ಮಗನ ಸಾವಿನ ತನಿಖೆ ಬಗ್ಗೆ ನಿರ್ಲಕ್ಷ್ಯ; ಪೊಲೀಸರ ವಿರುದ್ಧ ಸಿಎಂ ಬಳಿ ದೂರು ನೀಡಿದ ಮಹಿಳೆ

By Ravi JanekalFirst Published Aug 21, 2024, 4:45 PM IST
Highlights

ಮಗನ ಅನುಮಾನಾಸ್ಪದ ಸಾವಿನ ಬಗ್ಗೆ ಪೊಲೀಸರು ತನಿಖೆ ಮಾಡದೆ ನಿರ್ಲಕ್ಷ್ಯವಹಿಸಿದ್ದಾರೆಂದು ಆರೋಪಿಸಿ ಮಹಿಳೆಯೋರ್ವಳು ಪೊಲೀಸರ ವಿರುದ್ಧ ಕ್ರಮಕ್ಕೆ  ಸಿಎಂ ಸಿದ್ದರಾಮಯ್ಯಗೇ ದೂರು ನೀಡಿದ ಘಟನೆ ವಿಜಯಪುರ ಜಿಲ್ಲೆ ನಿಡಗುಂದಿ ತಾಲ್ಲೂಕಿನ ಆಲಮಟ್ಟಿಯಲ್ಲಿ ನಡೆದಿದೆ.

ವಿಜಯಪುರ (ಆ.21): ಮಗನ ಅನುಮಾನಾಸ್ಪದ ಸಾವಿನ ಬಗ್ಗೆ ಪೊಲೀಸರು ತನಿಖೆ ಮಾಡದೆ ನಿರ್ಲಕ್ಷ್ಯವಹಿಸಿದ್ದಾರೆಂದು ಆರೋಪಿಸಿ ಮಹಿಳೆಯೋರ್ವಳು ಪೊಲೀಸರ ವಿರುದ್ಧ ಕ್ರಮಕ್ಕೆ  ಸಿಎಂ ಸಿದ್ದರಾಮಯ್ಯಗೇ ದೂರು ನೀಡಿದ ಘಟನೆ ವಿಜಯಪುರ ಜಿಲ್ಲೆ ನಿಡಗುಂದಿ ತಾಲ್ಲೂಕಿನ ಆಲಮಟ್ಟಿಯಲ್ಲಿ ನಡೆದಿದೆ.

 ವಿಜಯಪುರದ ಆಲಮಟ್ಟಿ ಡ್ಯಾಂಗೆ ಬಾಗಿನ ಅರ್ಪಿಸಲು ಆಗಮಿಸಿದ್ದ  ವೇಳೆ ಸಿಎಂ ಗೆ ಮನವಿ ಮಾಡಿದ ಮಹಿಳೆ ಬಸಮ್ಮ.ಕಣ್ಣೀರು ಹಾಕಿ ಮಗನ ಸಾವಿಗೆ ನ್ಯಾಯ ಒದಗಿಸುವಂತೆ ಮುಖ್ಯಮಂತ್ರಿಗಳ ಕಾಲಿಗೆ ಬಿದ್ದು ಮನವಿ ಮಾಡಿದರು. ನನ್ನ ಮಗನದು ಅಪಘಾತ ಅಲ್ಲ, ಅಪಘಾತದ ರೀತಿಯಲ್ಲಿ ಕೊಲೆ ಮಾಡಿದ್ದಾರೆ. ಮಗನ ಸಾವಿಗೆ ನ್ಯಾಯ ಬೇಕು. ನಿಮ್ಮ ಮಗ ಸತ್ತಿದ್ರೆ ಹಿಂಗೆ ಸುಮ್ನಿರ್ತಿದ್ರ ಎಂದು ಸಿಎಂ ಮುಂದೆ ಮಹಿಳೆಯ ಗೋಳಾಡಿದ್ದಾರೆ. ಮಹಿಳೆಯ ದೂರು ಸ್ವೀಕರಿಸಿದ ಸಿಎಂ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ ಬಳಿಕ ಪೊಲೀಸರು ಮಹಿಳೆಯರನ್ನು ಅಲ್ಲಿಂದ ಕರೆದೊಯ್ದರು.

Latest Videos

ಏನಿದು ಘಟನೆ?

ಮುದ್ದೇಬಿಹಾಳ ತಾಲೂಕಿನ ಮಾದಿನಾಳ ಕ್ರಾಸ್ ಬಳಿ 2023ರಲ್ಲಿ ಅಪಘಾತವಾಗಿ ಮಗ ಸಾವನ್ನಪ್ಪಿದ್ದ. ಆದರೆ  ಇದು ಅಪಘಾತವಲ್ಲ. ಅಪಘಾತದ ರೀತಿಯಲ್ಲಿ ಮಗನ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದ ಮಹಿಳೆ. ಆದರೆ ದೂರು ನೀಡಿದರೂ ಸರಿಯಾಗಿ ತನಿಖೆ ಮಾಡದೇ ಪೊಲೀಸರು ನಿರ್ಲಕ್ಷ್ಯವಹಿಸಿರುವ ಆರೋಪ. ಇದುವರೆಗೆ ಅಪಘಾತ ಹೇಗಾಯಿತು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಿ ಮಾಹಿತಿ ನೀಡುತ್ತಿಲ್ಲ. ಇದರಿಂದ ಬೇಸತ್ತ ಮಹಿಳೆ ಮಗನ ಸಾವಿಗೆ ನ್ಯಾಯ ಒದಗಿಸಿಕೊಡುವಂತೆ ಸಿಎಂ ಸಿದ್ದರಾಮಯ್ಯರ ಬಳಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ನಿರ್ಲಕ್ಷ್ಯ ವಹಿಸಿದ ಪೊಲೀಸರ ವಿರುದ್ಧ ಕ್ರಮ ದೂರು ನೀಡಿದ್ದಾರೆ.

click me!