ಸಿಎಂ ಬದಲಾವಣೆ ಕುರಿತು ಒಕ್ಕಲಿಗ ಸ್ವಾಮೀಜಿ ಹೇಳಿಕೆ ತಾರಕಕ್ಕೇರಿರುವ ಬೆನ್ನಲ್ಲೇ ಯುವಕನೊಬ್ಬ ಸಿದ್ದರಾಮಯ್ಯ ಬದಲಿಗೆ ನನ್ನನ್ನೇ ಸಿಎಂ ಮಾಡಿ ಎಂದು ಹೇಳಿಕೆ ನೀಡಿರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ವಿಜಯಪುರ (ಜು.2): ಸಿಎಂ ಬದಲಾವಣೆ ಕುರಿತು ಒಕ್ಕಲಿಗ ಸ್ವಾಮೀಜಿ ಹೇಳಿಕೆ ತಾರಕಕ್ಕೇರಿರುವ ಬೆನ್ನಲ್ಲೇ ಯುವಕನೊಬ್ಬ ಸಿದ್ದರಾಮಯ್ಯ ಬದಲಿಗೆ ನನ್ನನ್ನೇ ಸಿಎಂ ಮಾಡಿ ಎಂದು ಹೇಳಿಕೆ ನೀಡಿರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಬಸವನ ಬಾಗೇವಾಡಿ(Basavana bagewadi) ತಾಲೂಕಿನ ಉಪ್ಪಲದಿನ್ನಿಯ ಸತೀಶ್ ಲಮಾಣಿ(satish lamani) ಎಂಬ ಯುವಕನಿಂದ ವಿಡಿಯೋ ಮಾಡಿ ಹೇಳಿಕೆ. ನನ್ನ ಸಿಎಂ ಮಾಡಿದ್ರೆ(if karnataka cm change) ದೇಶ ಅಭಿವೃದ್ಧಿ ಆಗೋದಿಲ್ವ? ಎಂದು ಪ್ರಶ್ನಿಸಿರುವ ಯುವಕ. ನಾನು ಕೂರಬೇಕಾದ ಸಿಎಂ ಚೇರ್‌ನಲ್ಲಿ ಬೇರೊಬ್ಬರು ಕುಳಿತಿದ್ದಾರೆ. ನಾನು ಕೂಡಬೇಕಾದ ಚೇರ್ ಮೇಲೆ ಬೇರೊಬ್ಬರು ಕೂತಿದ್ರೆ ರಾಜ್ಯಕ್ಕೆ ತೊಂದರೆಯಾಗುತ್ತೆ. ಮೊದಲು ನನ್ನ ಚೇರ್ ನನಗೆ ಬಿಡಿ ಎಂದಿರುವ ಭೂಪ.
ದರ್ಶನ್ ರನ್ನ ಕಾಣಲು ಬಂದ ದಾಸಪ್ಪ; ಪರಪ್ಪನ ಅಗ್ರಹಾರ ಜೈಲಿನ ಮುಂದೆ ಶಂಖ ಊದಿ ಬಿಡುಗಡೆಗೆ ದೇವರ ಮೊರೆ!
ಬಾಗೇವಾಡಿ ಬಸವೇಶ್ವರ ದೇಗುಲದ ಶಿವಲಿಂಗದ ಎದುರು ನಿಂತು ಆಣೆ ಮಾಡಿ ವಿಡಿಯೋ ಮಾಡಿರುವ ಯುವಕ. 'ಶಿವಲಿಂಗದ ಆಣೆಗೂ ನಾನು ಹೇಳೋದು ಸತ್ಯ, ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನನ್ನನ್ನ ಸಿಎಂ ಮಾಡದೇ ಇದ್ರೆ ದೇಶದ ಅಭಿವೃದ್ಧಿ ಹದಗೆಡುತ್ತೆ. ಹಿಂದೆ ಬೊಮ್ಮಾಯಿ ಸಿಎಂ ಆಗಿದ್ದಾಗಲೂ ನಾನು ನನ್ನ ಸೀಟು ಬಿಡುವಂತೆ ಹೇಳಿದ್ದೆ. ಆದರೆ ಅವರು ಕೇಳಲಿಲ್ಲ. ರಾಜ್ಯದಲ್ಲಿ ಏನಾಯ್ತು ಅಂತಾ ಗೊತ್ತಾ ಇದೆ. ನನ್ನನ್ನ ಸಿಎಂ ಮಾಡದ್ದಕ್ಕೆ ಅವರು ಅಧಿಕಾರ ಕಳೆದುಕೊಂಡರು. ಇದೀಗ ಸಿದ್ದರಾಮಯ್ಯ ಕೂಡ ನನ್ನ ಸೀಟು ಮೇಲೆ ಕುಳಿತಿದ್ದಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನನ್ನನ್ನು ಸಿಎಂ ಆಗಿ ಮಾಡಲಿ ಎಂದು ವಿಡಿಯೋ ಹರಿಬಿಟ್ಟಿರುವ ಭೂಪ. ಯುವಕನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ತರಹೇವಾರಿ ಪ್ರತಿಕ್ರಿಯೆಗಳು ಬಂದಿವೆ.