
ಬೆಂಗಳೂರು (ಆ.20): ಕರ್ನಾಟಕದಲ್ಲಿ ದಶಕಗಳಿಂದಲೂ ರಾಜಕೀಯವಾಗಿ ಬಿಸಿತುಪ್ಪವಾಗಿ ಪರಿಣಮಿಸಿದ್ದ ಒಳ ಮೀಸಲಾತಿ ವಿವಾದಕ್ಕೆ ರಾಜ್ಯ ಸರ್ಕಾರ ಕೊನೆಗೂ ಪರಿಹಾರ ಸೂಚಿಸಿದೆ. ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ಮಹತ್ವದ ನಿರ್ಧಾರದ ಪ್ರಕಾರ, ಪರಿಶಿಷ್ಟ ಜಾತಿಯಲ್ಲಿರುವ ಎಡಗೈ ಮತ್ತು ಬಲಗೈ ಎರಡೂ ಸಮುದಾಯಗಳಿಗೆ ತಲಾ 6% ಮೀಸಲಾತಿ ನೀಡಲು ತೀರ್ಮಾನಿಸಿದೆ. ಈ ನಿರ್ಧಾರವನ್ನು ನಾಳೆ ವಿಧಾನಸಭೆ ಅಧಿವೇಶನದಲ್ಲಿ ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ.
ಈ ಹಿಂದಿನ ನಾಗಮೋಹನ್ ದಾಸ್ ಸಮಿತಿ ವರದಿಯು ಎಡಗೈ ಸಮುದಾಯಕ್ಕೆ 6% ಮತ್ತು ಬಲಗೈ ಸಮುದಾಯಕ್ಕೆ 5% ಮೀಸಲಾತಿ ನೀಡಲು ಶಿಫಾರಸು ಮಾಡಿತ್ತು. ಈ ಅಸಮ ಪ್ರಮಾಣವು ಬಲಗೈ ಸಮುದಾಯದ ತೀವ್ರ ಆಕ್ಷೇಪಣೆಗೆ ಕಾರಣವಾಗಿತ್ತು. ಆದರೆ, ಹೊಸ ತೀರ್ಮಾನದಂತೆ, 18 ಜಾತಿಗಳನ್ನು ಒಳಗೊಂಡಿರುವ ಎಡಗೈ ಸಮುದಾಯ ಮತ್ತು 20 ಜಾತಿಗಳನ್ನು ಒಳಗೊಂಡಿರುವ ಬಲಗೈ ಸಮುದಾಯಕ್ಕೆ ಸಮಾನ ಮೀಸಲಾತಿ ದೊರೆಯಲಿದೆ. ಉಳಿದಂತೆ, 63 ಜಾತಿಗಳಿಗೆ (ಬೋವಿ, ಲಂಬಾಣಿ ಕೊರಮ ಕೊರಚ) 5% ಮೀಸಲಾತಿ ನೀಡಲು ಒಪ್ಪಿಗೆ ನೀಡಲಾಗಿದೆ.
ಸಂಪುಟದಲ್ಲಿ ನಡೆದ ಪ್ರಮುಖ ಚರ್ಚೆಗಳು
ಪರಮೇಶ್ವರ್ ಅವರು, ಆದಿ ಕರ್ನಾಟಕ (AK) ಮತ್ತು ಆದಿ ದ್ರಾವಿಡ (AD) ಪ್ರಮಾಣಪತ್ರಗಳ ಗೊಂದಲವನ್ನು ಬಗೆಹರಿಸುವಂತೆ ಸಲಹೆ ನೀಡಿದರು, ಏಕೆಂದರೆ ಕೆಲವು ಜಿಲ್ಲೆಗಳಲ್ಲಿ ಈ ಸಮುದಾಯಗಳು ಎಡಗೈ ಗುಂಪಿಗೆ ಸೇರಿದರೆ, ಇನ್ನು ಕೆಲವು ಜಿಲ್ಲೆಗಳಲ್ಲಿ ಬಲಗೈ ಗುಂಪಿಗೆ ಸೇರಿವೆ. ಈ ತೀರ್ಮಾನದ ಅಂತಿಮ ಆದೇಶವನ್ನು ಇನ್ನೆರಡು ದಿನಗಳಲ್ಲಿ ಹೊರಡಿಸುವ ಸಾಧ್ಯತೆ ಇದೆ. ಈ ನಿರ್ಧಾರವು ದಲಿತ ಸಮುದಾಯದ ಎರಡೂ ಗುಂಪುಗಳ ನಡುವಿನ ಅಸಮಾಧಾನ ತಗ್ಗಿಸಲು ಸಹಾಯ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.
