆಲೆ ವಿಪರೀತವಾಗಿದೆ. ಈಗ ಮತ್ತಷ್ಟುಹೆಚ್ಚಿಸಿದರೆ ಇದು ಮಧ್ಯಮ ವರ್ಗದ ಜನತೆ ಮೇಲೆ ಪರಿಣಾಮ ಬೀರಲಿದೆ ಎಂದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB ಮ್ಯಾಚ್ ಫಿಕ್ಸ್ ಆಯ್ತು; ಆದ್ರೆ ಕಾಲ್ತುಳಿತದಲ್ಲಿ ಸತ್ತ 11 ಜನರ ಕೇಸ್ ಏನಾಯ್ತು?
Premium FAR and TDR Issues: ಪ್ರೀಮಿಯಂ ಎಫ್​ಎಆರ್​, ಟಿಡಿಆರ್​​ ಕುರಿತು ಸಿಎಂ, ಡಿಸಿಎಂಗೆ ದೂರು