ತೇಜಸ್ವಿ ಸೂರ್ಯ ಮಹತ್ತರ ಕಾರ್ಯ, ಈ ಸಂಖ್ಯೆಗೆ ಕರೆ ಮಾಡಿ ಫ್ರೀ ಆಕ್ಸಿಜನ್ ಪಡೆಯಿರಿ

By Suvarna NewsFirst Published May 9, 2021, 10:06 PM IST
Highlights

* ಬೆಂಗಳೂರು ದಕ್ಷಿಣ ಭಾಗದ ಜನರಿಗಾಗಿ ಎಂಪಿ ಆಕ್ಸಿ ಬ್ಯಾಂಕ್‌ ಸಂಸದ ತೇಜಸ್ವಿ ಸೂರ್ಯ ಚಾಲನೆ 
*  ಆಕ್ಸಿಜನ್ ಸಮಸ್ಯೆ ಇರುವವರಿಗೆ ಆಕ್ಸಿ ಬ್ಯಾಂಕ್‌ ತುಂಬ ಅನುಕೂಲ
* ರೋಗಿಯ ವಿವರಗಳನ್ನು ಸಲ್ಲಿಸಿದ್ರೆ ಮನೆಗೆ ಬರುತ್ತೆ  ಆಕ್ಸಿಜನ್ ಕಾನ್ಸನ್ಟ್ರೇಟರ್ 

ಬೆಂಗಳೂರು, (ಮೇ.09): ಕೊರೋನಾ ಸೋಂಕಿತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 250 ಯೂನಿಟ್ ಗಳ ಆಕ್ಸಿಜನ್ ಕಾನ್ಸನ್ಟ್ರೇಟರ್ ಬ್ಯಾಂಕ್‌ಗೆ ಇಂದು (ಭಾನುವಾರ) ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಚಾಲನೆ ನೀಡಿದರು.

ಇನ್ನು ಆಕ್ಸಿಜನ್ ಬ್ಯಾಂಕ್ ಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಸಂಸದ ತೇಜಸ್ವಿ ಸೂರ್ಯ, 1 ಸಾವಿರಕ್ಕೂ ಅಧಿಕ ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳನ್ನು ಬೆಂಗಳೂರು ನಾಗರಿಕರ ಸೇವೆಗೆ ಒದಗಿಸಲಿದ್ದು, ಈಗಾಗಲೇ 100 ಜನ ಕೋವಿಡ್ ಸೋಂಕಿತರಿಗೆ ಹಾಗೂ ಕೋವಿಡ್ ಚಿಕಿತ್ಸೆ ಪಡೆದು ಗುಣಮುಖರಾದ 150 ರೋಗಿಗಳಿಗೆ ಮನೆಗೇ ಕಾನ್ಸನ್ಟ್ರೇಟರ್ ಸೇವೆ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ನೆರವಿಗೆ ಮುಂದಾದ ಮಾಜಿ ಸಿಎಂ : ಮಂಡ್ಯಕ್ಕೆ ಎಸ್ಸೆಂ ಕೃಷ್ಣರಿಂದ 100 ಆಕ್ಸಿಜನ್‌ ಸಿಲಿಂಡರ್‌

ಕೋವಿಡ್ ನ ಅಲ್ಪ ಗುಣಲಕ್ಷಣಗಳನ್ನು ಹೊಂದಿದ ಹಲವು ರೋಗಿಗಳಲ್ಲಿ  ಆಕ್ಸಿಜನ್ ಕೊರತೆಯಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ. ಆಸ್ಪತ್ರೆ ಬೆಡ್ ಹಂಚಿಕೆಗಿಂತ ಪೂರ್ವದಲ್ಲಿ ಆಕ್ಸಿಜನ್ ಒದಗಿಸಿದಲ್ಲಿ ರೋಗಿಗಳಿಗೆ ಅತ್ಯಂತ ಹೆಚ್ಚಿನ ಸಹಾಯವಾಗಲಿದ್ದು, ಮನೆಯಲ್ಲಿ ಇದ್ದುಕೊಂಡೇ ಅಂತಹ ರೋಗಿಗಳಿಗೆ ಚಿಕಿತ್ಸೆ ನೀಡಬಹುದು ಎಂದರು. 

ನಗರದಲ್ಲಿ ಐಸಿಯು ಬೆಡ್ ಗಳ ಸಮಸ್ಯೆ ಎದ್ದು ಕಾಣಿಸ್ತಿದೆ. ಈ ಸಮಸ್ಯೆ ಆಗಬಾರದು ಅಂತಾ ಕಾನ್ಸನ್ಟ್ರೇಟರ್ಸ್ ಬ್ಯಾಂಕ್ ಗಳನ್ನ‌ ನೀಡ್ತಾ ಇದ್ದೀವಿ. ಬೇರೆ ಬೇರೆ ದೇಶದಲ್ಲಿರೋ ಕನ್ನಡಿಗರು ನಮಗೆ ಇದನ್ನ ಕಳಿಸಿದ್ದಾರೆ. 1000 ಆಕ್ಸಿ ಬ್ಯಾಂಕ್ ಗಳನ್ನ ಮಾಡುತ್ತೇವೆ ಎಂದು ಹೇಳಿದರು.

ಕೊರೋನಾ ಕಾಟ: ಬೆಡ್‌ಗಳ ಕೊರತೆಯಾಗುತ್ತಿದೆ, ಹುಷಾರಾಗಿ ಮನೆಯಲ್ಲೇ ಇರಿ!

ಕೊರೋನಾ ಚಿಕಿತ್ಸೆ ಆದನಂತರ ಕೆಲವರಿಗೆ ಆಕ್ಸಿಜನ್ ಅವಶ್ಯಕತೆ ಇರತ್ತೆ. ಅವರಿಗಾಗಿ ಈ ಆಕ್ಸಿ ಬ್ಯಾಂಕ್  ಸಹಾಯವಾಗಲಿವೆ. 350 ಕಾನ್ಸನ್ಟ್ರೇಟರ್ ಗಳು ಪೇಟಿಎಂ ಕಂಪನಿಯಿಂದ ಜಯನಗರದ ಆಸ್ಪತ್ರೆಗೆ ಬರಲಿದೆ ಹೆಲ್ಪ್ ಲೈನ್ ಇದೆ. 08061914960 ಈ ನಂಬರ್ ಗೆ ಕಾಲ್ ಮಾಡಿದ್ರೆ, ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಗಳು ಅವಶ್ಯಕತೆ ಇರುವವರಿಗೆ ಸಿಗಲಿದೆ. ಈ ಸೇವೆ ಸಂಪೂರ್ಣ ಉಚಿತವಾಗಿರಲಿದೆ ಸ್ಪಷ್ಟಪಡಿಸಿದರು.

ಮನೆಗೆ ಬರುತ್ತೆ  ಆಕ್ಸಿಜನ್ ಕಾನ್ಸನ್ಟ್ರೇಟರ್

ಕೋವಿಡ್-19 ಸೋಂಕಿನಿಂದ ಬಳಲುತ್ತಿರುವ ನಾಗರಿಕರು, ಬೆಂಗಳೂರು ದಕ್ಷಿಣ ಸಂಸದರ ವತಿಯಿಂದ ಆರಂಭಿಸಲಾಗಿರುವ ಕೋವಿಡ್ ರಕ್ಷಾ ಸಹಾಯವಾಣಿ 080 6191 4960 ಸಂಖ್ಯೆಗೆ ಕರೆ ಮಾಡಿದಲ್ಲಿ ಸ್ವಯಂ ಸೇವಕರು ಆಕ್ಸಿಜನ್ ಕಾನ್ಸನ್ಟ್ರೇಟರ್ ಅನ್ನು ನೇರವಾಗಿ ಮನೆಗೆ ತಲುಪಿಸುತ್ತಾರೆ. 

ಮಾಡಬೇಕಾದದ್ದು ಏನು?
ರೋಗಿಗಳ ಹೆಸರು, ವಯಸ್ಸು,ದೂರವಾಣಿ ಸಂಖ್ಯೆ,ಆಕ್ಸಿಜನ್ ಸ್ಯಾಚುರೇಷನ್ ಪ್ರಮಾಣ, ಆರೋಗ್ಯ ಸ್ಥಿತಿಗತಿಗಳ ವಿವರಗಳನ್ನು ಸಲ್ಲಿಸಿದ ನಂತರ ಆಧಾರ್ ಕಾರ್ಡ್, ಪಲ್ಸ್ ಆಕ್ಸಿಮೀಟರ್ ರೀಡಿಂಗ್ ನೊಂದಿಗೆ ರೋಗಿಯ ಫೋಟೋ ಕಳುಹಿಸಬೇಕಾಗುತ್ತದೆ. ಎಂ ಪಿ ಕಛೇರಿಯ ಸ್ವಯಂಸೇವಕರು ಡಾಕ್ಟರ್ ಪ್ರೀಸ್ಕ್ರಿಪ್ಷನ್ ಧೃಢೀಕರಿಸಿಕೊಂಡ ನಂತರ ಆಕ್ಸಿಜನ್ ಕಾನ್ಸನ್ಟ್ರೇಟರ್ ಅನ್ನು ನೇರವಾಗಿ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಿದ್ದಾರೆ.

Tejasvi Surya's Press Meet | Doorstep delivery of Oxygen Concentrators for COVID-19 home recovery https://t.co/nf8thFic2W

— Tejasvi Surya (@Tejasvi_Surya)
click me!