Karnataka CM swearing ceremony: ಮುಖ್ಯಮಂತ್ರಿ ಪದಗ್ರಹಣ ಕಾರ್ಯಕ್ರಮಕ್ಕೆ ಬರೋರಿಗೆ ಪೊಲೀಸರು ಕಟ್ಟುನಿಟ್ಟಿನ ಸೂಚನೆ!

Published : Jun 03, 2026, 10:46 AM ISTUpdated : Jun 03, 2026, 11:10 AM IST
Karnataka CM Oath Ceremony Massive Security Around Lok Bhavan 4 800 Cops Deployed Roads Closed From Noon

ಸಾರಾಂಶ

ಬೆಂಗಳೂರಿನ ಲೋಕಭವನದಲ್ಲಿ ನಡೆಯಲಿರುವ ಮುಖ್ಯಮಂತ್ರಿ ಪ್ರಮಾಣ ವಚನ ಸಮಾರಂಭಕ್ಕೆ ಭಾರೀ ಭದ್ರತೆ ಒದಗಿಸಲಾಗಿದೆ. ಸುಮಾರು 4,800ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದ್ದು, ಶ್ವಾನದಳ ಮತ್ತು ಬಾಂಬ್ ಪತ್ತೆ ದಳದಿಂದ ತಪಾಸಣೆ ನಡೆಸಲಾಗುತ್ತಿದೆ. ಸಮಾರಂಭದ ವೇಳೆ ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ

ಬೆಂಗಳೂರು (ಜೂ.3): ಇಂದು ಬೆಂಗಳೂರಿನ ಲೋಕಭವನದಲ್ಲಿ ಮುಖ್ಯಮಂತ್ರಿ ಪ್ರಮಾಣ ವಚನ ಸಮಾರಂಭ ನಡೆಯುತ್ತಿರುವ ಹಿನ್ನೆಲೆ ಲೋಕಭವನ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಭದ್ರತೆ ಏರ್ಪಡಿಸಲಾಗಿದೆ. ಸಮಾರಂಭದ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಸುಮಾರು 3,500ಕ್ಕೂ ಹೆಚ್ಚು ಪೊಲೀಸರು, 1300 ಟ್ರಾಫಿಕ್ ಪೊಲೀಸರು ಸೇರಿದಂತಂತೆ ಒಟ್ಟು 4,800ಕ್ಕೂ ಹೆಚ್ಚು ಸಿಬ್ಬಂದಿಯನ್ನ ನಿಯೋಜಿಸಲಾಗಿದೆ.

ಕಮಿಷನರ್‌ರಿಂದ ಪಿಎಸ್‌ಐ ವರೆಗೆ ಭದ್ರತಾ ಜವಾಬ್ದಾರಿಗಳು ಹೇಗಿವೆ?

ಭಾರೀ ಭದ್ರತಾ ವ್ಯವಸ್ಥೆ ಏರ್ಪಡಿಸಲಾಗಿದ್ದು ಇದರ ಮೇಲ್ವಿಚಾರಣೆಗೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೇರಿದಂತೆ ಹಿರಿಯ ಅಧಿಕಾರಿಗಳು ನಿಯೋಜಿತರಾಗಿದ್ದಾರೆ. ಮೂವರು ಜಂಟಿ ಪೊಲೀಸ್ ಆಯುಕ್ತರು, 9 ಡಿಸಿಪಿಗಳು, 25 ಎಸಿಪಿಗಳು, 60 ಇನ್ಸ್‌ಪೆಕ್ಟರ್‌ಗಳು, 160 ಪಿಎಸ್‌ಐಗಳು ಹಾಗೂ ಕೆಎಸ್‌ಆರ್‌ಪಿ ತುಕಡಿಗಳು ಭದ್ರತಾ ವ್ಯವಸ್ಥೆಯ ಜವಾಬ್ದಾರಿ ಹೊತ್ತಿದ್ದಾರೆ.