ದಲಿತ ಎಡಗೈ ಜಾತಿಗಳು:
ಭಾಂಬಿ, ಅಸದರು, ಅಸೋಡಿ, ಚಮಡಿಯಾ, ಚಮರ್, ಚಂಬರ, ಚಮಗಾರ, ಹರಳಯ್ಯ, ಹರಳಿ, ಖಾಲ್ಪ, ಮಚಿಗಾರ, ಮೋಚಿಗಾರ, ಮಾದರ, ಮಾದಿಗ, ಮೋಚಿ, ಮುಚ್ಚಿ, ತೆಲುಗು ಮೋಚಿ, ಕಾಮತಿ ಮೋಚಿ, ರಾಣಿಗಾರ್, ರೋಹಿದಾಸ್, ರೋಹಿತ್, ಸಮ್ಗರ್, ಹಕ್ಕಳಯ್ಯ, ಧೋರ್ಕ, ಹಕ್ಕಳಯ್ಯ, ಧೋರ್ಕಾ ಹಲಸ್ವರ, ಹಸ್ಲ, ಕಡಯ್ಯನ್, ಕೆಪ್ಮರಿಸ್, ಕೊಲುಪುಲ್ವಂಡಿಯು, ಕುಟುಂಬನ್, ಮಾದಿಗ, ಮಾವಿಲನ್, ಮೊಗೇರ್, ಪಂಚಮ, ಪನ್ನಿಯಾಂಡಿ, ಪರಯ್ಯನ್, ಪರಯ, ಸಮಗಾರ, ಸಾಂಬನ್
ದಲಿತ ಬಲಗೈ ಜಾತಿಗಳು
ಅಣಮುಕ್, ಅರೆ ಮಾಳ, ಅರವ ಮಾಳ, ಬಲಗೈ, ಛಲವಾದಿ, ಚಲವಾದಿ, ಚನ್ನಯ್ಯ, ಪಲ್ಲನ್, ಹೊಲಯ, ಹೊಲೆಯ, ಹೊಲೆಯ, ಮಹ್ಯವಂಶಿ, ಧೇಡ್, ವಂಕರ್, ಮಾರು ವಂಕರ್, ಮಾಳ, ಮಲ ಹಣ್ಣಾಯಿ, ಮಾಳ ಜಂಗಮ, ಮಾಳ ಮಾಸ್ತಿ, ಮಲ ಮಾರಾಟ, ನೆಟ್ಕಣಿ, ಮಹಾರ್, ತರಲ್, ಧೇಳು, ದೇಗುಲ ಮೇಗುಂದ,ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕ.
ಇತರೆ 5% ಮೀಸಲಾತಿ ಒಳಪಡುವ ಜಾತಿಗಳು
ಬಕುಡ, ಬಂಜಾರ, ಲಂಬಾಣಿ, ಲಂಬಾಡ, ಲಂಬಾಡಿ, ಲಮಾಣಿ, ಸುಗಾಲಿ, ಸುಕಾಲಿ; ಭೋವಿ, ಓಡ್, ಒಡ್ಡೆ, ವಡ್ಡರ, ವಡ್ಡರ, ವಡ್ಡರ, ವಡ್ಡರ, ಕಲ್ಲುವಡ್ಡರ, ಬೋವಿ (ಬೆಸ್ತರಲ್ಲದ), ಮಣ್ಣುವಡ್ಡರ; ಎಲ್ಲಮಾಳ್ವಾರ್, ಯೆಲ್ಲಮ್ಮಲವಾಂಡ್ಲು; ಕೊರಚ, ಕೊರಚಾರ್; ಕೊರಮ, ಕೊರವ, ಕೊರವರ; ಲಿಂಗಾಡರ್; ಮುಕ್ರಿ; ಮುಂಡಾಲ; ಪಂಬದ; ಸಪಾರಿ; ತಿರ್ಗರ್, ತಿರ್ಬಂದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