'ಏಯ್ ಯಶ್ಪಾಲ್ ಸುವರ್ಣ ಕೇಳುಸ್ಕೋತಿದ್ದೀಯಾ? ನಾಳೆ ನೀನೂ ಸಿಎಂ ಆಗಬಹುದು ಎಂದ ಸಿದ್ದರಾಮಯ್ಯ!

By Ravi Janekal  |  First Published Jan 5, 2025, 9:15 PM IST

ಬೆಂಗಳೂರಿನಲ್ಲಿ ನಡೆದ ಬೃಹತ್ ಮೊಗವೀರ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊಗವೀರ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ವಿಚಾರವನ್ನು ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾಪಿಸುವುದಾಗಿ ತಿಳಿಸಿದರು. ಯಶ್‌ಪಾಲ್ ಸುವರ್ಣ ಅವರನ್ನು ಉದ್ದೇಶಿಸಿ, ಮುಂದೊಂದು ದಿನ ಮುಖ್ಯಮಂತ್ರಿಯಾಗಬಹುದು ಎಂದು ಹೇಳಿದರು.


ಬೆಂಗಳೂರು (ಜ.5): ಇಂದು ಬೆಂಗಳೂರು ಮೊಗವೀರ ಸಂಘದಿಂದ ಸುವರ್ಣ ಪಥ ಹೆಸರಿನಲ್ಲಿ ಬೃಹತ್ ಮೊಗವೀರ ಸಮಾವೇಶ ನಡೆಯುತ್ತಿದೆ. ಹಿಂದೆ 2015ರಲ್ಲಿ ಮೊಗವೀರ ಸಮಾವೇಶ ನಾನೇ ಉದ್ಘಾಟನೆ ಮಾಡಿದ್ದೆ. ಇಂದು ಕೂಡ ಆಹ್ವಾನ ಮಾಡಿದ್ರು, ನಾನೇ ಉದ್ಘಾಟನೆ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. 

ಇಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಮೊಗವೀರ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೊಗವೀರರು ಹಿಂದುಳಿದ, ಶೋಷಿತ ಸಮುದಾಯದವರು‌. ಆದರೂ ಸ್ವಾಭಿಮಾನದಿಂದ ಜೀವನ ನಡೆಸುವ ಸಮುದಾಯ. ಜಾತಿ ವ್ಯವಸ್ಥೆ ಇರುವ ಕಾರಣ ಇಂದಿಗೂ ಅನೇಕ ಜನ ಹಿಂದುಳಿದವರು ಇದ್ದಾರೆ. ಅಂಬೇಡ್ಕರ್ ಸಂವಿಧಾನದಿಂದಾಗಿ ಎಲ್ಲರೂ ಶಿಕ್ಷಣ ಪಡೆಯುವ ಅವಕಾಶ ಸಿಕ್ಕಿದೆ ಎಂದರು.

Tap to resize

Latest Videos

ಇದನ್ನೂ ಓದಿ: ಶಿಕ್ಷಣ, ಸಂಘಟನೆ, ಹೋರಾಟ; ಮೊಗವೀರ ಸಮುದಾಯಕ್ಕೆ ತ್ರಿಸೂತ್ರ ಹೇಳಿಕೊಟ್ಟ ಸಿಎಂ ಸಿದ್ದರಾಮಯ್ಯ

ಏಯ್ ಯಶ್ಪಾಲ್ ಸುವರ್ಣ ಕೇಳುಸ್ಕೋತಿದ್ದೀಯಾ?

ಏಯ್ ಯಶ್‌ಪಾಲ್ ಸುವರ್ಣ ಕೇಳುಸ್ಕೋತಿದ್ದೀಯಾ? ಮೀನುಗಾರರ ಸಮುದಾಯ ಕ್ಯಾಟಗರಿ ಒಂದಕ್ಕೆ ಬರ್ತಾರೆ. ಕೋಲಿ‌ ಸಮಾಜವನ್ನ, ಗೊಲ್ಲರನ್ನ ಎಸ್‌ಟಿಗೆ ಸೇರಿಸಬೇಕು ಅಂತ ಕುಲಶಾಸ್ತ್ರ ಅಧ್ಯಯನ ಮಾಡಿಸಿದ್ದೇನೆ. ಆದ್ರೆ ಕೇಂದ್ರ ಸರ್ಕಾರ ಯಾವುದಕ್ಕೂ ಒಪ್ಪಿಲ್ಲ. ನೀವ್ಯಾರು ಇದನ್ನ ಕೇಂದ್ರಕ್ಕೆ ಪ್ರಶ್ನೆಯೇ ಮಾಡಿಲ್ಲ ಎಂದು ವೇದಿಕೆಯಲ್ಲೇ ತಿವಿದರು. ಈ ವೇಳೆ ಪ್ರಶ್ನ ಮಾಡ್ತಿದ್ದೇವೆ ಎಂದ ಜನರು. ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಹೇಯ್ ಸುಮ್ಮನೆ ಮೀಸೆ ಬಿಟ್ಕೊಂಡಿದ್ದೀಯಾ, ಏನ್ ಮಾಡ್ತಿದ್ದೀರಿ? ನಾನು ಮತ್ತೆ ನಿಮ್ಮ ಸಮುದಾಯವನ್ನ ಎಸ್ಟಿಗೆ ಸೇರಿಸೋಕೆ ಕೇಂದ್ರಕ್ಕೆ ಶಿಫಾರಸ್ಸು ಮಾಡ್ತೀನಿ. ನೀವೆಲ್ಲಾ ಸಮುದಾಯದವರು ಸೇರಿ, ಕೇಂದ್ರದ ಮೇಲೆ‌ ಒತ್ತಡ ಹಾಕಿ. ನೀವೆಲ್ಲ ಸಂಘಟನೆ ಮಾಡಿಕೊಂಡಿದ್ದೀರಿ, ಚರ್ಚೆ ಮಾಡಿ. ಹಿಂದೆ ಜಯಪ್ರಕಾಶ್ ಹೆಗ್ಡೆ ಮೀನುಗಾರಿಕಾ ಸಚಿವರಾಗಿದ್ರು. ಆಗ ನಾನು ಸಿಎಂ ಆಗಿದ್ದೆ, ನಿಮ್ಮ ಮೊಗವೀರರು ಉಡುಪಿಯಲ್ಲಿ ನನಗೆ ಕೈಗೆ ಕಡಗ ಹಾಕಿದ್ರು. ಅದು ನಿಮ್ಮ ದೊಡ್ಡತನ ಎಂದು ಸ್ಮರಿಸಿದರು.

