ಹಿರಿಯ ಸಚಿವರು, ಅಧಿಕಾರಿಗಳ ದಿಢೀರ್ ಸಭೆ ಕರೆದ ಸಿಎಂ ಬಿಎಸ್‌ವೈ

By Suvarna News  |  First Published May 9, 2021, 10:48 PM IST

* ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಬೆನ್ನಲ್ಲೇ ಹಿರಿಯ ಸಚಿವರು ಮತ್ತು ಅಧಿಕಾರಿಗಳ ಸಭೆ ಕರೆ ಬಿಎಸ್‌ವೈ
* ಸೋಮವಾರ ಸಂಜೆ 6 ಗಂಟಗೆ ತಮ್ಮ ನಿವಾಸ ಕಾವೇರಿಯಲ್ಲಿ ಸಭೆ ಕರೆದಿರುವ ಸಿಎಂ ಬಿಎಸ್ ಯಡಿಯೂರಪ್ಪ
*ಅಕ್ಸಿಜನ್, ಬೆಡ್,ರೆಮಿಡಿಸ್ವಿರ್ ಹಾಗೂ ಲಸಿಕೆ ಕೊರತೆಯ ಬಗ್ಗೆ ಸಚಿವರ ಜೊತೆ ಚರ್ಚೆ ನಡೆಸಲಿರುವ ಸಿಎಂ..


ಬೆಂಗಳೂರು, (ಮೇ.09): ಕೊರೋನಾ ಎರಡನೇ ಹೆಚ್ಚಳವಾಗುತ್ತಿರುವುದರಿಂದ ನಾಳೆ ಅಂದ್ರೆ, ಮೇ.10 ರಿಂದ 14 ದಿನಗಳ ವರೆಗ ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ಮಾಡಲಾಗಿದೆ.

ಇದರ ಮಧ್ಯೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ನಾಳೆ (ಸೋಮವಾರ) ಸಂಜೆ 6ಕ್ಕೆ ಹಿರಿಯ ಸಚಿವರು ಮತ್ತು ಅಧಿಕಾರಿಗಳ ಸಭೆ ಕರೆದಿದ್ದಾರೆ. ಇದು ಕುತೂಹಲಕ್ಕೆ ಕಾರಣವಾಗಿದೆ.

Latest Videos

undefined

ತೇಜಸ್ವಿ ಸೂರ್ಯ ಮಹತ್ತರ ಕಾರ್ಯ, ಈ ಸಂಖ್ಯೆಗೆ ಕರೆ ಮಾಡಿ ಫ್ರೀ ಆಕ್ಸಿಜನ್ ಪಡೆಯಿರಿ

ಸಭೆಯಲ್ಲಿ ಆರೋಗ್ಯ ಸಚಿವ ಸುಧಾಕರ್, ಕಂದಾಯ ಸಚಿವ ಆರ್ ಅಶೋಕ್, ಡಿಸಿಎಂ ಅಶ್ವತ್ಥ್ ನಾರಾಯಣ, ವಾರ್ ರೂಮ್ ಇನ್ ಚಾರ್ಜ್ ಆಗಿರುವ ಸಚಿವ ಅರವಿಂದ್ ಲಿಂಬಾವಳಿ ಮತ್ತು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ‌.

ಅಕ್ಸಿಜನ್, ಬೆಡ್, ರೆಮಿಡಿಸ್ವಿರ್ ಹಾಗೂ ಲಸಿಕೆ ಕೊರತೆಯ ಬಗ್ಗೆ ಸಿಎಂ ಬಿಎಸ್‌ವೈ ಸಚಿವರ ಜೊತೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಇದೇ ವೇಳೆ ತಮ್ಮಗೆ ಹಂಚಿಕೆ ಮಾಡಿದ ಜವಾಬ್ದಾರಿಯನ್ನ ಸಚಿವರುಗಳು ಸಿಎಂಗೆ ವರದಿ ಒಪ್ಪಿಸಲಿದ್ದಾರೆ. ಅಲ್ಲದೇ  ಮೊದಲ ದಿನದ ಲಾಕ್‌ಡೌನ್ ಎಲ್ಲಿ ಹೇಗಾಯ್ತು ಎನ್ನುವ ಬಗ್ಗೆಯೂ ಸಿಎಂ, ಸಚಿವರು ಮತ್ತು ಅಧಿಕಾರಿಗಳ ಜೊತೆ ಚರ್ಚಿಸಲಿದ್ದಾರೆ.

click me!