ದಲಿತ ನಾಯಕರ ಡಿನ್ನರ್ ಪಾರ್ಟಿ ವಿವಾದ: ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ

Published : Jan 18, 2025, 11:48 AM IST
ದಲಿತ ನಾಯಕರ ಡಿನ್ನರ್ ಪಾರ್ಟಿ ವಿವಾದ: ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ

ಸಾರಾಂಶ

ದಲಿತ ನಾಯಕರ ಡಿನ್ನರ್ ಸಭೆಯು ಡಿನ್ನರ್ ಪಾರ್ಟಿ ಅಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ರಾಜಕಾರಣಿಗಳು ಯಾವಾಗಲೂ ಸೇರುತ್ತಾರೆ, ಇದರಲ್ಲಿ ತಪ್ಪಿಲ್ಲ ಎಂದು ಅವರು ಹೇಳಿದರು. ಬಿಜೆಪಿ ನಾಯಕರ ಟೀಕೆಗಳಿಗೆ ತಿರುಗೇಟು ನೀಡಿದ ಅವರು, ಕ್ಯಾಬಿನೆಟ್‌ನಲ್ಲಿ ಎಲ್ಲರಿಗೂ ಅವಕಾಶವಿದೆಯೇ ಎಂದು ಪ್ರಶ್ನಿಸಿದರು.

ಬೆಂಗಳೂರು (ಜ.18): ದಲಿತ ನಾಯಕರು ಒಟ್ಟಿಗೆ ಸೇರಲೇಬಾರದಾ? ಒಟ್ಟಿಗೆ ಸೇರಿದ್ದು ನಿಜ. ಆದರೆ ಅದು ಡಿನ್ನರ್ ಪಾರ್ಟಿ ಅಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದರು.

ದಲಿತ ನಾಯಕರ ಡಿನ್ನರ್ ಸಭೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ರಾಜಕಾರಣಿಗಳು ಸ್ನೇಹಿತರು ಯಾವಾಗಲೂ ಸೇರ್ತಿವಿ. ಹೈಕಮಾಂಡ್ ನಾಯಕರು ಸೇರಬೇಡಿ ಅಂತ ಹೇಳಲ್ಲ. ಸಭೆ ಸೇರುವುದರಲ್ಲಿ ತಪ್ಪಿಲ್ಲ ಎಂದರು.

 ವಿಧಾನಸೌಧದಲ್ಲೇ ಸಭೆ ನಡೆಸಬಹುದಲ್ಲ? ಡಿನ್ನರ್ ಸಭೆ ಅವಶ್ಯಕತೆ ಏನು ಎಂಬ ಬಿಜೆಪಿಯ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚವರು, ಕ್ಯಾಬಿನೆಟ್ ನಲ್ಲಿ ಎಲ್ಲರಿಗೂ ಅವಕಾಶ ಇದೆಯಾ? ಬಿಜೆಪಿಗೆ ಸಾಮಾನ್ಯ ಪ್ರಜ್ಞೆ ಅನ್ನೋದು ಇದೆಯಾ? ಎಂದು ಹರಿಹಾಯ್ದರು ಮುಂದುವರಿದು, ಬಿಜೆಪಿಯವರು ಮೊದಲು ಕಾಂಗ್ರೆಸ್ ಬಗ್ಗೆ ಮಾತನಾಡೋದು ನಿಲ್ಲಿಸಲಿ. ನಿಮ್ದು ನೋಡಿಕೊಳ್ಳಿ. ಸಂಕ್ರಾಂತಿ ಆದ್ಮೇಲೆ ವಿಜಯೇಂದ್ರ ಬದಲಾವಣೆ ಆಗ್ತಾರೆ ಅಂತ ಅವ್ರೇ ಅಧಿಕೃತವಾಗಿ ಹೇಳ್ತಿದ್ದಾರೆ. ನಮ್ದು ಪಕ್ಷವನ್ನು ಸಕ್ರಿಯಗೊಳಿಸುವ ಬಗ್ಗೆ ಚರ್ಚೆ ಅಷ್ಟೇ. ಆದರೆ ಬಿಜೆಪಿಯಲ್ಲಿ ಯಾವ ರೀತಿ ನಾಶ ಮಾಡಬೇಕು? ಯಾರ ನಾಯಕತ್ವದಲ್ಲಿ ನಾಶ ಮಾಡಬೇಕು ಚರ್ಚೆ ಮಾಡ್ತಾರೆ. ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದರು.

ಇದನ್ನೂ ಓದಿ: ಪತ್ರಕರ್ತರ ಸಮ್ಮೇಳನ: ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ.. ಗಣಪತಿ ಶ್ಲೋಕ ಹೇಳಿದ ಗೃಹ ಸಚಿವ!

ಇಡಿ,ಮುಡಾ ಹಗರಣದ ಬಗ್ಗೆ ಹೇಳಿದ್ದೇನು?

