ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಬರೀ ಸುಳ್ಳು ಹೇಳಿಕೊಂಡು ಕೇಂದ್ರದ ಯೋಜನೆಗಳನ್ನೇ ತಮ್ಮದೆಂದು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದರು.
ಹಾವೇರಿ (ನ.10): ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಬರೀ ಸುಳ್ಳು ಹೇಳಿಕೊಂಡು ಕೇಂದ್ರದ ಯೋಜನೆಗಳನ್ನೇ ತಮ್ಮದೆಂದು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದರು.
ಇಂದು ಶಿಗ್ಗಾಂವಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಸಿದ್ದರಾಮಯ್ಯ ಸರ್ಕಾರ ರಾಜ್ಯದ ಜನರಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದಿದ್ರು. ಆದರೆ ಹತ್ತು ಕೆಜಿಯಲ್ಲಿ ಪ್ರಧಾನಿ ಮೋದಿಯವರು 5 ಕೊಡ್ತಿದ್ದಾರೆ. ಅದೇ 5 ಕೆಜಿ ಅಕ್ಕಿ ತಮ್ಮ ಸರ್ಕಾರ ಕೊಡುತ್ತಿರುವುದು ಎಂದು ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳುತ್ತಿದೆ. ಸುಳ್ಳು ಹೇಳೋದಕ್ಕೆ ನಿಮಗೆ ನಾಚಿಕೆ ಆಗೊಲ್ವ? ಈ ಹಿಂದೆ ಬೆಲೆ ಹೆಚ್ಚಳ ವಿಚಾರಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ್ದ ಇದೇ ಸಿದ್ದರಾಮಯ್ಯ ಇದೀಗ ಲಿಕ್ಕರ್, ಆಸ್ತಿ ನೋಂದಣಿ ಸೇರಿದಂತೆ ಅನೇಕ ವಸ್ತುಗಳ ದರ ಏರಿಕೆ ಮಾಡಿದ್ದಾರೆ. ದರ ಏರಿಕೆ ಬಡವರ ಕುರಿತು ದೊಡ್ಡದಾಗಿ ಮಾತನಾಡಿ ಇದೀಗ ದರ ಹೆಚ್ಚಿಸಿದ ದುರಾಹಂಕಾರದ ಸಿಎಂ ನೀವು. ಹಿಂದೆ ವರುಣಾದಿಂದ ಜನರು ಓಡಿಸಿದ್ದರು. ಅಲ್ಲಿಂದ ಬಾದಾಮಿಯಲ್ಲಿ ರಾಜಕೀಯ ಜೀವನ ಹಿಡಿದುಕೊಂಡಿದ್ರಿ ಅಲ್ಲಿಯೂ ಓಡಿಸಿದ್ರು. ನೆನಪಿಟ್ಟುಕೊಳ್ಳಿ ಮುಂದಿನ ದಿನಗಳಲ್ಲಿ ಎಲ್ಲ ಕಡೆಯೂ ಓಡಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
undefined
'ಮಿಸ್ಟರ್ ಕೆರೆ ಕಳ್ಳ ಚೆಲುವರಾಯಸ್ವಾಮಿ ನೀನೊಬ್ಬ ಖತರ್ನಾಕ್ ಕಳ್ಳ ಎಂಬುದು ರಾಜ್ಯಕ್ಕೆ ಗೊತ್ತು': ಜೆಡಿಎಸ್ ವಾಗ್ದಾಳಿ
ಇನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿ ಶ್ರೀರಾಮುಲು ವಿರುದ್ಧ ತನಿಖೆಗೆ ಶಿಫಾರಸು ಮಾಡಿರುವ ವಿಚಾರಕ್ಕೆ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಸಚಿವರು, ಯಡಿಯೂರಪ್ಪ ಅವರಿಗಾಗಲಿ, ಶ್ರೀರಾಮುಲು ಅವರಿಗಾಗಲಿ ಯಾವುದೇ ನೋಟಿಸ್ ಕೊಟ್ಟಿಲ್ಲ. ಆದರೂ ಇವರೇ ತಪ್ಪಿತಸ್ಥರೆಂದು ಹೇಗೆ ಹೇಳ್ತೀರಿ? ಯಾವ ಆಧಾರದ ಮೇಲೆ ಹೇಳ್ತೀರಿ? ಮುಡಾ ಕೇಸ್ ನಲ್ಲಿ ಸಿಎಂ ತಪ್ಪಿತಸ್ಥರು ಎಂದು ಉಚ್ಚ ನ್ಯಾಯಾಲಯ ಹೇಳಿದೆ. ನಿಮ್ಮನ್ನು ಸರಿಯಾಗಿ ಕೆಲಸ ಮಾಡಿಲ್ಲ ಅಂತ ತನಿಖೆಗೆ ಒಳಪಡಿಸಿದೆ. ಅದನ್ನು ಮುಚ್ಚಿಕೊಳ್ಳಲು ಇದೀಗ ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ತನಿಖೆಯ ಹೊಸ ನಾಟಕ ಶುರು ಮಾಡಿದ್ದಾರೆ. ನ್ಯಾಯಮೂರ್ತಿ ಕುನ್ನಾ ಅವರೇ ನೀವು ಕಮಿಷನ್ ಏಜೆಂಟ್ ಅಲ್ಲ, ಕಾಂಗ್ರೆಸ್ ಏಜೆಂಟ್ ಅಲ್ಲ ಎಂಬುದನ್ನು ತಿಳಿದುಕೊಳ್ಳಿ. ಕುನ್ನಾ ಕೊಟ್ಡಿದ್ದು ಮಧ್ಯಂತರ ವರದಿಯೂ ಅಲ್ಲ ಅದು ತಾತ್ಕಾಲಿಕ ವರದಿ ಅಷ್ಟೆ. ಸಿಎಂ ಸಿದ್ದರಾಮಯ್ಯ ಮುಡಾ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಅದನ್ನು ಮುಚ್ಚಿಕೊಳ್ಳಲು ಡೈವರ್ಟ್ ಮಾಡಲು ಹೊಸ ಹೊಸ ತಂತ್ರಗಳನ್ನು ಮಾಡುತ್ತಿದ್ದಾರೆ. ತಾವು ದ್ವೇಷ ಕಾರಣ ಮಾಡೊಲ್ಲ ಎಂದು ಹೇಳುತ್ತಾ ಅದನ್ನೇ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಯಾವುದೇ ಅಭಿವೃದ್ಧಿಯಾಗಿಲ್ಲ. ರೈತರಿಗೆ ಒಂದೊಳ್ಳೆ ಯೋಜನೆ ಇಲ್ಲ. ಅದರ ಬದಲು ವಕ್ಫ್ ಹೆಸರಿನಲ್ಲಿ ರೈತರ ಜಮೀನುಗಳನ್ನೇ ವಶಪಡಿಸಿಕೊಳ್ಳುವ ಹುನ್ನಾರ ನಡೆಸಿದೆ. ಇಂಥ ಸಮಸ್ಯೆಗೊಳಗಾದ ರೈತರಿಗೆ ಕಾನೂನಿನ ಮೂಲಕ ನ್ಯಾಯ ಒದಗಿಸಲು ನಾವು ಸಿದ್ಧವಾಗಿದ್ದೇವೆ
ಅನೇಕ ರೈತರಿಗೆ ವಕ್ಫ್ ನೋಟಿಸ್ ಕೊಟ್ಟಿದೆ, ಕೊಡುತ್ತಿದೆ. ನಿಮ್ಮ ಮನೆ ಉತಾರ್ ಆಗಾಗ ತೆಗೆಸಿಡಿ. ಈ ಕಾಂಗ್ರೆಸ್ ಯಾವಾಗ ಏನು ಮಾಡುತ್ತೋ ಗೊತ್ತಿಲ್ಲ. ರೈತರು, ಹಿಂದೂಗಳು ಸುರಕ್ಷಿತರಾಗಿಲು ಭರತ್ ಬೊಮ್ಮಾಯಿಗೆ ಮತ ನೀಡಿ ನಿಮ್ಮ ಆಸ್ತಿ ರಕ್ಷಣೆ ಮಾಡುವ ಕೆಲಸ ಮಾಡುತ್ತಾರೆ ಎಂದರು.