ಯಶ್ಪಾಲ್ ಸುವರ್ಣ ನಾಳೆ ಸಿಎಂ ಆಗಬಹುದು!

ಯಶ್ಪಾಲ್ ಸುವರ್ಣ ಈಗ ಎಂಎಲ್‌ಎ ಆಗಿದ್ದಾರೆ. ನಾಳೆ ಮುಖ್ಯಮಂತ್ರಿ ಆಗಬಹುದು. ನಿಮ್ಮದೇ ಸಮುದಾಯದವರು ಶಾಸಕ ಆಗಿದ್ದಾರೆ. ನಾಳೆ ಮುಖ್ಯಮಂತ್ರಿ ಕೂಡ ಆಗಬಹುದು ಎಂದ ಸಿದ್ದರಾಮಯ್ಯ ಈ ವೇಳೆ  ಬೇಡ ಸಾರ್ ಅಂತ ಕೈ ಮುಗಿದ ಯಶ್ಪಾಲ್ ಸುವರ್ಣ ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ, ನೀನು ಸಿಎಂ ಆಗ್ತೀಯಾ ಅಂತಾ ಹೇಳಲಿಲ್ಲ, ನಿಮ್ಮ ಸಮುದಾಯವರು ಆಗಬಹುದು ಎಂದು ಸಿದ್ದರಾಮಯ್ಯ ಕಾಲೆಳೆದರು. 

ಇದನ್ನೂ ಓದಿ: ಇದ್ದರೆ ಸಿದ್ದರಾಮಯ್ಯನಂಥ ರಾಜನಿರಬೇಕು..., ಸಿಎಂ ಆಗಿ ಮುಂದುವರಿಯುವಂತೆ ಆಶೀರ್ವಾದಿಸಿದ ಬೋವಿ ಶ್ರೀಗಳು!

ಮ್ಯಾಜಿಕ್‌ ಸ್ಟಿಕ್‌ನಿಂದ ಮುಟ್ಟಿ, ಅಂಜಲ್ ಮೀನು ಹೊರಗೆ ತೆಗೆದ ಸಿಎಂ

ಅರಮನೆ ಮೈದಾನದಲ್ಲಿ ನಡೆಯುತ್ತಿರುವ  ಸುವರ್ಣ ಪಥ ಹೆಸರಿನಲ್ಲಿ ಬೃಹತ್ ಮೊಗವೀರ ಸಮಾವೇಶ ಕಾರ್ಯಕ್ರಮವ. ಮ್ಯಾಜಿಕ್ ಸ್ಟಿಕ್ ಮೂಲಕ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯನವರು. ಮೊಗವೀರ ದೋಣಿಗೆ ಮ್ಯಾಜಿಕ್‌ ಸ್ಟಿಕ್‌ನಿಂದ ಮುಟ್ಟಿ, ಅಂಜಲ್ ಮೀನನ್ನ ಹೊರಗೆ ತೆಗೆದರು.ಸಭೆಯಲ್ಲಿ ಮೊಗವೀರ ಸಂಘದ ಮುಖಂಡ ಡಾ. ಜಿ ಶಂಕರ್ ಅವರು ಮಂಗಳೂರು, ಮಲ್ಪೆ, ಗಂಗೊಳಿ, ದಕ್ಷಿಣ ಕನ್ನಡ ಬಂದರುಗಳನ್ನ ರಿಪೇರಿ ಮಾಡಿಕೊಡುವಂತೆ ಮನವಿ ಮಾಡಿದರು.  ಮೀನು ಬಂದಿದ್ದು ನೋಡಿ  ಓಹ್.. ಎಂದು ಅಚ್ಚರಿ ವ್ಯಕ್ತಪಡಿಸಿದರು.  

ಈ ವೇಳೆ ಸಚಿವ ಬೈರತಿ ಸುರೇಶ್, ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಚಿವ ಹೆಚ್.ಎಂ ರೇವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೆ ವೇಳೆ ಸಭೆಯಲ್ಲಿ ಮೊಗವೀರ ಸಂಘದ ಮುಖಂಡ ಡಾ. ಜಿ ಶಂಕರ್ ಅವರು ಮಂಗಳೂರು, ಮಲ್ಪೆ, ಗಂಗೊಳಿ, ದಕ್ಷಿಣ ಕನ್ನಡ ಬಂದರುಗಳನ್ನ ರಿಪೇರಿ ಮಾಡಿಕೊಡುವಂತೆ ಮನವಿ ಮಾಡಿದರು. 

click me!