ಶ್ವಾನದಳ, ಬಾಂಬ್ ಪತ್ತೆ ಉಪಕರಣಗಳೊಂದಿಗೆ ತಪಾಸಣೆ

ಇನ್ನು ವಿಧ್ವಂಸಕ ಕೃತ್ಯಗಳನ್ನ ತಡೆಯುವ ಉದ್ದೇಶದಿಂದ ಡಿಸಿಪಿ ವಿವಿಐಪಿ ಭದ್ರತಾ ವಿಭಾಗದ ಸಿಬ್ಬಂದಿ ವಿಶೇಷ ತಪಾಸಣೆ ನಡೆಸಲಿದ್ದಾರೆ. ಲೋಕಭವನದ ಭವ್ಯ ಮೆಟ್ಟಿಲುಗಳು, ವಿಧಾನಸೌಧ ಸುತ್ತಮುತ್ತ ಹಾಗೂ ಪ್ರವೇಶ ದ್ವಾರಗಳಲ್ಲಿ ಶ್ವಾನದಳ ಮತ್ತು ಅತ್ಯಾಧುನಿಕ ತಪಾಸಣಾ ಉಪಕರಣಗಳನ್ನು ಬಳಸಲಾಗುತ್ತಿದೆ.

ಸಮಾರಂಭದ ವೇಳೆ ಸಂಘಟನೆಗಳು ಪ್ರತಿಭಟನೆ ಮಾಡದಂತೆ ಎಚ್ಚರಿಕೆ:

ಸದರಿ ಕಾರ್ಯಕ್ರಮ ನಡೆಯುವ ಸಮಯದಲ್ಲಿ ವಿವಿಧ ಸಂಘಟನೆಗಳು, ಸಂಘ ಸಂಸ್ಥೆಗಳು, ಮುಖಂಡರುಗಳು, ಗಮನ ಸೆಳೆಯಲು ನಗರಾಧ್ಯಂತ ವಿವಿಧ ಕಡೆಗಳಿಂದ ಮೆರವಣಿಗೆಯಲ್ಲಿ ಬರುವವರಿದ್ದಾರೆ. ಇಂತಹ ಮೆರವಣಿಗೆಗೆ ಅನುಮತಿ ಪಡೆದುಕೊಂಡಲ್ಲಿ, ಅಂತಹವರನ್ನು ಆಯಾ ಸರಹದ್ದಿನ ಅಧಿಕಾರಿಗಳು ತಮ್ಮ ಸಿಬ್ಬಂದಿ ಜೊತೆ ಬಂದೋಬಸ್ತ್ ಉಸ್ತುವಾರಿ ಮಾಡುವುದು. ಯಾವುದೇ ಕಾರಣಕ್ಕೂ ಈ ಮೆರವಣಿಗೆಕಾರರು, ಪ್ರತಿಭಟನಾಕಾರರು, ಕೆ.ಆರ್. ವೃತ್ತ, ಮಹಾರಾಣಿ ವೃತ್ತ, ಬಸವೇಶ್ವರ ವೃತ್ತ, ಸಿ.ಟಿ.ಓ. ವೃತ್ತಗಳಿಂದ ಮುಂದಕ್ಕೆ ಬರದಂತೆ ನೋಡಿಕೊಳ್ಳುವುದು.

ಸಮಾರಂಭಕ್ಕೆ ಬರುವವರಿಗೆ ಕಡ್ಡಾಯ ನಿಯಮಗಳೇನು?