ಐಟಿ, ಇಡಿ ಎಲ್ಲರಿಗೂ ನಾವು ತನಿಖೆ ಮಾಡಿ ಅಂತಾನೆ ಹೇಳಿದ್ದೇವೆ. ಇದಷ್ಟೇ ಅಲ್ಲ ಕಳೆದ ಹತ್ತು ಹದಿನೈದು ವರ್ಷಗಳಿಂದ ನಗರಾಭಿವೃದ್ಧಿಯಲಿ ಏನ್ ನಡೆದಿದೆ? ಏನ್ ನಡೀತಿದೆ? ಅದನ್ನು ಸಹ ತನಿಖೆ ಮಾಡಲು ಹೇಳಿದ್ದೇವೆ. ಬಿಜೆಪಿಯವರು ಮುಡಾ ಕೇಸ್ ನಲ್ಲಿ ಎಷ್ಟು ಆಳಕ್ಕೆ ಹೋಗ್ತಾರೋ ಅದು ಅವರಿಗೆ ಅವಮಾನ ಆಗಲಿದೆ. ಈ ವಿಚಾರದಲ್ಲಿ ಅವರೇ ಮೂಗು ಕೊಯ್ದು ಕೊಳ್ಳುತ್ತಾರೆ. ಎಲ್ಲವೂ ಕಾನೂನಿನ ಪ್ರಕಾರವೇ ಆಗಲಿದೆ. ಕಾನೂನುಬಾಹಿರ ಆಗಿದ್ರೆ, ಅವರು ಮೆಂಬರ್ಸ್ ಇದ್ರಲ್ವ? ಬಿಜೆಪಿ, ಜೆಡಿಎಸ್ ಅವರು ಮೆಂಬರ್ಸ್ ಇದ್ರಲ್ವಾ? ಅವರು ಕಾಲದಲ್ಲಿ ಏನ್ ಅಂತ ಸಾರ್ವಜನಿಕವಾಗಿ ಗೊತ್ತಾಗಲಿ. ಸಿಎಂ ಅವರೇ  ಯಾವುದೇ ತನಿಖೆಗೆ ಅಡ್ಡಿಪಡಿಸಲ್ಲ ಅಂತ ಹೇಳಿದ್ದಾರೆ. ಐಟಿ, ಇಡಿ ರಾಜ್ಯಪಾಲರ ಕಚೇರಿ ,ಯಾರನ್ನಾದರೂ ಕರೆಸಿ ನೋ ಪ್ರಾಬ್ಲಮ್ ಎಂದರು.

ಇದನ್ನೂ ಓದಿ: 'ಶ್ರೀರಾಮಮಂದಿರ ನಿರ್ಮಾಣ ಬಳಿಕ ದೇಶಕ್ಕೆ ಸ್ವಾತಂತ್ರ್ಯ' ಮೋಹನ್ ಭಾಗವತ್ ಹೇಳಿಕೆಗೆ ಉಗ್ರಪ್ಪ ಸವಾಲು!

ಇನ್ನು 189 ಕ್ಷೇತ್ರಕ್ಕೆ ಅನುದಾನ ಬಿಡುಗಡೆ ವಿಚಾರವಾಗಿ ಮಾತನಾಡಿದ ಸಚಿವರು, ಪ್ರಗತಿ ಪಥ ಯೋಜನೆ ಒಂದು ತಿಂಗಳಲ್ಲಿ ಜಾರಿಯಾಗುತ್ತೆ. ಮತ್ತೆ ಕಲ್ಯಾಣ ಪಥ ಯೋಜನೆ‌‌ ಕೂಡ‌ ಮಾಡಿದ್ದೇವೆ. ಸುಮಾರು 9 ಸಾವಿರ ಕಿ.ಮೀ ಗ್ರಾಮೀಣ ರಸ್ತೆ ನಿರ್ಮಾಣಕ್ಕೆ ಅನುಧಾನ‌ ನೀಡಿದ್ದೇವೆ. ಮಳೆ‌ಹಾನಿ‌ ರಸ್ತೆ ಹಾಗೂ ಹೊಸ ರಸ್ತೆಗಾಗಿ ಪ್ರತಿ ಕ್ಷೇತ್ರಕ್ಕೆ 10 ಕೋಟಿ ಕೊಟ್ಟಿದ್ದಾರೆ. ವಿಪಕ್ಷಗಳು ದುಡ್ಡಿಲ್ಲ ದುಡ್ಟಿಲ್ಲ ಎಂದು ಸುಮ್ನೆ ಅಪಪ್ರಚಾರ ಮಾಡ್ತಾರೆ. ದುಡ್ಡಿಲ್ಲ ಎಂದರೆ ಅವರಿಗೆ ಯಾಕೆ 10 ಕೋಟಿ. ಅವರಿಗೆ ಗ್ಯಾರಂಟಿ ಯೋಜನೆನೂ ಬೇಕು, ಅನುದಾನವೂ ಬೇಕು. ಆದರೆ ಸುಖಾಸುಮ್ಮನೆ ಆರೋಪ ಮಾಡ್ತಾರೆ. ಹಾಗಾದರೆ ಅನುದಾನ ವಾಪಾಸ್ ಕೊಡಲಿ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ
ಲೀಚೆಟ್ ಸಂಸ್ಕರಣಾ ಘಟಕ:ಬೆಂಗಳೂರಲ್ಲಿ ಜಟಿಲವಾಗಿರುವ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ !