ಶಿಕ್ಷಣ, ಸಂಘಟನೆ, ಹೋರಾಟ; ಮೊಗವೀರ ಸಮುದಾಯಕ್ಕೆ ತ್ರಿಸೂತ್ರ ಹೇಳಿಕೊಟ್ಟ ಸಿಎಂ ಸಿದ್ದರಾಮಯ್ಯ
ಬೆಂಗಳೂರು ಮೊಗವೀರ ಸಂಘದಿಂದ ಆಯೋಜಿಸಲಾದ 'ಸುವರ್ಣ ಪಥ' ಮೊಗವೀರ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಮೊಗವೀರ ಸಮುದಾಯದ ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಗತಿಗೆ ಒತ್ತು ನೀಡಿದರು ಹಾಗೂ ಸಮುದಾಯದ ಏಳಿಗೆಗೆ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ ಎಂದು ಬಲವಾಗಿ ಪ್ರತಿಪಾದಿಸಿದರು.
ಬೆಂಗಳೂರು (ಜ.5): ಇಂದು ಬೆಂಗಳೂರು ಮೊಗವೀರ ಸಂಘದಿಂದ ಸುವರ್ಣ ಪಥ ಹೆಸರಿನಲ್ಲಿ ಬೃಹತ್ ಮೊಗವೀರ ಸಮಾವೇಶ ನಡೆಯುತ್ತಿದೆ. ಹಿಂದೆ 2015ರಲ್ಲಿ ಮೊಗವೀರ ಸಮಾವೇಶ ನಾನೇ ಉದ್ಘಾಟನೆ ಮಾಡಿದ್ದೆ. ಇಂದು ಕೂಡ ಆಹ್ವಾನ ಮಾಡಿದ್ರು, ನಾನೇ ಉದ್ಘಾಟನೆ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಇಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಮೊಗವೀರ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೊಗವೀರರು ಹಿಂದುಳಿದ, ಶೋಷಿತ ಸಮುದಾಯದವರು. ಆದರೂ ಸ್ವಾಭಿಮಾನದಿಂದ ಜೀವನ ನಡೆಸುವ ಸಮುದಾಯ. ಜಾತಿ ವ್ಯವಸ್ಥೆ ಇರುವ ಕಾರಣ ಇಂದಿಗೂ ಅನೇಕ ಜನ ಹಿಂದುಳಿದವರು ಇದ್ದಾರೆ. ಅವರ ಕಸುಬಿನ ಆಧಾರದ ಮೇಲೆ ಜಾತಿ ಮಾಡಿದ್ರು. ನಾಲ್ಕು ವರ್ಣಗಳಾಗಿ ಮಾಡಿದ್ರು. ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು, ಶೂದ್ರರು ಎಂದು ಮಾಡಿದ್ರು. ಮೊದಲ ಮೂರು ವರ್ಗಗಳಿಗೆ ವಿದ್ಯೆ ಕಲಿಯುವ ಅವಕಾಶ ಇತ್ತು. ಆದರೆ ಶೂದ್ರರಿಗೆ ವಿದ್ಯೆ ಕಲಿಯುವ ಅವಕಾಶ ಇರಲಿಲ್ಲ. ಹೀಗಾಗಿ ಹಿಂದೂಳಿದವರಾಗಿದ್ದಾರೆ ಎಂದರು.
ಇದನ್ನೂ ಓದಿ: ಇದ್ದರೆ ಸಿದ್ದರಾಮಯ್ಯನಂಥ ರಾಜನಿರಬೇಕು..., ಸಿಎಂ ಆಗಿ ಮುಂದುವರಿಯುವಂತೆ ಆಶೀರ್ವಾದಿಸಿದ ಬೋವಿ ಶ್ರೀಗಳು!