  • ಈ ಸಮಾರಂಭಕ್ಕೆ ಪಾಸ್ ಹೊಂದಿರುವವರು ಮಾತ್ರ ಲೋಕಭವನಕ್ಕೆ ಪ್ರವೇಶಿಸಲು ಅವಕಾಶ ವಿರುತ್ತದೆ.
  • ಪ್ರತಿ ಪಾಸ್‌ಗೆ ಒಬ್ಬರಿಗೆ ಮಾತ್ರ ಪ್ರವೇಶವಿರುತ್ತದೆ.
  • ಪಾಸ್ ಹೊಂದಿರುವವರು ಕಡ್ಡಾಯವಾಗಿ 02 ಗಂಟೆಯ ಒಳಗೆ ಲೋಕಭವನದ ಗಾಜಿನ ಮನೆಯಲ್ಲಿ ಆಸೀನರಾಗಬೇಕು. ಅನಂತರ ಬಂದರೆ ಪ್ರವೇಶವಿಲ್ಲ.
  • ಲೋಕಭವನಕ್ಕೆ ಆಗಮಿಸುವವರು ಗೋಪಾಲಗೌಡ ವೃತ್ತದಿಂದ ಪೊಲೀಸ್ ತಿಮ್ಮಯ್ಯ ವೃತ್ತದ ಮುಖಾಂತರ ಲೋಕಭವನಕ್ಕೆ ಪ್ರವೇಶಿಸಬೇಕು.
  • ಕಾರ್ಯಕ್ರಮಕ್ಕೆ ಆಹ್ವಾನ ಹೊಂದಿರುವ ವಾಹನಗಳನ್ನು ಹೊರತುಪಡಿಸಿ, ಗೋಪಾಲಗೌಡ ವೃತ್ತವನ್ನು ದಾಟಿ ಮುಂದೆ ಹೋಗಲು ಯಾವುದೇ ವಾಹನಗಳಿಗೆ ಪ್ರವೇಶ ಇರುವುದಿಲ್ಲ.
  • ಕಾರ್ ಪಾಸ್ ಹೊಂದಿರುವ ವಾಹನಗಳನ್ನು ಹೊರತುಪಡಿಸಿ, ಪೊಲೀಸ್ ತಿಮ್ಮಯ್ಯ ವೃತ್ತವನ್ನು ದಾಟಿ ಯಾವುದೇ ವಾಹನಗಳಿಗೆ ಪ್ರವೇಶ ಇರುವುದಿಲ್ಲ.
  • ಯಾವುದೇ ಕಾರಣಕ್ಕೂ ಪಾಸ್‌ಗಳನ್ನು ದುರುಪಯೋಗಪಡಿಸಿಕೊಳ್ಳಬಾರದು.
  • ದುರುಪಯೋಗ ಪಡಿಸಿಕೊಂಡಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ರೀತಿಯ ಕ್ರಮ.

 

 

ಕರ್ತವ್ಯದಲ್ಲಿರುವ ಪೊಲೀಸರಿಗೆ ವಿಶೇಷ ಸೂಚನೆ

1. ಎಲ್ಲಾ ಪಿಐಗಳು ಕಡ್ಡಾಯವಾಗಿ ಒಬ್ಬರು ಸಿಬ್ಬಂದಿಯನ್ನು ಕ್ಯಾಮರಾದೊಂದಿಗೆ ಜೊತೆಯಲ್ಲಿ ಕರೆತರುವುದು.

2. ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಅಧಿಕಾರಿ ಮತ್ತು ಸಿಬ್ಬಂದಿ

ದಿನಾಂಕ:03.06.2026 ರಂದು ಬೆಳ್ಳಿಗ್ಗೆ 09-00 ಗಂಟೆಗೆ ವಿಕಾಸ ಸೌಧ ಗೇಟ್ ನಂ-02 ಪಾರ್ಕಿಂಗ್ ಸ್ಥಳ ಮಾಹಿತಿ ಸೌಧದ ಎದುರು ಕರ್ತವ್ಯಕ್ಕೆ ಹಾಜರಾಗತಕ್ಕದ್ದು, ತಡವಾಗಿ ಆಗಮಿಸಿದರೆ ಗೈರೆಂದು ಪರಿಗಣಿಸಲಾವುದು.

3. ಸೆಕ್ಟರ್-05, 06. 07 ರಲ್ಲಿನ ಸಿಬ್ಬಂದಿ ನೀಟಾದ ಸಮವಸ್ತ್ರ ಧರಿಸಿಕೊಂಡು ಇನ್ ಶರ್ಟ್‌ ನೊಂದಿಗೆ & ಬ್ಲಾಕ್ ಶೂ & ಬ್ರೇಜರ್ ನಲ್ಲಿ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು.

4. ಎಲ್ಲಾ ಎ.ಎಸ್.ಐ. ಮತ್ತು ಮೇಲ್ಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ವಾಕಿ-ಟಾಕಿ ಹೊಂದಿರತಕ್ಕದ್ದು.

5. ಮಳೆಯ ಸಂಭವವಿರುವುದರಿಂದ ಅಧಿಕಾರಿ ಮತ್ತು ಸಿಬ್ಬಂದಿ ಕಡ್ಡಾಯವಾಗಿ ರೇನ್ ಕೋಟ್ ಛತ್ರಿಯನ್ನು ತಮ್ಮ ಜೊತೆಯಲ್ಲಿ ಇಟ್ಟುಕೊಳ್ಳುವುದು.

6. ಯಾವುದೇ ಪ್ರತಿಭಟನಾಕಾರರು, ಮೆರವಣಿಗೆಕಾರರು, ಅನಧಿಕೃತ ವ್ಯಕ್ತಿಗಳು ವಿಧಾನಸೌಧದ ಕಡೆ ನುಗ್ಗದಂತೆ ನೋಡಿಕೊಳ್ಳುವುದು.

7. ಸದರಿ ಬಂದೋಬಸ್ತ್ ಮುಗಿಯುವವರೆಗೂ ಯಾರೂ ನಿಯೋಜಿಸಲ್ಪಟ್ಟ ಸ್ಥಳವನ್ನು ಬಿಟ್ಟು ಹೋಗಬಾರದು.

8. ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಅಧಿಕಾರಿಗಳು ರಿವಾಲ್ವಾರ್ ಮತ್ತು ಲಾಠಿ ಹಾಗೂ ಹೆಲೈಟ್ ಹೊಂದಿರತಕ್ಕದ್ದು. ಸಿಬ್ಬಂದಿಗಳು ಲಾಠಿ ಮತ್ತು ಹೆಲೈಟ್ ಹೊಂದಿರತಕ್ಕದ್ದು.

9. ಅಧಿಕಾರಿ ಮತ್ತು ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದು, ಯಾವುದೇ ರೀತಿಯ ಉದ್ವೇಗಕ್ಕೆ ಒಳಗಾಗದೆ, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು.

10. ಕಾರುಗಳಲ್ಲಿ ಅಥವಾ ವಾಹನಗಳಲ್ಲಿ ಯಾವುದೇ ಸಂಘಟನೆಯ ಶಾಲು, ಧ್ವಜ ಕಪ್ಪು ಪಟ್ಟಿ, ಕರವಸ್ತ್ರ ಮುಂತಾದವುಗಳನ್ನು ತೆಗೆದು ಕೊಂಡು ಬರುವವರನ್ನು ಪರಿಶೀಲಿಸುವುದು.

11. ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆಗೊಂಡ ಪಿ.ಎಸ್.ಐ. ದರ್ಜೆಯ ಹಾಗೂ ಅದಕ್ಕಿಂತ ಕೆಳಹಂತದ ಅಧಿಕಾರಿಗಳು (ಪಿ.ಸಿ., ಹೆಚ್ಸಿ, ಎ.ಎಸ್.ಐ) ಮೋಬೈಲ್ ಪೋನ್‌ಗಳನ್ನು ಉಪಯೋಗಿಸುವುದನ್ನು ನಿಷೇಧಿಸಲಾಗಿದೆ. ಈ ಸಂಬಂಧ ಉಲ್ಲಂಘನೆಯಾಗದಂತೆ ಸಂಬಂಧಪಟ್ಟ ಉಸ್ತುವಾರಿ ಅಧಿಕಾರಿಗಳು ಜವಾಬ್ದಾರಿವಹಿಸಿಕೊಳ್ಳುವುದು.

ಎಲ್ಲಾ ವಿಭಾಗ/ ಉಪ ವಿಭಾಗಗಳಿಂದ ವಿಶೇಷ ಕರ್ತವ್ಯಕ್ಕೆ ಹಾಜರಾಗುವ ಅಧಿಕಾರಿ ಮತ್ತು ಸಿಬ್ಬಂದಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!
ಸಿಲ್ಕ್‌ಬೋರ್ಡ್‌ To ಹೆಬ್ಬಾಳದ 17 ಕಿ.ಮೀ ಉದ್ದದ ಸುರಂಗ ಗುತ್ತಿಗೆ ಅದಾನಿ ಕಂಪನಿಗೆ: 22 ಸಾವಿರ ಕೋಟಿಗೆ ಬಿಡ್