ಪತ್ರಕರ್ತರ ಸಮ್ಮೇಳನ: ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ.. ಗಣಪತಿ ಶ್ಲೋಕ ಹೇಳಿದ ಗೃಹ ಸಚಿವ!

Published : Jan 18, 2025, 11:22 AM ISTUpdated : Jan 18, 2025, 11:42 AM IST
ಪತ್ರಕರ್ತರ ಸಮ್ಮೇಳನ: ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ.. ಗಣಪತಿ ಶ್ಲೋಕ ಹೇಳಿದ ಗೃಹ ಸಚಿವ!

ಸಾರಾಂಶ

ತುಮಕೂರಿನಲ್ಲಿ ನಡೆಯುತ್ತಿರುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಗೃಹ ಸಚಿವ ಪರಮೇಶ್ವರ್ ಗಣಪತಿ ಸ್ತೋತ್ರ ಹೇಳಿದ್ದಾರೆ. ಹಿಂದೂ ಧರ್ಮದ ಮೂಲದ ಬಗ್ಗೆ ಪ್ರಶ್ನಿಸಿದ್ದ ಪರಮೇಶ್ವರ್ ಈಗ ಗಣಪತಿ ಸ್ತೋತ್ರ ಹೇಳಿರುವುದು ಅಚ್ಚರಿ ಮೂಡಿಸಿದೆ.

ತುಮಕೂರು (ಜ.18): ಇಂದಿನಿಂದ ಎರಡು ದಿನಗಳ ಕಾಲ ತುಮಕೂರಿನ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ನಡೆಯಲಿರುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ತುಮಕೂರು ಅದ್ದೂರಿಯಾಗಿ ಸಿಂಗಾರಗೊಂಡಿದೆ. ವೇದಿಕೆ ವೀಕ್ಷಣೆ ನಡೆಸಿದ ಬಳಿಕ ಗೃಹ ಸಚಿವ ಪರಮೇಶ್ವರ್ ಅವರು ಗಣಪತಿ ಸ್ತೋತ್ರ ಹೇಳಿ ಶುಭ ಹಾರೈಸಿದ್ದು ಸುತ್ತಮುತ್ತ ನೆರೆದವರಲ್ಲಿ ಅಚ್ಚರಿ ಮೂಡಿಸಿತು.

'ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ನಿರ್ವಿಘ್ನಂ ಕುರುಮೇ ದೇವ  ಸರ್ವಕಾರ್ಯೇಷು ಸರ್ವದಾ..ಎಂದು ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ನಡೆಯುತ್ತಿದೆ ಯಾವುದೇ ಅಡ್ಡಿ ಆತಂಕಗಳು ಬರದಿರಲೆಂದು ಗೃಹ ಸಚಿವ ಪರಮೇಶ್ವರ್ ಶ್ಲೋಕ ಹಾಡುವ ಮೂಲಕ ವಿಘ್ನ ನಿವಾರಕನ ನೆನೆದರು. 

ಇದನ್ನೂ ಓದಿ: 'ನೀವು ಪೋಸ್ಟ್ ಮಾಡಿ ನಮ್ಮನ್ನು ಪೋಸ್ಟ್‌ ಮಾರ್ಟಮ್ ಮಾಡ್ತೀರಿ..' ಗವಿಸಿದ್ದೇಶ್ವರ ಶ್ರೀಗಳು ಕಣ್ಣೀರು ಹಾಕಿದ್ದು ಯಾಕೆ?

ಹಿಂದೂ ಧರ್ಮ ಯಾರು ಹುಟ್ಟಿಸಿದರು? ಎಂದಿದ್ದ ಪರಂ!

ಕಳೆದ ವರ್ಷ ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ರಾಜ್ಯದಲ್ಲೂ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಇದೇ ಸಂದರ್ಭದಲ್ಲಿ ಆ ಘಟನೆ ಸಂಬಂಧ ಕೊರಟಗೆರೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪರಮೇಶ್ವರ ಅವರು, ಹಿಂದೂ ಧರ್ಮ ಹುಟ್ಟಿದ್ದು ಯಾವಾಗ, ಯಾರು ಹುಟ್ಟಿಸಿದರು ಎಂದು ಪ್ರಶ್ನಿಸಿದ್ದರು. ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರೆ ಇತ್ತ ಕಾಂಗ್ರೆಸ್ ನಾಯಕರು ಸಹ ಈ ವಿಚಾರದಲ್ಲಿ ಅಂತರ ಕಾಯ್ದುಕೊಂಡಿದ್ದರೂ ಆದರೆ ಪರಮೇಶ್ವರ್ ಹಿಂದೂ ಧರ್ಮ ಯಾವಾಗ ಹುಟ್ಟಿತು, ಯಾರು ಹುಟ್ಟಿಸಿದರು ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಸ್ಟಾಲಿನ್ ಹೇಳಿಕೆಗೆ ಬೆಂಬಲ ಸೂಚಿಸಿ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

ಇದೀಗ ಅದೇ ಹಿಂದೂಗಳು ಪೂಜಿಸುವ ಗಣಪತಿ ಶ್ಲೋಕ ಹೇಳುವ ಅಚ್ಚರಿ ಮೂಡಿಸಿದರು. ವಿವಾದದ ಬಳಿಕ ಗೃಹ ಸಚಿವ ಪರಮೇಶ್ವರ ನಿರಂತರವಾಗಿ ಹಿಂದೂ ದೇವರ ಪೂಜೆ, ಶ್ಲೋಕ ಹೇಳುತ್ತಿರುವುದು ಅಚ್ಚರಿಯೇ ಸರಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