ಸಂವಿಧಾನ ಬರುವವರೆಗೂ ಜಾತಿ, ವರ್ಣ ವ್ಯವಸ್ಥೆ ಇತ್ತು. ಸಮಾಜದಲ್ಲಿ ಹೆಚ್ಚು ಜನಸಂಖ್ಯೆ ಇರೋದು ಶೂದ್ರರು. ಹಾಗಾಗಿ ವಿದ್ಯೆ ಇಲ್ಲದೆ ವಂಚಿತರಾದ್ರು ಇಂದು ಲಿಂಗ ತಾರತಮ್ಯ ಆಗಲು ಇವರೇ ಕಾರಣ. ಸ್ವಾತಂತ್ರ್ಯ ಬಳಿಕ ಎಲ್ಲರೂ ಶಿಕ್ಷಣ ಪಡೆಯುವಂತಾಯ್ತು.ಮೊಗವೀರರು ಇಂದಿಗೂ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಲ್ಲರೂ ವಿದ್ಯಾವಂತರಾಗಬೇಕು. ಸಂವಿಧಾನದಿಂದಾಗಿ ಎಲ್ಲರಿಗೂ ವಿದ್ಯೆ ಕಲಿಯುವ ಅವಕಾಶ ಇಂದು ಸಿಕ್ಕಿದೆ. ಶಿಕ್ಷಣ ಮೂಲಭೂತ ಹಕ್ಕಾಗಿದೆ. ಎಲ್ಲರೂ ಶಿಕ್ಷಣ ಕಲಿಯಲು ಅವಕಾಶ ಸಿಕ್ಕಿದೆ. ಶಿಕ್ಷಣದ ಮಹತ್ವದ ಬಗ್ಗೆ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ ಎಲ್ಲರಿಗೂ ಶಿಕ್ಷಣ,.ಎಲ್ಲರಿಗೂ ಮತ ಹಾಕಲು ಅವಕಾಶ ಸಿಕ್ಕಿದೆ. ಒಬ್ಬ ವ್ಯಕ್ತಿ, ಒಂದು ಓಟು, ಒಂದೇ ಮೌಲ್ಯ. ರಾಷ್ಟ್ರಪತಿ ಇಂದ ಹಿಡಿದು, ನಾಲ್ಕನೇ ದರ್ಜೆಯ ವ್ಯಕ್ತಿಗೂ ಒಂದೇ ಮತ. ಆದ್ರೆ ಆರ್ಥಿಕವಾಗಿ ಒಂದೇ ಮೌಲ್ಯ, ಸಾಮಾಜಿಕವಾಗಿ ಒಂದೇ ಮೌಲ್ಯ ಇಲ್ಲ ಎಂದು ದೇಶದಲ್ಲಿ ಆರ್ಥಿಕ ಅಸಮಾನತೆ ಇರುವ ಬಗ್ಗೆ ಎತ್ತಿ ತೋರಿಸಿದರು.
ಇದನ್ನೂ ಓದಿ: ಸಂವಿಧಾನ ಇದ್ದಿದ್ದಕ್ಕೆ ನಾನು ಸಿಎಂ ಆಗೋಕೆ ಸಾಧ್ಯವಾಗಿದ್ದು: ಸಿದ್ದರಾಮಯ್ಯ ಮಾತು
ಬಸವಣ್ಣನ ವಚನ ಹೇಳಿದ ಸಿಎಂ
ವಿಶ್ವಗುರು ಬಸವಣ್ಣನವರು ಹೇಳ್ತಾರೆ, ಕಾಯಕವೇ ಕೈಲಾಸ ಎಂದು. ಬಸವಣ್ಣ ಎರಡು ವಿಚಾರ ಬಿಟ್ಟು ಹೋಗಿದ್ದಾರೆ. ಒಂದು ಕಾಯಕ, ಮತ್ತೊಂದು ದಾಸೋಹ. ಕಾಯಕ ಅಂದ್ರೆ ಎಲ್ಲರೂ ಕೆಲಸ ಮಾಡೋದು. ನೀವು ಮೀನು ಹಿಡಿಯುವ ಕಾಯಕ ಮಾಡ್ತೀರಿ. ಆದ್ರೆ ಕೆಲವರು ಆಸ್ತಿಯನ್ನ ಅನುಭವಿಸಿಕೊಂಡು ಓಡಾಡ್ತಿದ್ದಾರೆ. ಹಿಂದೆ ಮೇಲ್ವರ್ಗದವರು ಮಾತ್ರ ಆಸ್ತಿ ಅನುಭವಿಸುವ ಅವಕಾಶ ಇತ್ತು. ಸಂವಿಧಾನ ಬಂದ ಬಳಿಕ ಎಲ್ಲರಿಗೂ ಆಸ್ತಿ ಅನುಭವಿಸುವ ಅವಕಾಶ ಸಿಕ್ಕಿತು. ಹೀಗಾಗಿ ನಿಮ್ಮ ಮಕ್ಕಳನ್ನ ವಿದ್ಯಾವಂತರನ್ನಾಗಿ ಮಾಡಿ. ಇಲ್ಲದಿದ್ರೆ ಗುಲಾಮಗಿರಿ ನಿಲ್ಲೋದಿಲ್ಲ. ವಿದ್ಯೆಯಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಉಳಿಯಬೇಡಿ. ಯಾಕೆ ನಾವು ಹಿಂದುಳಿದಿದ್ದೇವೆ ಅನ್ನೋದು ಚರ್ಚೆಯಗಾಬೇಕು. ಅಪ್ಪ ಹಾಕಿದ ಆಲದ ಮರದ ತರಾನೇ ಇರಬೇಕಾ ನೀವು? ನಿಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್, ಬೇರೆ ಬೇರೆ ಕೆಲಸ ಮಾಡಬಾರದಾ? ಯಾರೂ ಕೂಡ ದಡ್ಡರಲ್ಲ. ಎಲ್ಲರಿಗೂ ಅವಕಾಶ ಸಿಗಬೇಕು. ಅವಕಾಶ ಸಿಗದೆ ದಡ್ಡರಂತಾಗಿದ್ದಾರೆ. ಅಂತವರಿಗೆ ಅಂಬೇಡ್ಕರ್ ಶಿಕ್ಷಣದ ಹಕ್ಕು ಕೊಟ್ಟಿದ್ದಾರೆ. ವ್ಯಾಸ ನಿಮ್ಮದೇ ಜನಾಂಗದವರು ಅಂತಾ ಎದೆ ತಟ್ಟಿ ಹೇಳಿ ಎಂದರು.
ಮೊಗವೀರರಿಗೆ ಮೂರು ಸೂತ್ರ ಹೇಳಿಕೊಟ್ಟ ಸಿಎಂ ಸಿದ್ದರಾಮಯ್ಯ
ಭಾಷಣದುದ್ದಕ್ಕೂ ಮೊಗವೀರ ಸಮುದಾಯ ಶಿಕ್ಷಣ ಪಡೆಯುವ ಕುರಿತು ಒತ್ತಿ ಹೇಳಿದರು. ಶಿಕ್ಷಣ, ಸಂಘಟನೆ, ಹೋರಾಟ.. ಎಂದು ಮೊಗವೀರ ಸಮುದಾಯಕ್ಕೆ ತ್ರಿಸೂತ್ರ ಹೇಳಿಕೊಟ್ಟರು. ಪ್ರತಿಯೊಬ್ಬರು ಶಿಕ್ಷಣ ಪಡೆದುಕೊಳ್ಳಬೇಕು, ಸಂಘಟನೆ ಮಾಡಬೇಕು, ತಮ್ಮ ಹಕ್ಕಿಗಾಗಿ ಹೋರಾಟ ಮಾಡಬೇಕು ಎಂದರು. ನುಡಿದಂತೆ ನಡೆದ ಏಕೈಕ ವ್ಯಕ್ತಿ ಸಿದ್ದರಾಮಯ್ಯ ಮಾತ್ರ. ನಾನು ಹೇಳಿದಂತೆ ಐದು ಗ್ಯಾರಂಟಿ ಕೊಟ್ಟಿದ್ದೇನೆ. ಸಮಾವೇಶದಲ್ಲಿ ಸರ್ಕಾರ ಗ್ಯಾರಂಟಿಯನ್ನ ಹೊಗಳಿಕೊಂಡರು.
ಯುವತಿ ಪ್ರಶ್ನೆಗೆ ಸಿಎಂ ಉತ್ತರ:
ಭಾಷಣದ ವೇಳೆ ಸಿಎಂಗೆ ವಿದ್ಯಾನಿಧಿ ಯೋಜನೆ ಬಗ್ಗೆ ಚೀಟಿ ಬರೆದು ಕೇಳಿದ ಯುವತಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ವಿದ್ಯಾನಿಧಿ ಆಗಲ್ಲ, ಅದರ ಬದಲಾಗಿ ಬೇರೆಯದನ್ನ ಮಾಡೋಣ ಎಂದರು. ಬಿಜೆಪಿ ಸರ್ಕಾರದಲ್ಲಿ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ತಂದಿದ್ದ ವಿದ್ಯಾನಿಧಿ ಯೋಜನೆ. ಈ ಯೋಜನೆಯಡಿ ಆಟೋ, ರೈತ ಮತ್ತು ಇತರೆ ಕೂಲಿ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣಕ್ಕೆ ಹಣಕಾಸು ನೆರವು ಮಾಡುವ ಯೋಜನೆಯಾಗಿತ್ತು