ರಾಜನ ಮೇಲೆ ಭಂಗ ಬೀರಲಿದೆ, ರಾಜ್ಯದಲ್ಲಿ ಮಹಿಳೆಯೊಬ್ಬರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಕೋಡಿಶ್ರೀಗಳ ಭವಿಷ್ಯ ನಿಜವಾಗುತ್ತಾ? ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಎರಡು ಹಂತದಲ್ಲಿ ಹಿನ್ನೆಡೆಯಾಗಿರುವುದು ಶ್ರೀಗಳ ಭವಿಷ್ಯವಾಣಿ ನಿಜವಾಗುತ್ತಾ? ಕಾಂಗ್ರೆಸ್ ಪಾಳಯದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಬೆಂಗಳೂರು (ಸೆ.27) : ಕೆಲವು ದಿನಗಳ ಹಿಂದೆ ರಾಜ್ಯ ರಾಜಕೀಯ ಬೆಳವಣಿಗೆ ಬಗ್ಗೆ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಗಳು ಸ್ಫೋಟಕ ಭವಿಷ್ಯ ನುಡಿದಿದ್ದರು. ನಮಗೆ ಪಂಚ ಶಕ್ತಿಗಳಿಂದಲೂ ತೊಂದರೆ ಇದೆ. ಭೂಮಿ, ಅಗ್ನಿ, ವಾಯು, ಆಕಾಶ, ಪ್ರಕೃತಿ ಸೇರಿದಂತೆ ಎಲ್ಲಾ ಕಡೆ ತೊಂದರೆ ಆಗುತ್ತದೆ. ಇದು ರಾಜನ ಮೇಲೆ ಭಂಗ ಬೀರಲಿದೆ ಎಂಬ ಭವಿಷ್ಯವಾಣಿ ಸ್ಫೋಟಕ ಭವಿಷ್ಯ ಇದೀಗ ಮುಡಾ ಹಗರಣ ಬೆಳವಣಿಗೆಗಳು ಗಮನಿಸಿದ್ರೆ ನಿಜವಾಗುತ್ತಾ ಎಂಬ ಆತಂಕ ಕಾಂಗ್ರೆಸ್ ಪಾಳಯದಲ್ಲಿ ಆತಂಕ ತಂದೊಡ್ಡಿದೆ.
ಹೌದು ಕಳೆದ ತಿಂಗಳು ಮಳೆ, ರಾಜಕಾರಣ, ಪ್ರಕೃತಿ ವಿಕೋಪಗಳ ಬಗ್ಗೆ ಭವಿಷ್ಯ ನುಡಿದಿದ್ದ ಶ್ರೀಗಳು. ಈ ಬಾರಿ ಮಳೆಯಿಂದ ದೇಶದಲ್ಲಿ ಜಾಸ್ತಿ ತೊಂದರೆ ಇದೆ. ಪ್ರಾಕೃತಿಕ ದೋಷ ಇದೆ. ನಮಗೆ ಪಂಚ ಶಕ್ತಿಗಳಿಂದಲೂ ತೊಂದರೆ ಇದೆ. ಭೂಮಿ, ಅಗ್ನಿ, ವಾಯು, ಆಕಾಶ, ಪ್ರಕೃತಿ ಸೇರಿದಂತೆ ಎಲ್ಲಾ ಕಡೆ ತೊಂದರೆ ಆಗುತ್ತದೆ. ಇನ್ನೂ ಹೇಳಬೇಕೆಂದರೆ ಆಕಾಶದಲ್ಲಿ ಆಗುವ ದೊಡ್ಡ ಸುದ್ದಿ ಇದೆ. ಜನ ಇದ್ದಕ್ಕಿದ್ದಂತೆ ಸಾಯುತ್ತಾರೆ. ಭೂಮಿ ಬಿರುಕು ಬಿಡುತ್ತೆ. ಗುಡ್ಡ ಕುಸಿಯುತ್ತೆಪ್ರವಾಹದಲ್ಲಿ ಜಗತ್ತಿನಾದ್ಯಂತ ಹಲವು ದೇಶಗಳು ಮುಳುಗುತ್ತವೆ ಎಂದು ಹೇಳಿದ್ದೆ. ಇನ್ನೂ ಮಳೆ ಇದೆ, ಅದರಲ್ಲಿ ಇನ್ನೂ ಅನಾಹುತಗಳು ಸಂಭವಿಸಲಿವೆ ಎಂದು ಭವಿಷ್ಯ ನುಡಿದಿದ್ದರೂ ಇದೇ ವೇಳೆ ಕೇಂದ್ರ ರಾಜ್ಯ ಸರ್ಕಾರಗಳ ಬಗ್ಗೆಯೂ ಭವಿಷ್ಯ ನುಡಿದಿದ್ದ ಶ್ರೀಗಳು.
'ಮುಂದೆ ಮಹಿಳೆ ಸಿಎಂ ಆಗ್ತಾರೆ' ಕೋಡಿಶ್ರೀ ಭವಿಷ್ಯ ನುಡಿದ ಬೆನ್ನಲ್ಲೇ ಲಕ್ಷ್ಮೀ ಹೆಬ್ಬಾಳ್ಕರ್ ಸಿಎಂ ಪೋಸ್ಟ್ ವೈರಲ್!
ಶ್ರೀಗಳ ಭವಿಷ್ಯ ವಾಣಿ ಬಳಿಕ ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬೆಳವಣಿಗೆಗಳು ಕಂಡಿವೆ. ಅದರಲ್ಲೂ ಮುಡಾ ಹಗರಣ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಂಕಷ್ಟ ತದ್ದೊಡ್ಡಿದೆ. ಹೈಕೋರ್ಟ್, ಜನಪ್ರತಿನಿಧಿಗಳ ನ್ಯಾಯಾಲಯದಲ್ಲೂ ಹಿನ್ನೆಡೆಯಾಗಿ ಇನ್ನೆರಡೇ ದಾರಿ ಉಳಿದಿದೆ. ಅಲ್ಲೂ ಪರಿಹಾರ ಸಿಗದಿದ್ದರೆ ಇದೀಗ ಸಿಎಂ ಸಿದ್ದರಾಮಯ್ಯರಿಗೆ ಕಂಟಕ ತಪ್ಪಿದ್ದಲ್ಲ ಎಂಬಂತೆ ಬೆಳವಣಿಗೆಗಳು ನಡೆಯುತ್ತಿರುವುದು ಆತಂಕ ಇನ್ನಷ್ಟು ಹೆಚ್ಚಿಸಿದೆ.